2026ಕ್ಕೆ ತಾಲೂಕಿನ ಗ್ರಾಮಗಳಿಗೆ ಶುದ್ಧ ಕುಡಿವ ನೀರು

KannadaprabhaNewsNetwork | Published : Apr 10, 2025 1:02 AM

ಸಾರಾಂಶ

ಶ್ರೀರಾಂಪುರ ಹೋಬಳಿ ಮೈಲಾರಪುರ ಬೆಟ್ಟದಲ್ಲಿ ಬುಧವಾರ ಬಹುಗ್ರಾಮ ಕುಡಿಯುವ ನೀರಿನ ಟಾಂಕ್ ಕಾಮಗಾರಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಭೂಮಿಪೂಜೆ ನೆರವೇರಿಸಿದರು.

ಮೈಲಾರಪುರ ಬೆಟ್ಟದಲ್ಲಿ ಬಹುಗ್ರಾಮ ಕುಡಿವ ನೀರಿನ ಟಾಂಕ್ ಕಾಮಗಾರಿಗೆ ಶಾಸಕ ಗೋವಿಂದಪ್ಪ ಭೂಮಿಪೂಜೆಕನ್ನಡಪ್ರಭ ವಾರ್ತೆ ಹೊಸದುರ್ಗ:

ಜನ ಜಾನುವಾರುಗಳಿಗೆ ಮುಂದಿನ 50 ವರ್ಷಗಳವರೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ 350 ಕೋಟಿ ರು.ವೆಚ್ಚದಲ್ಲಿ ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ 346 ಗ್ರಾಮಗಳಿಗೆ 2026ರೂಳಗೆ ಶುದ್ಧ ಕುಡಿಯವ ನೀರು ಪೂರೈಸುವುದಾಗಿ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ತಾಲೂಕಿನ ಶ್ರೀರಾಂಪುರ ಹೋಬಳಿ ಮೈಲಾರಪುರ ಬೆಟ್ಟದಲ್ಲಿ ಬುಧವಾರ ಬಹುಗ್ರಾಮ ಕುಡಿಯುವ ನೀರಿನ ಟಾಂಕ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಶ್ರೀರಾಂಪುರ ಹೋಬಳಿಯ ಎ೦ಟು ಗ್ರಾಪಂಗಳಾದ ಕುರಬರಹಳ್ಳಿ, ಶ್ರೀರಾಂಪುರ, ಹೆಗ್ಗರೆ, ತಂಡಗ, ಬೆಲಗೂರು ಎಸ್. ನೇರಲಕೆರೆ ಕಬ್ಬಳ ಬಲ್ಲಾಳ ಸಮುದ್ರ ಗ್ರಾಪಂ ವ್ಯಾಪ್ತಿಯ 146 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸುಮಾರು 6 ಲಕ್ಷ ಲೀಟರ್ ನೀರು ಸಂಗ್ರಹಿಸುವ ಎರಡು ಟ್ಯಾಂಕ್ ನಿಮಾರ್ಣ ಕಾಮಗಾರಿಗೆ ಭೂಮಿ ಪೂಜೆ ನರವೇರಿಸಲಾಗಿದೆ. ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಸಮನ್ವಯ ಮಾಡಿಕೊಳ್ಳುವ ಮೂಲಕ ಕೆ. ಭೂಪಾಲ್ ಎಂಜನಿಯರ್ಸ್ ಅಂಡ್ ಕಂಟ್ರಾಕ್ಟರ್ ಪ್ರೈ ಲಿಮೆಟೆಡ್ ರವರಿಂದ ಕಾಮಗಾರಿಯನ್ನು ಗುಣಮಟ್ಟದಲ್ಲಿ ಅವಧಿಯೋಳಗೆ ಅನುಷ್ಠಾನಗಳಿಸಬೇಕೆಂದು ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಕೆ ಎಇಇ ಧನಂಜಯ್‌ ಕಾರ್ಯಕ್ರಮಕ್ಕೆ ಗೈರಾದ ಹಿನ್ನಲೆಯಲ್ಲಿ ಸಿಡಿಮಿಡಿಗೊಂಡ ಶಾಸಕರು ಇಂತಹ ಅಧಿಕಾರಿಗಳಿಂದ ಕೆಲಸ ಪಡೆಯುವುದು ಕಷ್ಟ ಇಂತವರನ್ನು ವರ್ಗಾವಣೆ ಮಾಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸುವುದಾಗಿ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಜೆಜೆಎಂ ಯೋಜನೆಯಡಿ ನಡೆಸಲಾಗುತ್ತಿರುವ ಕಾಮಗಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಗುತ್ತಿಗೆದಾರರು ರಸ್ತೆಗಳನ್ನು ಅಗದೆ ಹಾಗೆಯೇ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಇಂರ್ನಿಯರ್ ಗಳು ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ಕೆಲಸ ಪೂರ್ಣಗೊಳ್ಳದ ಹೊರತು ಯಾವುದೇ ಹಣವನ್ನು ಗುತ್ತಿಗೆದಾರರಿಗೆ ನೀಡದಂತೆ ತಾಕೀತು ಮಾಡಿದರು.

ಕಾಯಕ್ರಮದಲ್ಲಿ ತಾಪಂ ಇಒ ಸುನಿಲ್ ಕುಮಾರ್, ವಿವಿಧ ಗ್ರಾಪಂ ಅಧ್ಯಕ್ಷರಾದ ಪ್ರಸನ್ನಕುಮಾರ, ದೇವರಾಜ, ನಟರಾಜ್ ತನುಜ, ಶ್ವೇತಾ, ಕಡಿಪಿ ಸದಸ್ಯ ಲೋಕೇಶ್ವರಪ್ಪ, ಉಪಸ್ಥಿತರಿದ್ದರು.

Share this article