ಜನರ ಉತ್ತಮ ಆರೋಗ್ಯಕ್ಕೆ ನದಿಗಳ ಶುದ್ಧೀಕರಣ ಅಗತ್ಯ: ಹಿರೇಕಲ್ಮಠ ಶ್ರೀ

KannadaprabhaNewsNetwork | Published : Nov 13, 2024 12:48 AM

ಸಾರಾಂಶ

ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ ಪರ್ಯಾವರಣ ಟ್ರಸ್ಟ್ ಸಹಯೋಗದೊಂದಿಗೆ ಶೃಂಗೇರಿಯಿಂದ ಆರಂಭವಾಗಿರುವ ನಿರ್ಮಲ ತುಂಗಭದ್ರಾ ಅಭಿಯಾನ- ಕರ್ನಾಟಕ ಬೃಹತ್ ಪಾದಯಾತ್ರೆ ತಂಡ ಹೊನ್ನಾಳಿ ಸಮೀಪದ ತುಂಗಭದ್ರಾ ನದಿ ತಟದ ಚೀಲೂರು ಹಾಗೂ ಗೋವಿನಕೋವಿ ಗ್ರಾಮಗಳಿಗೆ ಮಂಗಳವಾರ ಆಗಮಿಸಿತು. ಈ ವೇಳೆ ಅದ್ಧೂರಿ ಸ್ವಾಗತ ಕೋರಲಾಯಿತು.

- ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಗೆ ಸ್ವಾಗತ- - - ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ ಪರ್ಯಾವರಣ ಟ್ರಸ್ಟ್ ಸಹಯೋಗದೊಂದಿಗೆ ಶೃಂಗೇರಿಯಿಂದ ಆರಂಭವಾಗಿರುವ ನಿರ್ಮಲ ತುಂಗಭದ್ರಾ ಅಭಿಯಾನ- ಕರ್ನಾಟಕ ಬೃಹತ್ ಪಾದಯಾತ್ರೆ ತಂಡ ಹೊನ್ನಾಳಿ ಸಮೀಪದ ತುಂಗಭದ್ರಾ ನದಿ ತಟದ ಚೀಲೂರು ಹಾಗೂ ಗೋವಿನಕೋವಿ ಗ್ರಾಮಗಳಿಗೆ ಮಂಗಳವಾರ ಆಗಮಿಸಿತು. ಈ ವೇಳೆ ಅದ್ಧೂರಿ ಸ್ವಾಗತ ಕೋರಲಾಯಿತು.

ಅನಂತರ ಗೋವಿನಕೋವಿ ಗ್ರಾಮದಲ್ಲಿ ಪಾದಯಾತ್ರೆ ಪ್ರಾಮುಖ್ಯತೆ ಹಾಗೂ ಜಲಜಾಗೃತಿ ಕಾರ್ಯಕ್ರಮ ನಡೆಯಿತು. ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಶ್ರೀಗಳು ಈ ವೇಳೆ ಮಾತನಾಡಿ, ಮನುಕುಲದ ಅನಾರೋಗ್ಯಕ್ಕೆ ಕಲುಷಿತ ನೀರು ಕಾರಣ. ಇದರಿಂದಾಗಿ ಎಲ್ಲ ನದಿಗಳ ಶುದ್ಧೀಕರಣ ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಮನುಷ್ಯನ ಅತಿ ಚಟುವಟಿಕೆಗಳಿಂದ ಮಣ್ಣು ಮತ್ತು ನೀರು ಮಲೀನಗೊಳ್ಳುತ್ತಿದೆ. ಜನ, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಎಲ್ಲರೂ ಎಚ್ಚೆತ್ತು ನದಿಗಳ ಶುದ್ಧೀಕರಣಕ್ಕೆ ಕೈ ಜೋಡಿಸಬೇಕು ಎಂದರು.

ಅಭಿಯಾನದ ಸಂಚಾಲಕ, ನಿವೃತ್ತ ಪ್ರೊಫೆಸರ್ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗಿರೀಶ್‍ ಪಟೀಲ್, ನಿವೃತ್ತ ಪ್ರಾಂಶುಪಾಲ ಡಾ.ನಾಗಭೂಷಣ್, ನಿರ್ದೇಶಕ ದತ್ತ, ವೈದ್ಯನಾಥ್, ನಿವೃತ್ತ ಉಪನ್ಯಾಸಕ ಡಾ. ಎಸ್.ವರದರಾಜ್, ಮಹೇಶ್, ಸ್ಥಳೀಯ ಮುಖಂಡರಾದ ಎ.ಬಿ. ಹನುಮಂತಪ್ಪ, ಎಂ.ಆರ್. ಮಹೇಶ್, ಕೆ.ವಿ.ಚನ್ನಪ್ಪ, ಎಚ್.ಎಂ. ಅರುಣ್‍ಕುಮಾರ್, ವಾಸಪ್ಪ, ಶ್ರೀನಿವಾಸ್, ಕತ್ತಿಗೆ ನಾಗರಾಜ್, ಪ್ರವೀಣ್‍ ಪಾಟೀಲ್, ರಮೇಶ್, ಚೀಲೂರು ಲೋಕೇಶ್ ಗ್ರಾಪಂ ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇತರರು ಇದ್ದರು.

ಡಾ.ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗ ನಗರದ ಓಪನ್‍ ಮೈಂಡ್ ಶಾಲಾ ಮಕ್ಕಳು ಶೃಂಗೇರಿಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ತಂಗುವ ಸ್ಥಳದಲ್ಲಿ ವಿವಿಧ ನಾಟಕಗಳು ಸೇರಿದಂತೆ ಕಲಾಪ್ರಕಾರಗಳನ್ನು ಅನಾವರಣಗೊಳಿಸುವ ಪ್ರದರ್ಶನ ಗಮನ ಸೆಳೆಯಿತು.

ನ.13ರಂದು ಅಭಿಯಾನವು ಹೊನ್ನಾಳಿಯಿಂದ ಹೊರಟು ಬೇಲಿಮಲ್ಲೂರು, ಹಿರೇಗೋಣಿಗೆರೆ ಹರಗನಹಳ್ಳಿ ಮೂಲಕರ ಕೋಣನತಲೆ ಗ್ರಾಮದ ಮುಪ್ಪಿನಾರ್ಯ ಮಠಕ್ಕೆ ತೆರಳಲಿದೆ. ಮಠದಲ್ಲಿ ಅಭಿಯಾನ ಸದಸ್ಯರು ತಂಗಲಿದ್ದು, ಅನಂತರ ಹರಿಹರದ ಕಡೆಗೆ ಪ್ರಯಾಣ ಬೆಳೆಸಲಾಗುವುದು ಎಂದು ಕಾರ್ಯಕ್ರಮ ಸಂಚಾಲಕ ವಾಸಪ್ಪ ಈ ಸಂದರ್ಭ ತಿಳಿಸಿದರು.

- - - -12ಎಚ್.ಎಲ್.ಐ1:

ಗೋವಿನಕೋವಿಗೆ ಅಭಿಯಾನ ಆಗಮಿಸಿದ ಸಂದರ್ಭ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

Share this article