ನಾಗರಿಕ ಬಂದೂಕು ತರಬೇತಿ ಶಿಬಿರ ಆರಂಭ

KannadaprabhaNewsNetwork |  
Published : Sep 16, 2025, 12:04 AM IST
15ಬಂದೂಕು | Kannada Prabha

ಸಾರಾಂಶ

ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ಸೋಮವಾರ ಬೆಳಿಗ್ಗೆ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದಲ್ಲಿ ಉದ್ಘಾಟಿಸಲಾಯಿತು.

ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ಸೋಮವಾರ ಬೆಳಿಗ್ಗೆ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದಲ್ಲಿ ಉದ್ಘಾಟಿಸಲಾಯಿತು. ಶಿಬಿರವನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಹರಿರಾಮ್‌ ಶಂಕರ್‌ ಅವರು ಉದ್ಘಾಟಿಸಿ ಬಂದೂಕು ತರಭೇತಿಯ ಬಗ್ಗೆ ಮಾಹಿತಿ ನೀಡಿದರು.ಉದ್ಘಾಟನಾ ಸಮಾರಂಭದಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಉಪಾಧೀಕ್ಷ ತಿಮ್ಮಪ್ಪ ಗೌಡ ಮತ್ತು ಸಶಸ್ತ್ರ ಮೀಸಲು ಆರಕ್ಷಕ ನಿರೀಕ್ಷಕರಾದ ರವಿ ಕುಮಾರ್‌ ಉಪಸ್ಥಿತರಿದ್ದರು.

ಒಟ್ಟು 5 ದಿನಗಳ ಅವಧಿಯಲ್ಲಿ ನಡೆಯುವ ಈ ತರಬೇತಿಗೆ ಒಟ್ಟು 195 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಉಡುಪಿ ಉಪ ವಿಭಾಗದಿಂದ 59, ಕಾರ್ಕಳ ಉಪ ವಿಭಾಗದಿಂದ 55 ಮತ್ತು ಕುಂದಾಪುರ ಉಪವಿಭಾಗದಿಂದ 81 ಅಭ್ಯರ್ಥಿಗಳು ಈ ತರಭೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉಡುಪಿಯಲ್ಲಿ ಉಡುಪಿ ಉಪವಿಭಾಗದ ತರಭೇತಿ, ಕಾರ್ಕಳ ಉಪ ವಿಭಾಗದ ತರಬೇತಿ ಹೆಬ್ರಿಯಲ್ಲಿ ಮತ್ತು ಕುಂದಾಫುರ ಉಪ ವಿಭಾಗದ ತರಭೇತಿ ಕುಂದಾಪುರದಲ್ಲಿ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿಯಲ್ಲಿ 6 ಸಾವಿರ ಮಹಿಳೆಯರಿಂದ ಶಿವಬಸವ ಬುತ್ತಿ ಮೆರವಣಿಗೆ
ಪ್ರಾಣಿಪ್ರಿಯರನ್ನು ಆಕರ್ಷಿಸಿದ ಶ್ವಾನ ಪ್ರದರ್ಶನ