- ಪ್ರಧಾನಿ ಮೋದಿ ಸಮಾವೇಶ ಹಿನ್ನೆಲೆ ಸೃಷ್ಟಿಯಾಗಿದ್ದ ತ್ಯಾಜ್ಯ । ಗಂಟೆಗಟ್ಟಲೆ ಶ್ರಮದಾನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಸಮಾವೇಶ ನಡೆಸಿದ್ದ ನಗರದ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆಯೇ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಸ್ವಚ್ಛತಾ ಶ್ರಮದಾನ ಕೈಗೊಂಡು ಗಮನ ಸೆಳೆದರು.ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ನೇತೃತ್ವದಲ್ಲಿ ಪೊರಕೆ, ಪುಟ್ಟಿಗಳ ಸಮೇತ ಹೈಸ್ಕೂಲ್ ಮೈದಾನಕ್ಕೆ ಧಾವಿಸಿ ಮುಖಂಡರು, ಕಾರ್ಯಕರ್ತರು ತಂಡ ತಂಡಗಳಾಗಿ ಸಮಾವೇಶ ಸ್ಥಳದಲ್ಲಿ ಶ್ರಮದಾನ ಮಾಡಿದರು. ಆ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು.
ಪಾಲಿಕೆ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಮೋದಿ ಸಮಾವೇಶದ ಬಗ್ಗೆ ಗುಣಗಾನ ಮಾಡಿದರು. ಗಾಯತ್ರಿ ಸಿದ್ದೇಶ್ವರ, ಸಂಸದ ಜಿ.ಎಂ.ಸಿದ್ದೇಶ್ವರ ಭಾಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರಮದಾನದಲ್ಲಿ ಗಂಟೆಗಟ್ಟಲೇ ಭಾಗಿಯಾಗಿ ಸ್ವಚ್ಛತೆಗಾಗಿ ಶ್ರಮಿಸಿದರು.ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಇಲ್ಲಿ ಬಿಜೆಪಿ ಸಮಾರಂಭ ನಡೆದಿದೆ. ಹೈಸ್ಕೂಲ್ ಮೈದಾನ ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮದು. ನರೇಂದ್ರ ಮೋದಿ ನಮಗೆಲ್ಲ ಪಾಠ ಮಾಡಿರುವುದು ಸ್ವಚ್ಛ ಭಾರತ್ ಬಗ್ಗೆ. ಮೋದಿ ಕಾರ್ಯಕ್ರಮ ನನಗೆ ಮತ್ತು ನಮ್ಮ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಿದಂತೆ ಯಶಸ್ವಿಯಾಗಿದೆ. ನನ್ನ ಪರ ಮತಯಾಚಿಸಲು ಮೋದಿಜೀ ಆಗಮಿಸಿದ್ದು, ನನ್ನ ಗೆಲುವಿಗೆ ಶ್ರೀರಕ್ಷೆ ಎಂದರು.
ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಯುವ ಮುಖಂಡರಾದ ಜಿ.ಎಸ್.ಅನಿತಕುಮಾರ, ಜಿ.ಎಸ್.ಅಶ್ವಿನಿ, ಬಿ.ಎಸ್.ಜಗದೀಶ, ಪಾಲಿಕೆ ವಿಪಕ್ಷ ನಾಯಕ ಪ್ರಸನ್ನಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ಸದಸ್ಯರಾದ ವೀರೇಶ ಪೈಲ್ವಾನ್, ವೀಣಾ ನಂಜಪ್ಪ, ಗಾಯತ್ರಿ ಬಾಯಿ ಖಂಡೋಜಿ ರಾವ್, ಗಂಗಾಧರ, ಶಿವನಗೌಡ ಪಾಟೀಲ್, ಗುರುರಾಜ, ಪದ್ಮನಾಭ, ಲಿಂಗರಾಜ, ಸಂತೋಷ ಕೋಟಿ, ಕಿಶೋರಕುಮಾರ, ಕೆ.ಸಿ.ಗುರು, ಶಂಕರಗೌಡ ಬಿರಾದಾರ, ಟಿಂಕರ್ ಮಂಜಣ್ಣ, 24ನೇ ವಾರ್ಡಿನ ಸದಸ್ಯರು, ಕಾರ್ಯಕರ್ತರು ಶ್ರಮದಾನಕ್ಕೆ ಸಾಥ್ ನೀಡಿದರು.- - - -29ಕೆಡಿವಿಜಿ15, 16:
ದಾವಣಗೆರೆ ಹೈಸ್ಕೂಲ್ ಮೈದಾನಲ್ಲಿ ಮೋದಿ ಸಮಾವೇಶದ ಮಾರನೇ ದಿನ ಬೆಳ್ಳಂಬೆಳಗ್ಗೆಯೇ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.