ಹುಬ್ಬಳ್ಳಿ: ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯುವುದು ತಪಸ್ಸು ಇದ್ದಂತೆ. ಗುರಿಯ ಬಗ್ಗೆ ಸ್ಪಷ್ಟತೆ ಇದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹು-ಧಾ. ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ವಿದ್ಯಾರ್ಥಿಗಳಲ್ಲಿ ಸಮಯಪ್ರಜೆ, ಅರ್ಹತೆ, ಪರಿಪೂರ್ಣ ವ್ಯಕ್ತಿತ್ವ ಹಾಗೂ ಕೃತಜ್ಞತಾಭಾವ ಮುಖ್ಯ. ನೀವು ಸಮಯವನ್ನು ಗೌರವಿಸಿದಾಗ ಅದು ನಿಮ್ಮನ್ನು ಗೌರವಿಸುತ್ತದೆ. ನಿಮ್ಮಲ್ಲಿ ಅರ್ಹತೆ ಇರಬೇಕು. ಅದನ್ನು ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ವಿಯಾಗಲು ಇರುವುದೊಂದೇ ಅವಕಾಶ. ಅದಕ್ಕೆ ಪರಿಶ್ರಮ ಮುಖ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಕಲೆ, ಕೃತಜ್ಞತಾಭಾವ ಬೆಳೆಸಿಕೊಳ್ಳಬೇಕು. ಅಂದಾಗ ನಿಮ್ಮಲ್ಲಿ ಸರಳತೆ ಬೆಳೆಯುತ್ತದೆ. ನಿಮ್ಮಲ್ಲಿ ಸ್ಪಷ್ಟತೆ ಮುಖ್ಯ. ಆಗ ಯೋಜನೆ ರೂಪಿಸಲು. ನಿಗದಿತ ಗುರಿ ತಲುಪಲು ಸಾಧ್ಯ. ಎಲ್ಲರಿಗಿಂತ ನಾವೇ ಉತ್ತಮ ಎಂದುಕೊಂಡು ನಡೆದರೆ ಅದು ಜೀವನದ ಅಂತ್ಯದ ಆರಂಭ ಎಂದು ಹೇಳಿದರು.ಸ್ವರ್ಣಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಜೀವನದಲ್ಲಿ ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಬೇಕು. ಕಂಡ ಕನಸು ನನಸಾಗಿಸಿಕೊಳ್ಳಲು ಕಠಿಣ ಪರಿಶ್ರಮ ಪಡಬೇಕು. ನಮ್ಮ ಗುರಿ ತಲುಪುವ ಮೂಲಕ ಸಾಧನೆ ಮಾಡಬೇಕು. ಮಕ್ಕಳ ಕಲಿಕೆಗೆ ಪಾಲಕರ ಪ್ರೋತ್ಸಾಹ, ಬೆಂಬಲ ಮುಖ್ಯ ಎಂದರು.
ಟೆಕ್ ಸ್ಟೋರ್ ಸಂಸ್ಥಾಪಕ ಆನಂದ ಬೈದ್, ಲಕ್ಷ್ಮಿತಾ ಬೈದ್, ವಿಶಾಖಾ ಕುಲಕರ್ಣಿ, ಕೇಶವ ಚಿಕ್ಕಮಠ, ಅಕ್ಷತಾ ಸೇರಿದಂತಿ ವಿದ್ಯಾರ್ಥಿಗಳು, ಅವರ ಪಾಲಕರು ಮೊದಲಾದವರಿದ್ದರು. ಪ್ರತಿಭಾ ಚೋಪ್ರಾ ಪರಿಚಯಿಸಿದರು.