ಕನ್ನಡಪ್ರಭ ವಾರ್ತೆ ಚಿಂಚೋಳಿ
ರಾಜ್ಯದಲ್ಲಿ ದಿನೇ ದಿನೇ ಡೆಂಘೀ ಜ್ವರ ಹೆಚ್ಚುತ್ತಿದೆ. ಆದರೆ ನಮ್ಮ ಪಟ್ಟಣದಲ್ಲಿ ಡೆಂಘೀ ಜ್ವರ ಕಾಣಿಸಿಕೊಳ್ಳಬಾರದು ಎಂದು ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತಾ ಕ್ರಮ ನಡೆಸಲಾಗುತ್ತಿದೆ. ಅಲ್ಲದೇ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಹೇಳಿದರು.ಪಟ್ಟಣದ ಸ್ಥಳೀಯ ಪುರಸಭೆ ವತಿಯಿಂದ ಡೆಂಘೀ ಜ್ವರ, ಮಲೇರಿಯಾ, ಮತ್ತು ಇತರೆ ಸಾಂಕ್ರಾಮಿಕ ರೋಗ ತಡೆಗಟ್ಟುವ ಮುಂಜಾಗೃತಾ ಕ್ರಮಗಳು ಹಾಗೂ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ನಡೆದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
ಬೇಕರಿ, ಕಿರಾಣಿ, ಬೀದಿ ವ್ಯಾಪಾರಿಗಳು, ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಸಾಕಷ್ಟು ರೋಗಗಳು ಹರಡುವಿಕೆ ಕುರಿತು ಜನರಿಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ಮಹಮ್ಮದ ಗಫಾರ ಅಹ್ಮದ್ ಮಾತನಾಡಿ, ರಾಜ್ಯದಲ್ಲಿ ಡೆಂಘೀ ರೋಗ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲೂಕು ಆರೋಗ್ಯ ಇಲಾಖೆಯ ೪೦ ಆರೋಗ್ಯ ಸಿಬ್ಬಂದಿ ಪ್ರತಿಯೊಂದು ವಾರ್ಡ್‌ಗಳಿಗೆ ಭೇಟಿ ನೀಡಿ ಲಾರ್ವಾ ಈಡೀಸ್ ಸೊಳ್ಳೆಯಿಂದ ಡೆಂಘೀ ಜ್ವರ ಬರುತ್ತದೆ. ನಾವು ನಮ್ಮ ಮನೆ ಸುತ್ತಮುತ್ತ ಸ್ಚಚ್ಛತೆ ಕಾಪಾಡಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಜಾಥಾದಲ್ಲಿ ಕಲಬುರಗಿ ವಿಭಾಗೀಯ ಸಾರಿಗೆ ಸಂಚಾರ ಅಧಿಕಾರಿ ಈಶ್ವರ ಹೊಸಮನಿ ಮಾತನಾಡಿದರು. ಜಾಥಾದಲ್ಲಿ ಗ್ರೇಡ್-೨ ತಹಸೀಲ್ದಾರ್ ವೆಂಕಟೇಶ ದುಗ್ಗನ, ಕಲಬುರಗಿ ಜಿಲ್ಲಾ ಸಾರಿಗೆ ಸಂಚಾರ ಸಹಾಯಕ ಅಧೀಕ್ಷಕ ಭೀಮಾಶಂಕರ, ಮುಖ್ಯಗುರು ಮಹ್ಮದ ಇದ್ರೀಸ ನಿಮಾಹೊಸಳ್ಳಿ, ಪುರಸಭೆ ಸಿಬ್ಬಂದಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿನಿಯರು ಜಾಥಾದಲ್ಲಿ ಭಾಗವಹಿಸಿದ್ದರು.ಪಟ್ಟಣದ ಪುರಸಭೆ ಕಚೇರಿಯಿಂದ ಅಂಬೇಡ್ಕರ್ ವೃತ್ತ, ಮುಖ್ಯರಸ್ತೆ, ಬಸ್‌ನಿಲ್ದಾಣದಲ್ಲಿ ಡೆಂಘೀಜ್ವ ರ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.