ಮುಳಗುಂದ: ಜಗತ್ತಿನಲ್ಲಿ ತಂದೆ ತಾಯಿಗಿಂತ ಮಿಗಿಲಾದ ವಸ್ತು ಗುರು. ಬ್ರಹ್ಮ ಜನ್ಮದ ಮೂಲವಾದರೆ ಆತನಿಗಿಂತ ಅದ್ವತಿಯನಾದವನು ಗುರು ಎಂದು ಪಟ್ಟಣದ ಆರ್.ಎನ್. ದೇಶಪಾಂಡೆ ಪದವಿ ಮಹಾವಿದ್ಯಾಲಯದ ಪ್ರಾ.ರಮೇಶ ಕಲ್ಲನಗೌಡ್ರ ಹೇಳಿದರು.
ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಾತನಾಡಿ, ಇಂತಹ ಸಮ್ಮೀಲನದಲ್ಲಿ ಗೆಳೆಯರ ಚಿಂತನ ಮಂತನ ನಡೆಯುತ್ತದೆ. ಇದ್ದ ಗೆಳೆಯರು ಅವರವರ ಶ್ರಮದ ಮೇಲೆ ಬೇರೆ ಬೇರೆ ಹುದ್ದೆ ಅಲಂಕರಿಸಿ ಅವರವರ ಪ್ರತಿಫಲಕ್ಕೆ ತಕ್ಕಂತೆ ಎತ್ತರಕ್ಕೆ ಬೆಳೆದುರುತ್ತಾರೆ. ಆದರೆ ಇಂತಹ ಕಾರ್ಯಕ್ರಮಗಳಲ್ಲಿ ತಮ್ಮ ಪದವಿ ಮೆರೆತು ಎಲ್ಲರೂ ಒಂದೇ ಎಂಬ ಮನೋಭಾವದಲ್ಲಿ ಸುಖ ದುಃಖದ ಮಾತುಗಳು ಇವರನ್ನು ಖುಷಿಗೊಳಿಸುತ್ತವೆ ಎಂದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕ ಆರ್.ಆರ್. ಪಟ್ಟಣ ಮಾತನಾಡಿ, ನಿಮ್ಮ ಗಳಿಕೆಯಲ್ಲಿ ಅನಾಥ ಮಕ್ಕಳನ್ನು ದತ್ತು ಪಡೆದು ವಿದ್ಯಾಭ್ಯಾಸ ನೀಡಬೇಕು. ಜನ್ಮ ನೀಡಿದ ತಂದೆ ತಾಯಂದಿರನ್ನು ನಿರ್ಲಕ್ಷಿಸದೇ ಗೌರವ ನೀಡಬೇಕು ಅಂದಾಗ ಮಾತ್ರ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಎಸ್‌ಜೆಜೆಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ ಎಲ್ಲ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಗಲಿದ ಶಿಕ್ಷಕರಿಗೆ, ಸಹಪಾಠಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಸ್ಥೆಯ ಚೇರಮನ್ ಎಂ.ಡಿ. ಬಟ್ಟೂರ, ಗೌರಮ್ಮ ಬಡ್ನಿ, ಪ್ರಾ.ಎ.ಎಂ. ಅಂಗಡಿ, ಇ.ಎಂ. ಗುಳೇದಗುಡ್ಡ, ಡಾ. ಎಸ್.ಸಿ. ಚವಡಿ, ಕ್ರೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ನಿವೃತ್ತ ಶಿಕ್ಷಕರಾದ ಜಿ.ಆರ್. ಗದಗ, ಎಸ್.ಎಫ್. ಮುದ್ದನಗೌಡ್ರ, ಬಾಪೂಜಿ ಯಳವತ್ತಿ, ಎನ್.ಪಿ. ಲಮಾಣಿ ಇತರರು ಇದ್ದರು.