ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕಚೇರಿ ಸುತ್ತಮುತ್ತ ಗಿಡಗಂಟಿಗಳಿಂದಾಗಿ ಹಾವುಗಳು, ಹಂದಿಗಳ ತಾಣವಾಗಿದ್ದು ಕಚೇರಿಗೆ ಬರುವ ನೌಕರರು ಮತ್ತು ಸಾರ್ವಜನಿರಿಗೆ ಭೀತಿ ಹುಟ್ಟಿಸುವಂತಿದೆ. ಅಲ್ಲದೆ ಬೆಸ್ಕಾಂ ಕಚೇರಿ ಪ್ರದೇಶದಲ್ಲಿರುವ ವಸತಿಗೃಹಗಳು 50 ವರ್ಷಕ್ಕೂ ಹಿಂದೆ ನಿರ್ಮಾಣವಾಗಿದ್ದು ಸಂಪೂರ್ಣ ಶಿಥಿಲಗೊಂಡಿವೆ. ಇಲ್ಲಿ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ವಾಸಿಸುತ್ತಿಲ್ಲ. ಪಾಳುಬಿದ್ದ ವಸತಿಗೃಹಗಳಲ್ಲಿ ರಾತ್ರಿವೇಳೆ ಕುಡುಕರ ದರ್ಬಾರ್ ಅಡೆಯುತ್ತದೆ. ಕುಡಿದ ಬಾಟಲಿಗಳನ್ನು ಅಲ್ಲಯೇ ಎಸೆಯುತ್ತಾರೆ. ಒಮ್ಮೊಮ್ಮೆ ಕುಡುಕರು ದಾಂದಲೆ ಮಾಡುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತದೆ.ಸಿಬ್ಬಂದಿಗೆ ಮನೆ ನಿರ್ಮಿಸಲಿ
ಎಲ್ಲ ಸಿಬ್ಬಂದಿ ಸ್ವಂತ ಅಥವಾ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಕರೆ ನೀಡಿದ ತಕ್ಷಣ ಬರಲು ಕಷ್ಟವಾಗುತ್ತದೆ. ನಿಗಮದ ಸಾಕಷ್ಟು ಭೂಮಿ ಇದೆ, ಒಂದು ಬಹುಮಹಡಿ ಕಟ್ಟಡ ನಿರ್ಮಾಣವಾದರೆ ಅಧಿಕಾರಿಗಳು, ಸಿಬ್ಬಂದಿ ಒಂದೆಡೆ ಉಳಿದು ಜನರಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತಿತ್ತು.ಪಾಳುಬಿದ್ದ ಗಣೇಶನದೇವಾಲಯಬೆಸ್ಕಾಂ ಕಚೇರಿ ಆವಣದಲ್ಲಿರುವ ಗಣೇಶನ ದೇವಸ್ಥಾನ ಪಾಳುಬಿದ್ದಿದೆ. ಹಲವು ವರ್ಷಗಳಿಂದ ಇಲ್ಲಿ ಗಣೇಶ ಪೂಜೆಯನ್ನೇ ಕಾಣದೆ ಅನಾಥನಾಗಿದ್ದಾನೆ. ಈ ದೇವಾಲಯವು ಕಳೆದ ಕೆಲವುವರ್ಷಗಳಿಂದ ಸರಿಯಾದ ನಿರ್ವಹಣೆಇಲ್ಲದೆ ಪಾಳುಬಿದ್ದಿದೆ. ಈ ದೇವಾಲಯವನ್ನು ೨೪ ವರ್ಷಗಳ ಹಿಂದೆ ಬೆಸ್ಕಾಂಯೂನಿಯನ್ ಕಾರ್ಯದರ್ಶಿಯಾದ ಗಂಗಾಧರಪ್ಪ,ವೆಂಕಟಪ್ಪ ರವರು ಪ್ರತಿಷ್ಠಾಪಿಸಿದ್ದರು. ಆದರೆ ನಿರ್ವಹಣೆ ಇಲ್ಲದೆ ದೇವಾಲಯ ಮೂಲೆಗುಂಪಾಗಿದೆ.
ಎಇ ಪರಮೇಶ್ವರ್ ಏನಂತಾರೆ?