ಕನ್ನಡಪ್ರಭ ವಾರ್ತೆ ಉಡುಪಿ
ಖ್ಯಾತ ಪರಿಸರವಾದಿ ಡಾ. ರವೀಂದ್ರನಾಥ್ ಶಾನ್‌ಭಾಗ್, ರಾಷ್ಟ್ರೀಯ ಜೇಸಿ ತರಬೇತುದಾರ ರಾಜೇಂದ್ರ ಭಟ್, ಇತರ ಗಣ್ಯರಾದ ಅವಿನಾಶ್ ಕಾಮತ್, ರಾಮಕೃಷ್ಣ ಕಾಮತ್, ವಿಕ್ರಮ್ ಹೆಗ್ಡೆ, ಡಾ. ಎಂ. ಶಶಿಕುಮಾರ್ ಆಚಾರ್ ಮತ್ತು ಹೊಸಬೆಳಕು ಸೇವಾ ಟ್ರಸ್ಟ್ ನ ಸ್ಥಾಪಕಿ ತನುಲ ತರುಣ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಯುವ ಪ್ರತಿಭೆ ಪ್ರಥಮ್ ಕಾಮತ್ ಕಟಪಾಡಿ ಇವರಿಂದ ಆಶ್ರಮವಾಸಿಗಳ ಮನೋರಂಜನೆಗಾಗಿ
ಜಾದೂ ಪ್ರದರ್ಶನ ನಡೆಯಿತು. ನಂತರ ಆಶ್ರಮವಾಸಿಗಳ ಜೊತೆಗೆ ಬೆರೆತ 100 ಕ್ಕೂ ಅಧಿಕ ಶಿಬಿರಾರ್ಥಿಗಳು 300 ಕ್ಕೂ ಅಧಿಕ ಆಮೆ ಮಣ್ಣಿನ ಕಲಾಕೃತಿಗಳನ್ನು ರಚಿಸಿದರು.ಆವೆ ಮಣ್ಣಿನ ಕಲಾಕೃತಿ ರಚನಾ ಮತ್ತು ತರಬೇತಿಯಲ್ಲಿ ವೆಂಕಿ ಪಲಿಮಾರು ಅವರೊಂದಿಗೆ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿ ಹಿರೇಬೆಟ್ಟು, ಪ್ರಸನ್ನ ಕುಮಾರ್, ಲಾರೆನ್ ಪಿಂಟೊ, ರಕ್ಷಾ ಪೂಜಾರಿ, ನಯನಾ ಆಚಾರ್ಯ, ಬಲರಾಮ್ ಭಟ್, ವರ್ಣಿತಾ ಕಾಮತ್, ಪದ್ಮಾವತಿ ಕಾಮತ್, ಜ್ಯೋತಿ ಪಿಂಟೋ, ಶಕುಂತಲ ಅರ್. ಶೆಣೈ ಸಹಕರಿಸಿದರು.ಸುಧಾಕರ್ ಶೆಣೈ ಅವರು ಕಾರ್ಯಕ್ರಮ ನಿರ್ವಹಿಸಿದರು.