ಸರಕಾರಿ ಸೌಲಭ್ಯ ಪಡೆಯಲು ಹಕ್ಕೋತ್ತಾಯ ಮಂಡಿಸಿ: ಶಾಕೀರ ಸನದಿ

KannadaprabhaNewsNetwork |  
Published : Feb 11, 2025, 12:49 AM IST
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಮುಲ್ಲಾ ಅಸೋಷಿಯೇಶನ್ (ಕೆಎಂಎ) ವತಿಯಿಂದ  ರಾಜ್ಯಮಟ್ಟದ ಮುಲ್ಲಾ ಸಮಾವೇಶ ಉದ್ಘಾಟಿಸಲಾಯಿತು | Kannada Prabha

ಸಾರಾಂಶ

ಸಾಮಾಜಿಕ, ಆರ್ಥಿಕವಾಗಿ ಸಬಲಗೊಳ್ಳಲು ಕರ್ನಾಟಕ ಮುಲ್ಲಾ ಅಸೋಷಿಯೇಶನ್ ಶ್ರಮಿಸುತ್ತಿರುವುದು ಶ್ಲಾಘನೀಯ

ಕನ್ನಡಪ್ರಭ ವಾರ್ತೆ ವಿಜಯಪುರ

ಮುಲ್ಲಾ ಎಂಬುದೊಂದು ಶ್ರೇಷ್ಠ ಪದವಾಗಿದ್ದು, ಸಮಾಜದಲ್ಲಿ ಉನ್ನತ ಗೌರವ ಹೊಂದಿದವನಾಗಿದ್ದಾನೆ. ಸಾಮಾಜಿಕ, ಆರ್ಥಿಕವಾಗಿ ಸಬಲಗೊಳ್ಳಲು ಕರ್ನಾಟಕ ಮುಲ್ಲಾ ಅಸೋಷಿಯೇಶನ್ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಮುಲ್ಲಾ ಅಸೋಷಿಯೇಶನ್ (ಕೆಎಂಎ) ವತಿಯಿಂದ ರಾಜ್ಯಮಟ್ಟದ ಮುಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಸಮಾಜದ ಜೊತೆಗೆ ಉತ್ತಮ ಒಡನಾಟ ಹೊಂದುವುದರ ಜೊತೆಗೆ ಸಮಾಜದ ಪ್ರಗತಿಗೆ ಒಗ್ಗಟ್ಟಾಗಬೇಕು. ಸರಕಾರಿ ಸೌಲಭ್ಯ ಪಡೆಯಲು ಹಕ್ಕೋತ್ತಾಯ ಮಂಡಿಸಬೇಕು ಎಂದು ಹೇಳಿದರು.

ಶಾಸಕ ವಿಠ್ಠಲ ಕಟಕದೊಂಡ ಹಾಗೂ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮುಲ್ಲಾ ಸಮುದಾಯದವರಿಗೆ ಈಗಲು ಬಹಳಷ್ಟು ಗೌರವವಿದೆ. ಊರಿನ ಪ್ರತಿಯೊಂದು ಕಾರ್ಯದಲ್ಲಿ ಮುಂಚುಣಿಯಲ್ಲಿದ್ದುಕೊಂಡು ಸಮಾಜದಲ್ಲಿ ಒಳಿತು ಕಾಪಾಡುತ್ತಿದ್ದಾರೆ. ಮುಲ್ಲಾ ಸಮುದಾಯದ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಕರ್ನಾಟಕ ಅಹ್ಲೇ ಸುನ್ನತ ಜಮಾತ್‌ ರಾಜ್ಯಾಧ್ಯಕ್ಷ ಹಜರತ್ ಸಯ್ಯದ ಮೊಹಮ್ಮದ ತನ್ವೀರಪೀರಾ ಹಾಶ್ಮಿ ಆಶೀರ್ವಚನ ನೀಡಿ, ಮುಸ್ಲಿಂ ಸಮುದಾಯದಲ್ಲಿ ಮುಲ್ಲಾ ಸಮಾಜಕ್ಕೆ ಸಾಕಷ್ಟು ಗೌರವವಿದೆ. ಮುಲ್ಲಾ ಎಂದರೆ ಅದೊಂದು ಉತ್ಕೃಷ್ಟ ಪದವಾಗಿದೆ. ಉತ್ತಮ ನಾಗರಿಕ ಎಂಬುದು ಸೂಚಿಸುತ್ತದೆ. ಸಮಾಜ ಸಂಘಟನೆಗೆ ಸದಾ ಬೆಂಬಲ ಇರುತ್ತದೆ. ಸಾಮಾಜಿಕ, ಆರ್ಥಿಕ ರಾಜಕೀಯ ಶಕ್ತಿಯಾಗಿ ಬೆಳೆಯಲು ಪ್ರತಿಯೊಬ್ಬರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು. ಬೆಳೆಸುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಗುಳೆದಗುಡ್ಡ ಕಿಬ್ಲಾದ ಮುಫ್ತಿ ಮೊಹಮ್ಮದ ಅಬೂಬಕರ ಆಶ್ರಫಿ ಖಾದ್ರೀಸಾಹೇಬ್, ಮನಗೂಳಿಯ ಹಜರತ್ ಸೈಯ್ಯದಷಾ ಫೀರ ಖಾದ್ರಿ ಪೀಠಾಧೀಪತಿ ಡಾ. ಫೈರೋಜಹುಸೇನಿ ಆಶೀರ್ವಚನ ನೀಡಿದರು.

ಮಾಜಿ ಶಾಸಕ ರಾಜು ಆಲಗೂರ, ಕಾಂಗ್ರೆಸ್ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ, ಕರವೇ ರಾಜ್ಯ ಉಪಾಧ್ಯಕ್ಷ ಎಂ.ಸಿ.ಮುಲ್ಲಾ, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿದರು.

ಅಧ್ಯಕ್ಷತೆ ಎಂ.ಎ.ರಾಜ್ಯಾಧ್ಯಕ್ಷ ಮಹಿಬೂಬ ಮುಲ್ಲಾ ಬಳಬಟ್ಟಿ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಹಾಜನ್ ಮುಲ್ಲಾ, ಚಪ್ಪರಬಂದ ಸಮಾಜದ ರಾಜ್ಯಾಧ್ಯಕ್ಷ ಸಲೀಮ ಫಿರಜಾದೆ, ಜಾಫರ್ ಅಂಗಡಿ, ಎಂ.ಎ.ಖತೀಬ, ಡಾ.ಶಮಶರಲಿ ಮುಲ್ಲಾ, ಖುದಾನಸಾಬ ಮುಲ್ಲಾ, ಮೀರಾಸಾಬ ಮುಲ್ಲಾ, ಮುಸ್ತಾಕ ಮುಲ್ಲಾ, ರಸೂಲ್ ಮುಲ್ಲಾ, ಮುಸ್ತಾಕಹಮ್ಮದ ಮುಲ್ಲಾ, ದಾವಲಸಾಬ ಮುಲ್ಲಾ, ಮುಬಾರಕ ಮುಲ್ಲಾ, ಎಸ್.ಎಂ.ಮುಲ್ಲಾ, ಎಚ್.ಡಿ.ಮುಲ್ಲಾ, ಎಂ.ಆರ್.ಮುಲ್ಲಾ, ಇರ್ಷಾದ ಮುಲ್ಲಾ, ಅಮೀನಸಾಬ ಮುಲ್ಲಾ, ಎಂ.ಐ.ಮುಲ್ಲಾ, ಇಮಾಮಸಾಬ ಮುಲ್ಲಾ, ಬಂದೇನವಾಜ ಮುಲ್ಲಾ, ಎಚ್.ಕೆ.ಮುಲ್ಲಾ, ಮುನಾಫ ಮುಲ್ಲಾ, ಡಾ. ಎಂ ಎಂ ಮುಲ್ಲಾ, ಜಾಫರ್ ಮುಲ್ಲಾ, ನಬಿರಸೂಲ ಮುಲ್ಲಾ, ಮಹಿಬೂಬ ಮುಲ್ಲಾ ಸೇರಿ ಇತರರಿದ್ದರು. ರಾಜ್ಯ ಉಪಾಧ್ಯಕ್ಷ ಇಮ್ತಿಯಾಜ ಮುಲ್ಲಾ, ಅಸೋಷಿಯೇಶನ್ ನಡೆದು ಬಂದ ದಾರಿ ಕುರಿತು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!