ಹುತಾತ್ಮರ ದಿನಾಚರಣೆ ಅಂಗವಾಗಿವಾಸವಿ ಕ್ಲಬ್‌ನಿಂದ ರಂಗನಾಥಸ್ವಾಮಿ ದೇವಾಲಯ ಆವರಣ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ವಾಸವಿ ಕ್ಲಬ್ ಸದಸ್ಯರು ಹುತಾತ್ಮರ ದಿನಾಚರಣೆ ಅಂಗವಾಗಿ ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಜತೆಗೆ ಪ್ಲಾಸ್ಟಿಕ್ ಮುಕ್ತವನ್ನಾಗಿಸಿ ಮಹಾತ್ಮ ಗಾಂಧಿಜೀ ಹಾಗೂ ದೇಶಕ್ಕಾಗಿ ಬಲಿದಾನಗೈದ ಹುತಾತ್ಮರಿಗೆ ವಿಶೇಷ ರೀತಿಯಲ್ಲಿ ಗೌರವ ನಮನ ಸಲ್ಲಿಸಿದರು. ವಾಸವಿ ಕ್ಲಬ್ ಅಧ್ಯಕ್ಷ ರೋಹಿತ್ ಶ್ರೀಧರ್ ಮಾತನಾಡಿ, ಕ್ಲಬ್‌ನ ಹಿರಿಯ ಸದಸ್ಯರ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದೇಶಕ್ಕಾಗಿ ಹೋರಾಡಿ ಮಡಿದ ಸ್ವಾತಂತ್ರ ಹೋರಾಟಗಾರರು ಹಾಗೂ ಮಹಾತ್ಮಗಾಂಧಿಯವರ ಗೌರವಾರ್ಥವಾಗಿ ಗೌರವ ನಮನ ಸಲ್ಲಿಸುವ ಜತೆಗೆ ಅವರ ಸ್ಮರಣಾರ್ಥವಾಗಿ ಸ್ವಚ್ಛತೆಯ ಕಾರ್ಯ ಮಾಡುವ ಮೂಲಕ ಪ್ರಕೃತಿಯ ಸೇವೆ ಮಾಡಿದ್ದೇವೆ ಎಂಬ ತೃಪ್ತಿ ನಮಗಿದೆ ಎಂದರು. ಪ್ರಧಾನಿ ಮೋದಿಜೀಯವರ ಆಶಯದಂತೆ ಪ್ಲಾಸ್ಟಿಕ್ ಮುಕ್ತ ಭಾರತ ಮಾಡುವಲ್ಲಿ ಪ್ರತಿಯೊಬ್ಬ ನಾಗರೀಕರ ಬದ್ಧತೆಯ ವರ್ತನೆ ಅಗತ್ಯವಾಗಿದ್ದು, ದಿನನಿತ್ಯ ಪ್ಲಾಸಿಕ್ ಬಳಕೆಯ ವಸ್ತುಗಳನ್ನು ಬಳಸುವುದನ್ನು ಕಡಿಮೆ ಮಾಡಿದ್ದಲ್ಲಿ ಮತ್ತು ನಮ್ಮಗಳ ಅಗತ್ಯದ ಸಂದರ್ಭದಲ್ಲಿ ಬಳಸದೇ ಜವಾಬ್ದಾರಿಯಿಂದ ತೊಡಗಿಸಿಕೊಂಡಲ್ಲಿ ಮಾತ್ರ ಪ್ಲಾಸ್ಟಿಕ್ ಮುಕ್ತ ಕನಸು ನನಸ್ಸಾಗಲು ಸಾಧ್ಯವೆಂದರು. ದೇವಾಲಯದ ಆವರಣ ಸ್ವಚ್ಛತಾ ಕಾರ್ಯದ ಸಂದರ್ಭದಲ್ಲಿ ಅರ್ಚಕರು ಹಾಗೂ ಗ್ರಾಮಸ್ಥರು ಸಹಕಾರವನ್ನು ಅಭಿನಂದಿಸಿದರು.
ವಾಸವಿ ಕ್ಲಬ್ ಕಾರ್ಯದರ್ಶಿ ಹೇಮ ನಾಗೇಂದ್ರ, ನಿರ್ದೇಶಕರು ಹಾಗೂ ಸದಸ್ಯರಾದ ಸುನಿಲ್ ಬಿ.ಎಂ., ರಾಮಕೃಷ್ಣ ಗುಪ್ತ, ವಿಶ್ವಾಸ್, ಅಖಿಲ ಸಚಿನ್, ಶ್ವೇತಾ ಬಾಲಾಜಿ, ಮಮತಾ ರೋಹಿತ್, ರಮಾ ಶ್ರೀಧರ್, ಸುಭಾಷ್, ವಿದ್ಯಾ ವಿಜೇತ್, ಸಂಗೀತ ಸಂತೋಷ್, ದೀಪಾ ಬಾಲಾಜಿ, ಶಶಿ ಶ್ರೀಧರ್ ಹಾಗೂ ಕುಟುಂಬ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.