ಕನ್ನಡಪ್ರಭ ವಾರ್ತೆ ದೇವಲಾಪುರ
ಸ್ವಚ್ಛ ಮತ್ತು ಸುಜನ ಗ್ರಾಮ ಸಂಕಲ್ಪ ಜನಜಾಗೃತಿ ಅಭಿಯಾನ ಅರಿವು ಮೂಡಿಸುವ ಪ್ರತಿಜ್ಞಾ ಬೋಧನೆ ವಿಶೇಷ ಕಾರ್ಯಕ್ರಮ ಜರುಗಿತು. ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಪಂ ಸಹಯೋಗದಲ್ಲಿ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ನೀರು ಮತ್ತು ನೈರ್ಮಲ್ಯ ಕುರಿತು ಅರಿವು ಮೂಡಿಸಲು ಹರ್ ಘರ್ ತಿರಂಗ ಸ್ವಚ್ಛತೆಯೊಂದಿಗೆ ಸ್ವತಂತ್ರ ಅಭಿಯಾನವನ್ನು ನಡೆಸಲಾಯಿತು.ನೀರು ಮತ್ತು ನೈರ್ಮಲ್ಯ ಕುರಿತು ಪರಿಸರ ಜಾಗೃತಿ, ಸಂರಕ್ಷಣೆ, ಸ್ವಚ್ಛ ಸುಸ್ಥಿರ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಹಾಗೂ ನಾನು ನನ್ನ ಸುತ್ತಲಿನ ಸಮುದಾಯ ಪಾಲ್ಗೊಳ್ಳುವಿಕೆಯಿಂದ ಜಲ ಸಂರಕ್ಷಣೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ ಯಾಗಿದೆ ಎಂಬುದು ಅಭಿಯಾನದ ಗುರಿಯಾಗಿದೆ ಎಂದು ಬೋಧಿಸಿದರು.
ನಮ್ಮ ದೈನಂದಿನ ಭಾಗವಾಗಿ ನನ್ನ ಊರು ನನ್ನ ಗ್ರಾಮ ಸ್ವಚ್ಛತೆಯ ಗುರಿಯಾಗಿ ಸಮುದಾಯ ಪಾಲ್ಗೊಳ್ಳುವಿಕೆ, ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸ್ವಚ್ಛ ನಿರ್ಮಾಣದ ಕಲ್ಪನೆಗೆ ಭಾಗವಹಿಸುತ್ತೇನೆಂಬ ಸಂದೇಶ ತಿಳಿಸಿದರು.ಅಭಿಯಾನದಲ್ಲಿ ಸಂಕಲ್ಪ ಪ್ರತಿಜ್ಞೆಯನ್ನು ಮುಖ್ಯ ಶಿಕ್ಷಕರಾದ ಚಿಕ್ಕ ಬೋರಯ್ಯ ಬೋಧಿಸಿದರು. ಶಾಲಾ ಶಿಕ್ಷಕರು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರು, ಗ್ರಾಪಂ ಪಿಡಿಒ ಹರೀಶ್ ಗೌಡ, ಅಧ್ಯಕ್ಷರು ಹಾಗೂ ಸದಸ್ಯರು, ಸಿಬ್ಬಂದಿ ಇದ್ದರು.
ಇಬ್ಬರು ತಂದೆಯರಿಂದ ಮಕ್ಕಳಿಗೆ ಕಿಡ್ನಿ ದಾನನಾಗಮಂಗಲ:
ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯಲ್ಲಿ ವಿಶ್ವ ಅಂಗಾಂಗ ದಿನದ ಪ್ರಯುಕ್ತ ಇಬ್ಬರು ತಂದೆಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ತಮ್ಮ ಮಕ್ಕಳಿಗೆ ಕಿಡ್ನಿದಾನ ಮಾಡಿದ್ದಾರೆ.ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದ ವಾಸಿ ಕೃಪಾಕರ (32)ಎಂಬ ಯುವಕನಿಗೆ ಅವರ ತಂದೆ ಸಿ.ಕೆ.ನಿಂಗೇಗೌಡ (59) ಮತ್ತು ನಾಗಮಂಗಲ ಕುಂಬಾರಬೀದಿ ವಾಸಿ ಅನ್ಪಾಸ್ ರೆಹಮಾನ್ (24) ಎಂಬ ಯುವಕನಿಗೆ ಅವರ ತಂದೆ ಚೋಟೆಸಾಬ್ (59) ಎಂಬುವವರು ಕಿಡ್ನಿ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಈ ಅಂಗಾಂಗ ಕಸಿಯನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಖ್ಯಾತ ವೈದ್ಯರಾದ ಡಾ.ನರೇಂದ್ರ, ಡಾ.ಅನಿಲ್, ಡಾ.ನಂದೀಶ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ವೀಕ್ಷಣೆ ಮಾಡಿ ಫಲಾನುಭವಿಗಳಿಗೆ ಶುಭ ಹಾರೈಸಿ ಆದಿಚುಂಚನಗಿರಿ ಆಸ್ಪತ್ರೆಯ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸತ್ಕೀರ್ತಿನಾಥ ಸ್ವಾಮೀಜಿ, ಡಾ.ಕೆ.ಎಂ.ಶಿವಕುಮಾರ್, ಡಾ.ಕೆ.ರವಿ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಧಮೇಂದ್ರ ಸೇರಿದಂತೆಆದಿಚುಂಚನಗಿರಿ ಆಸ್ಪತ್ರೆಯ ಸಿಬ್ಬಂದಿ ಇದ್ದರು.