ಏ.14ರಂದು ಪೌರಕಾರ್ಮಿಕರ ಗೃಹಪ್ರವೇಶಕ್ಕೆ ಅನುವು: ಶಾಸಕಿ ಶಶಿಕಲಾ ಜೊಲ್ಲೆ

KannadaprabhaNewsNetwork |  
Published : Dec 10, 2024, 12:33 AM IST
ನಿಪ್ಪಾಣಿಯಲ್ಲಿ ನಗರೋತ್ಥಾನ ಯೋಜನೆಯಡಿ ಶಾಸಕಿ ಶಶಿಕಲಾ ಜೊಲ್ಲೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಸಂತೋಷ ಸಾಂಗಾವಕರ, ಜಯವಂತ ಭಾಟಲೆ, ವಿಲಾಸ ಗಾಡಿವಡ್ಡರ, ಸುನೀಲ ಪಾಟೀಲ, ಮತ್ತಿತರರು ಇದ್ದರು. | Kannada Prabha

ಸಾರಾಂಶ

ಡಾ.ಬಾಬಾಸಾಹೇಬ ಅಂಬೇಡ್ಕರ್‌ ಜನ್ಮದಿನ ಏ.14ರಂದು ಉದ್ಘಾಟಿಸಿ ಪೌರಕಾರ್ಮಿಕರ ಗೃಹಪ್ರವೇಶಕ್ಕೆ ಅನುವು ಮಾಡಿಕೊಳ್ಳಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಭರವಸೆ

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನ ತಂದು ಸುಮಾರು 2 ಎಕರೆ ಜಾಗದಲ್ಲಿ 86 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅವುಗಳಲ್ಲಿ 46 ವಸತಿಗಳು ಪೂರ್ಣಗೊಂಡಿದ್ದು ಡಾ.ಬಾಬಾಸಾಹೇಬ ಅಂಬೇಡ್ಕರ್‌ ಜನ್ಮದಿನ ಏ.14ರಂದು ಉದ್ಘಾಟಿಸಿ ಪೌರಕಾರ್ಮಿಕರ ಗೃಹಪ್ರವೇಶಕ್ಕೆ ಅನುವು ಮಾಡಿಕೊಳ್ಳಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ನಗರೋತ್ಥಾನದಡಿ ಪರಿಶಿಷ್ಠ ಜಾತಿಯ ₹1.65 ಕೋಟಿ ಅನುದಾನ, ಪರಿಶಿಷ್ಟ ಪಂಗಡದ ₹70.90 ಲಕ್ಷ ಅನುದಾನ, ಇತರೆ ಬಡಜನರ ಕಲ್ಯಾಣದ ₹92.44 ಲಕ್ಷ ಅನುದಾನ ಹೀಗೆ ಒಟ್ಟು ಸುಮಾರು ₹3.28 ಕೋಟಿಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾದ ಮನೆಗಳ ಬಡಾವಣೆಯಲ್ಲಿ ₹52.91 ಲಕ್ಷ ಅನುದಾನದಲ್ಲಿ ಆಂತರಿಕ ರಸ್ತೆ ಮತ್ತು ಚರಂಡಿ ನಿರ್ಮಾಣ, ವಾರ್ಡ್ ನಂ.27ರ ಭೀಮನಗರದಲ್ಲಿ ವಿದ್ಯಾ ಮಂದಿರದಿಂದ ಉರ್ದು ಶಾಲೆಯವರೆಗೆ ₹20 ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ, ವಾರ್ಡ್ ನಂ.31ರ ತಹಶೀಲ್ದಾರ ಬಡಾವಣೆಯಲ್ಲಿ ₹20 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ, ವಾರ್ಡ್ ನಂ.20ರ ಶಿಂಧೆ ನಗರದಲ್ಲಿ ₹20 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ, ವಾರ್ಡ್ ನಂ.24ರ ಭೀಮನಗರದಲ್ಲಿ ₹20 ಲಕ್ಷ ಅನುದಾನದಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.14ರ ಜತ್ರಾಟ್‌ವೇಸ್‌ನಲ್ಲಿ ₹40 ಲಕ್ಷ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, ವಾರ್ಡ್ ನಂ.12ರ ಗೋಸಾವಿ ಗಲ್ಲಿಯಲ್ಲಿ ₹15.90 ಲಕ್ಷ ಅನುದಾನದಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.11ರ ಆಶ್ರಯನಗರದ ಗೋಸಾವಿ ವಸಾಹತ್ತಿನಲ್ಲಿ ₹15 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.12ರ ಆಂದೋಲನನಗರದ ಗೋಸಾವಿ ಬಡಾವಣೆಯಲ್ಲಿ ₹20.44 ಲಕ್ಷ ಅನುದಾನದಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.11ರ ಆಶ್ರಯನಗರದಲ್ಲಿ ₹28 ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ, ವಾರ್ಡ್ ನಂ.21ರಲ್ಲಿ ಟಿಪ್ಕೋ ಅಪಾರ್ಟ್‌ಮೆಂಟ್‌ದಿಂದ ಮಗದುಮ ಗಲ್ಲಿ, ಶೇತವಾಳ ಗಲ್ಲಿ, ಮಾನವಿ ಗಲ್ಲಿ, ತೇಲಿ ಗಲ್ಲಿಯಲ್ಲಿ ₹29 ಲಕ್ಷ ಅನುದಾನದಲ್ಲಿ ಡಾಂಬರೀಕರಣ, ವಾರ್ಡ್ ನಂ.22ರ ನಾಗೋಬಾ ಗಲ್ಲಿ, ಗವಳಿ ಗಲ್ಲಿಯಲ್ಲಿ ₹15 ಲಕ್ಷ ಅನುದಾನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಉಪಾಧ್ಯಕ್ಷ ಸಂಜಯ ಸಾಂಗಾವಕರ, ಸ್ಥಾಯಿ ಸಮಿತಿ ಚೇರಮನ್ ಡಾ.ಜಸರಾಜ ಗಿರೆ, ಸದಸ್ಯ ರಾಜೇಂದ್ರ ಗುಂದೇಶಾ, ವಿಲಾಸ್ ಗಾಡಿವಡ್ಡರ, ಜಯವಂತ ಭಾಟಲೆ, ಸುರೇಖ ದೇಸಾಯಿ-ಸರ್ಕಾರ, ಸುಜಾತಾ ಕದಮ, ಪ್ರಭಾವತಿ ಸೂರ್ಯವಂಶಿ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ರಾಜೇಶ ಕೊಠಡಿಯಾ, ಬಂಡಾ ಘೋರ್ಪಡೆ, ಪ್ರಣವ ಮಾನವಿ ಮೊದಲಾದವರು ಸಹಿತ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ