ಪೌರ ಕಾರ್ಮಿಕರ ಸೇವೆ ಅನನ್ಯ: ಅಮರೀಶ್ ಜಿ.ಕೆ.

KannadaprabhaNewsNetwork |  
Published : Oct 10, 2026, 02:15 AM IST
ಕೊಟ್ಟೂರು ಪಟ್ಟಣ ಪಂಚಾಯಿತಿ  ಆಡಳಿತದಿಂದ  ಪೌರ ಕಾರ್ಮಿಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  | Kannada Prabha

ಸಾರಾಂಶ

ಪೌರ ಕಾರ್ಮಿಕರು ಅತೀ ಮುಖ್ಯ ಸೇವಾ ಕರ್ತರಾಗಿದ್ದು ತಮ್ಮ ಕೆಲಸದ ಜೊತೆಗೆ ಅವರುಗಳು ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳಬೇಕು

ಕೊಟ್ಟೂರು: ಪೌರಕಾರ್ಮಿಕರು ಇಲ್ಲದಿದ್ದರೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಸವಾಲಿನ ಕೆಲಸವಾಗುತ್ತದೆ. ಇದರ ಜೊತೆಗೆ ಸಾರ್ವಜನಿಕರ ಆರೋಗ್ಯ ಕಾಪಾಡಲು ಸಹ ಪೌರ ಕಾರ್ಮಿಕರ ಸ್ವಚ್ಛತಾ ಕಾರ್ಯ ಖಂಡಿತ ಸಹಾಯ ಮಾಡುತ್ತದೆ ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ, ತಹಶೀಲ್ದಾರ್ ಅಮರೀಶ್ ಜಿ.ಕೆ. ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಆಡಳಿತದ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು ಒಂದು ದಿನ ಪೌರ ಕಾರ್ಮಿಕರು ಕೆಲಸ ಮಾಡದಿದ್ದರೆ ಎಲ್ಲಾ ಬಗೆಯ ಅಸ್ವಸ್ಥತೆ ಕಂಡುಬರುತ್ತದೆ. ಪೌರ ಕಾರ್ಮಿಕರು ಅತೀ ಮುಖ್ಯ ಸೇವಾ ಕರ್ತರಾಗಿದ್ದು ತಮ್ಮ ಕೆಲಸದ ಜೊತೆಗೆ ಅವರುಗಳು ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರಲ್ಲದೇ ಸರ್ಕಾರದಿಂದ ಪೌರಕಾರ್ಮಿಕರಿಗೆ ದೊರಕುವ ಎಲ್ಲಾ ಬಗೆಯ ಸೌಲಭ್ಯಗಳನ್ನು ಸ್ಥಳೀಯ ಆಡಳಿತದಿಂದ ಒದಗಿಸಿ ಕೊಡುತ್ತೇವೆ ಎಂದು ಹೇಳಿದರು.

ಮುಖ್ಯಾಧಿಕಾರಿ ಎ. ನಸುರುಲ್ಲಾ ಮಾತನಾಡಿ ಪಟ್ಟಣದಲ್ಲಿನ ಪೌರ ಕಾರ್ಮಿಕರಿಗೆ ವಸತಿ ಇಲ್ಲವೇ ನಿವೇಶನ ರಹಿತ ಪೌರ ಕಾರ್ಮಿಕರಿಗೆ ಪಟ್ಟಣದಲ್ಲಿನ ಸರ್ವೆ ನಂ. 529/ಬಿ 2.93 ಎಕರೆ ಪೈಕಿ 1.46 ಎಕರೆ ಜಾಗವನ್ನು ಗುರುತಿಸಲಾಗಿದ್ದು ಸರ್ವೇ ನಕ್ಷೆ ಸಿದ್ದಪಡಿಸಲಾಗಿದೆ. ಈ ಸಂಬಂಧ ನಿವೇಶನ ನೀಡಲು ಮತ್ತು ಪೌರ ಕಾರ್ಮಿಕರಿಗೆ ಹಂಚಿಕೆ ಮಾಡಲು ಇದಕ್ಕೆಂದೇ ತುರ್ತು ಸಭೆ ಕರೆದು ಅನುಮತಿ ಅನುಮೋಧನೆ ಪಡೆಯಲಾಗಿದೆ ಎಂದರು.

ಕಳೆದ ಸೆ. 25 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಂದು ವಿಜಯನಗರ ಜಿಲ್ಲೆಯಿಂದ ಉತ್ತಮ ಪೌರ ಕಾರ್ಮಿಕರಾಗಿ ಆಯ್ಕೆಗೊಂಡು ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸಿ ಔತಣ ಕೂಟದಲ್ಲಿ ಭಾಗವಹಿಸಿದ್ದ ಕುರುಬರ ಮಹಾದೇವ್ ಅವರನ್ನು ಸನ್ಮಾನಿಸಲಾಯಿತು. ಎಲ್ಲಾ ಪೌರ ಕಾರ್ಮಿಕರಿಗೆ ಸಮವಸ್ತ್ರ ನೀಡಲಾಯಿತು.

ಎಂಜಿನಿಯರ್ ಜಿ.ಎಂ. ಸಿದ್ದೇಶ್ವರಸ್ವಾಮಿ, ಕಿರಿಯ ಆರೋಗ್ಯ ನಿರೀಕ್ಷಕಿ ಅನುಷ ಎಸ್.ಓ. ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡು ಕಂಡ ಅಪ್ರತಿಮ ಶಿವಯೋಗಿಗಳಲ್ಲಿ ಕುಮಾರ ಶಿವಯೋಗಿಗಳು ಒಬ್ಬರು: ಶೇಖರಯ್ಯ ಶಾಸ್ತ್ರೀಗಳು
ಬೆಣಚಮಟ್ಟಿ ಗ್ರಾಮದ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ