ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪಟ್ಟಣದ ನೈರ್ಮಲ್ಯ ಕಾಪಾಡಲು ಬದುಕನ್ನು ಮುಡುಪಾಗಿಡುವ ಪೌರಕಾರ್ಮಿಕರ ಶ್ರಮದಿಂದಾಗಿ ಪಟ್ಟಣದಲ್ಲಿ ರೋಗರುಜಿನ ನಿಯಂತ್ರಣದಲ್ಲಿವೆ. ನಗರವನ್ನು ಸ್ವಚ್ಛ, ಸುಂದರವಾಗಿ ಸೃಷ್ಟಿ ಮಾಡುವ ಶಕ್ತಿ ಪೌರ ಕಾರ್ಮಿಕರಲ್ಲಿದೆ ಎಂದು ಶಾಸಕರಾದ ಕೆ.ಹೆಚ್.ಪುಟ್ಟಸ್ವಾಮಿಗೌಡ ಶ್ಲಾಘಿಸಿದರು.ಶುಕ್ರವಾರ ನಗರದ ಶ್ರೀಸುಮಂಗಲಿ ಕಲ್ಯಾಣಮಂಟಪದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯ, ಸವಲತ್ತುಗಳನ್ನು ತಲುಪಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ಪೌರಕಾರ್ಮಿಕ ಸೇವೆಗೆ ಗೌರವಪಟ್ಟಣದ ನಾಗರಿಕರು ಆರೋಗ್ಯದಿಂದ ಇರುವುದಕ್ಕೆ ಪೌರಕಾರ್ಮಿಕರ ತ್ಯಾಗವೇ ಕಾರಣ. ಮಾಲಿನ್ಯ ಉಂಟಾದರೆ ಅದನ್ನು ಪೌರಕಾರ್ಮಿಕರು ಸರಿಪಡಿಸಬೇಕು. ಸಾರ್ವನಿಕ ಸ್ಥಳಗಳಲ್ಲಿ ಹಲೀಜನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸುತ್ತಾರೆ. ಹೀಗಿರುವಾಗ ಅವರೂ ನಮ್ಮಂತೆಯೇ ಮನುಷ್ಯರು ಎಂಬುದನ್ನು ಮರೆಯಬಾರದು. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ದಿನ ಆಚರಿಸಲಾಗುತ್ತಿದೆ ಎಂದರು.
ನಗರಸಭಾ ಆಯುಕ್ತೆ ಡಿ.ಎಂ.ಗೀತಾ ಮಾತನಾಡಿ, ನಗರದ ಜೀವನಾಡಿಳಾಗಿರುವ ಪೌರ ಕಾರ್ಮಿಕರಿಗೂ ಒಂದು ದಿನ ಇದೇ ಎಂಬುದು ಹಲವು ಜನರಿಗೇ ತಿಳಿದೇ ಇಲ್ಲ. ನಗರದ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ, ಸಮರ್ಪಕವಾಗಿ ಪರಿಸರವನ್ನು ಸ್ವಚ್ಚವಾಗಿಡುವ ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ, ಗೌರವಿಸುವುದೇ ಪೌರಕಾರ್ಮಿಕ ದಿನಾಚರಣೆ ಉದ್ದೇಶ ಎಂದರು.ಸಮಾಜ ಗೌರವಿಸಬೇಕು
ಸಮಾಜದಲ್ಲಿ ಪೌರ ಕಾರ್ಮಿಕರಿಗೂ ಒಂದು ನೆಲೆ-ಬೆಲೆ ಇದೆ ಎಂಬುದನ್ನು ತಿಳಿಸಲು ಹಾಗೂ ಎಲ್ಲರಂತೆ ಅವರು ಕೂಡ ಮಾನವರು ಎಂಬುದು ಸಾರ್ವಜನಿಕರಿಗೆ ಅರ್ಥ ಮಾಡಿಸಲೆಂದೇ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ. ಅವರನ್ನು ವೃತ್ತಿಯ ಮೂಲಕ ಅವರನ್ನು ಅಳೆಯದೆ ಸಾರ್ವಜನಿಕರು ಅವರಿಗೂ ಘನತೆ, ಗೌರವ, ಸ್ಥಾನ ನೀಡಬೇಕೆಂದು ಮನವಿ ಮಾಡಿದರು.ಶ್ರದ್ಧೆಯಿಂದ ಕಾಯಕ ಮಾಡಿ
ತಹಸೀಲ್ದಾರ್ ಮಹೇಶ್.ಎಸ್.ಪತ್ರಿ ಮಾತನಾಡಿ, ಪೌರಕಾರ್ಮಿಕರು ಯಾರೂ ಕಡೆಗಣಿಸಬಾರದು. ಪೌರಕಾರ್ಮಿಕರನ್ನೂ ಇತರರಂತೆ ಕಾಣಬೇಕು ಮತ್ತು ಗೌರವಿಸಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು ದೊಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯ. ಪೌರ ಕಾರ್ಮಿಕರು ಸಹ ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡಬೇಕು ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಕೆ.ಎಚ್.ಪಿ. ನಿರ್ವಹಣಾಕಾರ್ಯದರ್ಶಿ ಶ್ರೀನಿವಾಸಗೌಡ, ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಕೆ.ಹೆಚ್.ಪಿ.ಬಣದ ಪ್ರಮುಖ ಮುಖಂಡರುಗಳು, ಪೌರಕಾರ್ಮಿಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಪೌರ ಕಾರ್ಮಿಕ ಬಂಧುಗಳು, ಸಾರ್ವಜನಿಕರು ಭಾಗವಹಿಸಿದ್ದರು.