ಸ್ವಚ್ಛ ಜೀವನ, ಪರಿಸರ ಸಂರಕ್ಷಣೆ ನಾಗರಿಕ ಬದುಕಿನ ಲಕ್ಷಣ: ಎಸ್ ಪಿ ಹಂಜಾಂ ಹುಸೇನ್

KannadaprabhaNewsNetwork |  
Published : Jun 09, 2025, 12:48 AM IST

ಸಾರಾಂಶ

ಮುಖ್ಯ ಅತಿಥಿಗಳಾಗಿ ರೂಪೇಶ್‌ ಕುಮಾರ್ ಅವರು ಕಾಡುಗಳ ಮಹತ್ವ ತಿಳಿಸಿಕೊಟ್ಟರು. ಸದಾಶಿವನಗರದ ಸರ್ವಜನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎಚ್. ಮಹಾದೇವ್‌ರವರು ಪರಿಸರ ದಿನಾಚರಣೆಗೆ ಶುಭಕೋರಿ ಮಕ್ಕಳಿಗೆ ಹಿತವಚನ ನೀಡಿದರು.

ತುಮಕೂರು: ಸ್ವಚ್ಛ ಜೀವನ, ಪರಿಸರ ಸಂರಕ್ಷಣೆ ನಾಗರಿಕ ಬದುಕಿನ ಲಕ್ಷಣ, ಮನುಷ್ಯನು ಪ್ರಾಣಿಗಳಿಗಿಂತ ಈ ರೀತಿ ಜೀವನ ಕ್ರಮದಿಂದ ಭಿನ್ನವಾಗಿದ್ದಾನೆ ಎಂದು ಕೆ ಎಸ್ ಆರ್ ಪಿ ಬೆಂಗಳೂರು ಸೂಪರಿಂಟೆಂಡ್ ಆಫ್ ಪೊಲೀಸ್ ಹಂಜಾಹುಸೇನ್ ತಿಳಿಸಿದರು. ತುಮಕೂರು ವಿಜ್ಞಾನ ಕೇಂದ್ರ ಸ್ಥಳೀಯ ನಾಗರಿಕ ಸಂಘ ಸಂಸ್ಥೆಗಳ ಸಹಕಾರದಿಂದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರೂಪೇಶ್‌ ಕುಮಾರ್ ಅವರು ಕಾಡುಗಳ ಮಹತ್ವ ತಿಳಿಸಿಕೊಟ್ಟರು. ಸದಾಶಿವನಗರದ ಸರ್ವಜನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎಚ್. ಮಹಾದೇವ್‌ರವರು ಪರಿಸರ ದಿನಾಚರಣೆಗೆ ಶುಭಕೋರಿ ಮಕ್ಕಳಿಗೆ ಹಿತವಚನ ನೀಡಿದರು. ಸಮಾರಂಭದಲ್ಲಿ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪಿ. ಪ್ರಸಾದ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕೆ.ಎನ್.ನಾಗರಾಜ್‌ರಾವ್, ನರಸೇಗೌಡ, ರೇಣುಕಾರಾಧ್ಯ, ರಾಜೇಶ್ವರಿ ಹಾಗೂ ಬ್ಯಾಂಕಿನ ಸಿಬ್ಬಂದಿ ಹಾಗೂ ನಾಗರಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಭೈರವೇಶ್ವರ ಪೌಢಶಾಲೆ, ಎಸ್.ಜಿ.ಆರ್ ಪ್ರೌಢಶಾಲೆ, ಕನ್ನಿಕಾ ಆಂಗ್ಲ ಪ್ರೌಢಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಅತ್ಯುತ್ತಮ ಚಿತ್ರಕಲೆ ಬರೆದ 9 ಮಕ್ಕಳಿಗೆ ಬಹುಮಾನ ನೀಡಲಾಯಿತು. ಇರ್ಫಾನ್ ಸ್ವಾಗತಿಸಿದರು. ಪುಟ್ಟಬೋರಯ್ಯ ನಿರೂಪಿಸಿ ಟಿ.ಜಿ.ಶಿವಲಿಂಗಯ್ಯ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ