ಕನ್ನಡಪ್ರಭ ವಾರ್ತೆ ಮಂಗಳೂರು
ಐಡಿಯಲ್ ಐಸ್‌ಕ್ರೀಮ್ ಹಾಗೂ ಪ್ರೋಫೆಷನಲ್ ಕೊರಿಯರ್, ಹೋಮ್ ಲ್ಯಾಂಡ್ ಹಾಲಿಡೇಸ್, ಬಂಡೀಪುರ ಹೆರಿಟೇಜ್ ವಿಲೇಜ್ ರೆಸೋರ್ಟ್, ದಮ್‌ದಾರ್ ಬಿರಿಯಾನಿ ಹೌಸ್‌ನ ಸಹ ಪ್ರಾಯೋಜಕತ್ವದಲ್ಲಿ ಯುನೈಟೆಡ್ ಕ್ರಿಕೆಟ್ ಲೀಗ್ ಅಂಡರ್ ಆರ್ಮ್ ಸೀಸನ್-೫ ನಗರದ ಉರ್ವ ಮೈದಾನ ಮತ್ತು ಬಂಟ್ವಾಳದ ಎಸ್‌ವಿಎಸ್ ಮೈದಾನದಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಯುನೈಟೆಡ್ ಕ್ರಿಕೆಟ್ ಲೀಗ್ ಪಂದ್ಯಾಟ ಮೊದಲ ದಿನ ಉರ್ವದ ಮೈದಾನದಲ್ಲಿ ನಡೆಯಿತು. ಎರಡನೇ ದಿನ ಬಂಟ್ವಾಳದ ಎಸ್‌ವಿಎಸ್ ಕಾಲೇಜಿನ ಮೈದಾನದಲ್ಲಿ ನಡೆಯಿತು.ಈ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಸಪ್ತಮಿ ವಾರಿಯರ್ಸ್, ಡೆಡ್ಲಿ ಪ್ಯಾಂಥರ್ಸ್, ರೈಸಿಂಗ್ ಸ್ಟರ್ಸ್ ಮಂಗಳೂರು, ಎಂಜಾಯ್ ಟೈಟಾನ್ಸ್, ಕಾರ್ಕಳ ಸೂಪರ್ ಕಿಂಗ್ಸ್, ಕಾರ್ತಿಕ್ ಇಲೆವೆನ್, ಕ್ಲಾಸಿಕ್ ಸಾಲ್ಮರ ಕಾರ್ಕಳ, ಕಾರ್‌ಸ್ಟ್ರೀಟ್ ಫ್ರೆಂಡ್ಸ್ ಮಂಜೇಶ್ವರ, ಜೈಕಾರ್ ಸ್ಟ್ರೆಂಕರ್ಸ್ ಮೂಡುಬಿದಿರೆ, ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ತಂಡಗಳು ಭಾಗವಹಿಸಿದವು.
ಪಂದ್ಯಾಟದ ಬೆಸ್ಟ್ ಬೌಲರ್ ಆಗಿ ಕ್ಲಾಸಿಕ್ ಸಾಲ್ಮರ ಕಾರ್ಕಳದ ಪ್ರತೀಕ್ ಪ್ರಭು, ಬೆಸ್ಟ್ ಬ್ಯಾಟ್ಸ್‌ಮೆನ್ ಆಗಿ ಕಾರ್‌ಸ್ಟ್ರೀಟ್ ಫ್ರೆಂಡ್ಸ್ ಮಂಜೇಶ್ವರದ ರಜತ್ ಶೆಣೈ, ಸರಣಿ ಶ್ರೇಷ್ಠ ಆಗಿ ಕ್ಲಾಸಿಕ್ ಸಾಲ್ಮರ ಕಾರ್ಕಳದ ಮಹೇಶ್ ಶೆಣೈ, ಉದಯೋನ್ಮುಖ ಆಟಗಾರನಾಗಿ ಕಾರ್‌ಸ್ಟ್ರೀಟ್ ಫ್ರೆಂಡ್ಸ್ ಮಂಜೇಶ್ವರದ ಪವನ್ ಭಗತ್ ಹಾಗೂ ಬೆಸ್ಟ್ ಫೀಲ್ಡರ್ ಆಗಿ ಕ್ಲಾಸಿಕ್ ಸಾಲ್ಮರ ಕಾರ್ಕಳದ ಸುನಿಲ್ ಕಾಮತ್ ಪ್ರಶಸ್ತಿಗಳನ್ನು ಸ್ವೀಕರಿದರು.ಯುನೈಟೆಡ್ ಕ್ರಿಕೆಟ್ ಲೀಗ್ ಅಂಡರ್ ಆರ್ಮ್ ಸೀಸನ್-೫ರ ವಿಜೇತರಾಗಿ ಕ್ಲಾಸಿಕ್ ಸಲ್ಮಾರ್ ಕಾರ್ಕಳ, ರನ್ನರ್ಸ್ ಆಗಿ ಜೈಕಾರ್ ಸ್ಟ್ರೈಕರ್ಸ್, ೨ನೇ ರನ್ನರ್ಸ್ ಆಗಿ ಕಾರ್‌ಸ್ಟ್ರೀಟ್ ಫ್ರೆಂಡ್ಸ್ ಮಂಜೇಶ್ವರ ಬಹುಮಾನವನ್ನು ಪಡೆದುಕೊಂಡರು.
ವಿಜೇತರಿಗೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್‌ಕಾರ್, ಬಂಟ್ವಾಳದ ಎಸ್‌ವಿಎಸ್ ದೇವಳ ಶಿಕ್ಷಣ ಸಂಸ್ಥೆಗಳ ಸಂಚಾಲಕ ಭಾಮಿ ನಾಗೇಂದ್ರ ಶೆಣೈ,ಜೈಹಿಂದ್ ಕ್ರಿಕೆಟರ್ಸ್ ಕಾರ್ಕಳದ ಮಾಜಿ ಆಟಗಾರ ಬಿ.ಎಚ್. ಗಿರೀಶ್ ಪೈ ಬಹುಮಾನ ವಿತರಿಸಿದರು.ಈ ಸಂದರ್ಭ ಯುನೈಟೆಡ್ ಕ್ರಿಕೆಟ್ ಲೀಗ್ ಸಂಘಟಕರಾದ ವಿವೇಕ್ ಹೆಗ್ಡೆ, ಕೊಂಚಾಡಿ ನರಸಿಂಹ ಶೆಣೈ, ಕಾರ್ತಿಕ್ ಪ್ರಭು, ನಾಗೇಶ್ ಶಶಾಂಕ್, ಅಜಿತ್ ಭಟ್, ಪವನ್ ಭಕ್ತ ಮತ್ತಿತರು ಇದ್ದರು.