ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ತಲಾ 20ಲಕ್ಷ ರೂ ವೆಚ್ಚದ 5 ಶುದ್ಧ ಕುಡಿಯುವ ನೀರಿನ ಘಟಕ ಭೂಸೇನಾ ಇಲಾಖೆ ಅಡಿಯಲ್ಲಿಯಲ್ಲಿ ನಿರ್ಮಿಸಲಾದ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿಗಳ ಭರಾಟೆಯಲ್ಲಿ ಸರ್ಕಾರದಿಂದ ಅಭಿವೃದ್ಧಿ ಕಾಮುಗಾರಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲ.ದೇವರಹಿಪ್ಪರಗಿ ನೂತನ ತಾಲ್ಲೂಕಾಗಿದ್ದು ಶಿಕ್ಷಣ, ಆರೋಗ್ಯ, ಕುಡಿಯುವ ನೀರು,ಸಿ.ಸಿ. ರಸ್ತೆ, ಚರಂಡಿ, ಗ್ರಾಮೀಣ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಪ್ರಯತ್ನಪಟ್ಟಿದ್ದೇನೆ. ಪಟ್ಟಣ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತಿದ್ದು, ಅವಶ್ಯಕತೆಗೆ ಅನುಗುಣವಾಗಿ ಹಂತ, ಹಂತವಾಗಿ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಿಗಾರ ಮಾತನಾಡಿ, ವಿರೋಧ ಪಕ್ಷದವರಿಗೆ ಅನುದಾನದ ಸಮಸ್ಯೆ ಇದ್ದರೂ ಶಾಸಕರು ಅವಶ್ಯಕತೆಗೆ ಅನುಗುಣವಾಗಿ ಜಾತಿ ಮತ ಎನ್ನದೇ ಸರ್ವ ಜನಾಂಗದವರಿಗೆ ಅನುದಾನ ನೀಡುವ ಮೂಲಕ ಜನಸ್ನೇಹಿಯಾಗಿ ಶಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಇದೇ ಸಂದರ್ಭದಲ್ಲಿ ಪಪಂ ಅಧ್ಯಕ್ಷರ ಪ್ರತಿನಿಧಿಯಾದ ಬಸಪ್ಪ ದೇವಣಗಾಂವ, ಪಪಂ ಸದಸ್ಯರುಗಳಾದ ಕಾಸುಗೌಡ ಬಿರಾದಾರ ಜಲಕತ್ತಿ, ಜಯಶ್ರೀ ಸೇಬೆನವರ್, ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಮೈಹಿಬೂಬ್ ಹುಂಡೆಕಾರ, ಉಪಾಧ್ಯಕ್ಷ ಮಹಮ್ಮದರಫೀಕ್ ಪಾನ್ ಪರೋಶ, ಭೂಸೇನಾ ಇಲಾಖೆಯ ಎಇಇ ರಾಜಶೇಖರ, ಜೆಇ ಪ್ರಫುಲ್ ಕುಮಾರ ಮುಖಂಡರುಗಳಾದ ಎ.ಡಿ.ಮುಲ್ಲಾ, ಜಬ್ಬರ ಅಹಮದ್ ಮೋಮಿನ್, ಜಬ್ಬರ್ ಚೌದ್ರಿ, ವೀರೇಶ್ ಕುದುರಿ ಸೇರಿದಂತೆ ಹಲವಾರು ಜನ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
-ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕರು.