ರಾಷ್ಟ್ರೀಯ ಯುವದಿನ ಜಿಲ್ಲಾ ಉತ್ಸವ ಪ್ರಯುಕ್ತ ಸ್ವಚ್ಛತಾ ಓಟ

KannadaprabhaNewsNetwork |  
Published : Jan 13, 2026, 01:30 AM IST
12ಕೆಪಿಆರ್‌ಸಿಆರ್‌ 01:  | Kannada Prabha

ಸಾರಾಂಶ

ಸ್ವಾಮಿ ವಿವೇಕಾನಂದ ಜಯಂತಿಯ ರಾಷ್ಟ್ರೀಯ ಯುವ ದಿನ, ಸ್ವಚ್ಛ ಭಾರತ ಮಿಷನ್ ಹಾಗೂ ರಾಯಚೂರು ಉತ್ಸವ-2026ರ ಪ್ರಯುಕ್ತ ನಗರದಲ್ಲಿ ಸೋಮವಾರ ಸ್ವಚ್ಛತಾ ಓಟವನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಸ್ವಾಮಿ ವಿವೇಕಾನಂದ ಜಯಂತಿಯ ರಾಷ್ಟ್ರೀಯ ಯುವ ದಿನ, ಸ್ವಚ್ಛ ಭಾರತ ಮಿಷನ್ ಹಾಗೂ ರಾಯಚೂರು ಉತ್ಸವ-2026ರ ಪ್ರಯುಕ್ತ ನಗರದಲ್ಲಿ ಸೋಮವಾರ ಸ್ವಚ್ಛತಾ ಓಟವನ್ನು ನಡೆಸಲಾಯಿತು.

ಇಲ್ಲಿನ ಮಹಾನಗರ ಪಾಲಿಕೆ ನೇತೃತ್ವದಲ್ಲಿ ನಡೆದ ಸ್ವಚ್ಛ ನಗರಕ್ಕಾಗಿ ಓಟದಲ್ಲಿ ಯುವಜನತೆಗೆ ಹೊಸ ಶಕ್ತಿ, ಪ್ರೇರಣೆ ಹಾಗೂ ಜಾಗೃತಿ ನೀಡಿತು. ರಾಯಚೂರು ಜನತೆಯಲ್ಲಿ ತಮ್ಮ ನಗರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವಂತೆ ಮಾಡಿತು.

ಓಟಕ್ಕೆ ಸಂಸದ ಕುಮಾರ ನಾಯಕ ಚಾಲನೆ ನೀಡಿದರು ಬಳಿಕ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಮೌಲ್ಯಗಳು, ಸದೃಢ ಶರೀರ ಮತ್ತು ಮನಸ್ಸಿನ ಮಹತ್ವ ಮತ್ತು ಸ್ವಚ್ಛ, ಆರೋಗ್ಯಕರ ವಾತಾವರಣ ನೆನಪಿಸಿದರು.

ಸ್ವಚ್ಛತಾ ಓಟದಲ್ಲಿ 3000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಿಂದ- 65ರ ವಯೋಮಾನದವರು ಓಟದಲ್ಲಿ ಕಂಡು ಬಂದರು. ವಿದ್ಯಾರ್ಥಿಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. ರಾಯಚೂರು ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಮ್ಯಾರಥಾನ್ ಓಟಕ್ಕೆ ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದು ಮಹತ್ವದ ಸಾಧನೆಯಾಗಿ ರಾಯಚೂರು ಇತಿಹಾಸದಲ್ಲಿ ದಾಖಲಾಯಿತು.

ಈ ಸ್ವಚ್ಛತಾ ಓಟವು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು, ಪರಿಸರ ಸಂರಕ್ಷಣೆ, ಆರೋಗ್ಯಕರ ಜೀವನ ಶೈಲಿ ಹಾಗೂ ಪಾಲಿಕೆಯೊಂದಿಗೆ ನಾಗರಿಕರ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದೆ. ಕಾರ್ಯಕ್ರಮಕ್ಕೆ ದೊರೆತ ವ್ಯಾಪಕ ಜನಬೆಂಬಲಕ್ಕೆ ಸಾರ್ವಜನಿಕರು ಸರ್ಕಾರ ಹಾಗೂ ಮಹಾನಗರ ಪಾಲಿಕೆಯ ಈ ಮಹತ್ವದ ಮುಂದಾಳತ್ವಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಸ್ವಚ್ಛತಾ ಓಟದ ಮೂಲಕ ರಾಯಚೂರು ಜನತೆ ತಮ್ಮ ನಗರಕ್ಕಾಗಿ ಹೊಂದಿರುವ ಜವಾಬ್ದಾರಿ, ಒಗ್ಗಟ್ಟು ಮತ್ತು ಅಪಾರ ಶಕ್ತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದರು.

ವಿಭಿನ್ನ ವಯೋಮಾನದವರು, ಹಿನ್ನೆಲೆಯವರು ಹಾಗೂ ವೃತ್ತಿಯವರು ಒಂದೇ ಗುರಿಗಾಗಿ ಒಟ್ಟಾಗಿ ಭಾಗವಹಿಸಿರುವುದು, ರಾಯಚೂರು ಒಂದು ಜಾಗೃತ, ಹಾಗೂ ಚೈತನ್ಯಭರಿತ ನಗರ ಎಂಬುದನ್ನು ಸಾಬೀತುಪಡಿಸಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಾನವ ಸರಪಳಿಯನ್ನು “ರಾಯಚೂರು ಉತ್ಸವ–2026” ಎಂಬ ರೂಪದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅದನ್ನು ಡ್ರೋನ್ ಮೂಲಕ ಚಿತ್ರೀಕರಿಸಲಾಯಿತು. ಈ ದೃಶ್ಯವು ರಾಯಚೂರು ಉತ್ಸವಕ್ಕೆ ಮತ್ತಷ್ಟು ಉತ್ಸಾಹ ಮತ್ತು ಜೋಷ್ ನೀಡಿತು.

ಈ ಮೂಲಕ ರಾಯಚೂರು ನಗರವು ಒಗ್ಗಟ್ಟಿನ ಶಕ್ತಿ ಮತ್ತು ಸಕಾರಾತ್ಮಕ ಚಿಂತನೆಯೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದೆ ಎಂಬ ಸಂದೇಶ ಸ್ಪಷ್ಟವಾಗಿ ಮೂಡಿಬಂದಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ., ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ, ಮುಖಂಡರಾದ ರವಿಬೋಸರಾಜು, ಜಯಣ್ಣ ಸೇರಿ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ