
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾಡಳಿತ, ಜಿಪಂ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಲಬುರಗಿ ಇವರ ಸಮುಕ್ತ ಆಶ್ರಯದಲ್ಲಿ ಯಡ್ರಾಮಿಯಲ್ಲಿ ಆಯೋಜಿಸಲಾಗಿದ್ದ 17 ಪ್ರಜಾಸೌಧ. 300 ಕೆಪಿಎಸ್ ಶಾಲೆಗೆ ಅಡಿಗಲ್ಲು ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೂತನವಾಗಿ ಘೋಷಣೆಯಾಗಿರುವ ಯಡ್ರಾಮಿಯಲ್ಲಿ ಜೇವರ್ಗಿ ಮತಕ್ಷೇತ್ರದಲ್ಲಿ 867.49 ಕೋಟಿ ವೆಚ್ಚದ, 87 ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗಿದೆ, 38.29 ಕೋಟಿ ವೆಚ್ಚ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಾಗಿದೆ. 906 ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ.ಗ್ಯಾರಂಟಿ ಯೋಜನೆಗಳಿಂದ ಮೂಲಸೌಕರ್ಯ ಕಾಮಗಾರಿಗಳಿಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂದು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದ್ದರೆ ಜೇವರ್ಗಿ ಮತಕ್ಷೇತ್ರ ಒಂದರಲ್ಲಿ 906 ಕೋಟಿ ಗಳನ್ನು ವೆಚ್ಚ ಮಾಡಲಾಗುತ್ತಿರಲಿಲ್ಲ ಎಂದು ಮುಖ್ಯ ಮಂತ್ರಿಗಳು ವಿಪಕ್ಷಗಳ ಗಮನ ಸೆಳೆದರು.
ಕೊಟ್ಟ ಮಾತಿನಂತೆ ನಡೆದ ಸರ್ಕಾರ: 1 ಲಕ್ಷದ 12 ಸಾವಿರ ಕೋಟಿಗೂ ಹೆಚ್ಚು ಅನುದಾನ ವೆಚ್ಚ ಮಾಡಲಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯಂತೆ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.
ಕಳೆದ ಬಾರಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಾಣಾಳಿಕೆಯಲ್ಲಿ ಸೇರಿರದ 30 ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿತ್ತು. ಎರಡೂವರೆ ವರ್ಷದಲ್ಲಿ ಕೊಟ್ಟ ಎಲ್ಲಾ ಭರವಸೆಗಳ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲಾಗಿದೆ ಎಂದರು.
ಪ್ರಜಾಸೌಧ ಮಂಜೂರು: ರಾಜ್ಯದಲ್ಲಿ 63 ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿತ್ತು. 2018 ರಿಂದ 2023 ರವರೆಗೆ ನೂತನ ತಾಲ್ಲೂಕುಗಳಿಗೆ ಬಿಜೆಪಿ ಸೌಲಭ್ಯ ಒದಗಿಸಿದ್ದು ಕೇವಲ 14 ತಾಲ್ಲೂಕುಗಳಲ್ಲಿ ಮಾತ್ರ ಮಾಡಿದರು. 2023 ರಲ್ಲಿ ಅಧಿಕಾರಕ್ಕೆ ಬಂದ ನಂತರ 49 ತಾಲೂಕುಗಳಲ್ಲಿ ಕೂಡ ಪ್ರಜಾಸೌಧಗಳನ್ನು ಮಂಜೂರು ಮಾಡಿದ್ದು, ನಿರ್ಮಾಣ ಮಾಡಲಾಗುವುದು ಎಂದರು.
*ಬಿಜೆಪಿಯಿಂದ ಕೋಮುವಾದ ಕೆಲಸ: ಕೋಮುವಾದ, ಹಿಂದುತ್ವ ಎಂದು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದರು.
371 ಜೆ ಜಾರಿ: ಬಿಜೆಪಿಯ ಗೃಹ ಸಚಿವ ಹಾಗೂ ಉಪಪ್ರಧಾನಿಯಾಗಿದ್ದ ಅಡ್ವಾಣಿ ಯವರು 371 ಜೆ ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದನ್ನು ಜಾರಿ ಮಾಡಿದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಂ ಸಿಂಗ್ ಹೋರಾಟದಿಂದ ಇದು ಸಾಧ್ಯವಾಯಿತು ಎಂದರು. ಇದರಿಂದಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾಯಿತು. 13000 ಕೋಟಿ ಗಳನ್ನು ಮೂರು ವರ್ಷಗಳಲ್ಲಿ ಒದಗಿಸಲಾಗಿದ್ದು, ಈ ವರ್ಷದಲ್ಲಿ 3000 ಕೋಟಿ ಒದಗಿಸಲಾಗಿದೆ ಎಂದರು.
ರೈತರ ಖಾತೆಗಳಿಗೆ ಅನುದಾನವನ್ನು ತಲುಪಿಸುವ ಕೆಲಸ ಮಾಡಿದ್ದೇವೆ. ರೈತರ ಸಹಾಯಕ್ಕೆ ಸರ್ಕಾರ ಸದಾ ಮುಂದಾಗಿದೆ. ನೆಟ್ಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆಗೆ 233 ಕೋಟಿ ಒದಗಿಸಲಾಗಿದೆ. ಕಬ್ಬಿನ ಬೆಲೆ ಕಡಿಮೆ ಎಂದು ರೈತರು ಪ್ರತಿಭಟಿಸಿದಾಗ ಅವರ ನೆರವಿಗೆ ಸರ್ಕಾರ ಧಾವಿಸಿ ಸರ್ಕಾರದಿಂದ 50 ಹಾಗೂ ಕಾರ್ಖಾನೆಯಿಂದ 50 ರೂ. ನಿಗದಿ ಮಾಡಿ 300 ಕೋಟಿ ಗಳನ್ನು ಸರ್ಕಾರದಿಂದ ಕಬ್ಬಿನ ಬೆಳೆಗಾರರಿಗೆ ನೀಡಲಾಗಿದೆ ಎಂದರು.
ಪಬ್ಲಿಕ್ ಶಾಲೆಗಳಿಗೆ ಅಡಿಗಲ್ಲು: ಶಾಸಕ ಅಜಯ್ ಸಿಂಗ್ ಅವರು ಅನುದಾನವನ್ನು ಪೂರ್ಣವಾಗಿ ವೆಚ್ಚ ಮಾಡಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಅಜಯ್ ಸಿಂಗ್ ಅವರಿಗೆ ತಿಳಿಸಲಾಗಿತ್ತು. ಅದರಂತೆ 300 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅಡಿಗಲ್ಲು ಹಾಕಲಾಗಿದೆ. ರಾಜ್ಯದಲ್ಲಿ ಒಟ್ಟು 900 ರಾಜ್ಯಕ್ಕೆ ಕೆಪಿಎಸ್ ಮಂಜೂರಾಗಿದೆ.ಬಿಜೆಪಿಯ ಪಾತ್ರವಿಲ್ಲ: ಬಿಜೆಪಿ ಕೇವಲ ಸುಳ್ಳು ಆರೋಪಗಳನ್ನು ಮಾತ್ರ ಮಾಡುತ್ತದೆ. 371 ಜೆ ಜಾರಿಯಾಗಿದ್ದರೆ ಅದಕ್ಕೆ ಕಾರಣ ಮಲ್ಲಿಕಾರ್ಜುನ ಖರ್ಗೆ, ಧರ್ಮ ಸಿಂಗ್ ಅವರು ಕಾರಣ. ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದರು.
ಅಸಮಾನತೆ ಹೋಗಲಾಡಿಸಲು ನಂಜುಂಡಪ್ಪ ಅವರ ವರದಿಯನ್ನು ಆಧರಿಸಿ ಶಿಫಾರಸ್ಸುಗಳನ್ನು ಜಾರಿಗೆ ತರಲಾಗಿದೆ. ಇದರ ಪರಿಣಾಮಗಳ ಬಗ್ಗೆ ವರದಿ ಸಲ್ಲಿಸಲು ಗೋವಿಂದ ರಾವ್ ಸಮಿತಿ ರಚಿಸಲಾಗಿದೆ. ಶೀಘ್ರದಲ್ಲಿ ವರದಿಯ ಶಿಫಾರಸುಗಳನ್ನು ಜಾರಿ ಮಾಡಲಾಗುವುದು ಎಂದರು.ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಸಾವಿರಾರು ಕೋಟಿ ಅನುದಾನ ತರೋದು ಇಲ್ಲಿ ಸಾಧ್ಯವಾಗಲು ಕಲಂ 371 ಜೆ ಕಾರಣ, ಇಲ್ಲಿನ ಪ್ರಗತಿ ಕಂಡು ನಾನೂ ಕಲ್ಯಾಣ ಕರ್ನಾಟಕ ನೆಲದಲ್ಲೇ ಹುಟ್ಟಬೇಕಿತ್ತು ಅನಿಸುತ್ತಿದೆ ಎಂದರು.
ಕೆಕೆ ಆರ್ ಡಿ ಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ ಅಜಯ್ ಸಿಂಗ್ ಪ್ರಸ್ತಾವಿಕೆ ಮಾತನಾಡುತ್ತ ಮುಂಬರೋ ಬಜೆಟ್ ನಲ್ಲಿ ಮಂಡಳಿಗೆ 6 ಸಾವಿರ ಕೋಟಿ ರು ಅನುದಾನ ಘೋಷಣೆಗೆ ಮುಖ್ಯಮಂತ್ರಿಗಳನ್ನು ಅಗ್ರಹಿಸಿದರು.ಸಚಿವರಾದ ಪ್ರಿಯಾಂಕ ಖರ್ಗೆ, ಕೃಷ್ಣ ಭೈರೇಗೌಡ, ಚನ್ನಬಸಪ್ಪ ದರ್ಶನಾಪುರ, ಶರಣ ಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ, ರಹೀಂ ಖಾನ್, ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನಿಗೆ ಬುಡುಬುಡಕ್ಯಾ ಎಂದು ಜರಿದ ಖರ್ಗೆ
ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಿಜೆಪಿಗೆ ದೇಶ, ಬಡವರ ಹಿತ ಬೇಕಿಲ, ಅದಕ್ಕೇ ಮನರೇಗಾ ಯೋಜನಯನ್ನ ವಿಬಿ ಜೀ ರಾಮ್ ಜೀ ಎಂದು ಬದಲುಸಿ ಅದರ ಘನತೆಯನ್ನೇ ಸತ್ಯನಾಸಾ ಮಾಡಿದೆ, ಅಲ್ಲಿಲ್ಲಿ ಹೋಗಿ ಮೋದಿ ಘಂಟಿ ಹೊಡೆದು ದೀಪ ಬೆಳಗಿಸ್ತಾ ಬುಡುಬುಡಕ್ಯನಂತೆ ಆಡಿದ್ರ ಬಡವರ ಹೊಟ್ಟೆ ತುಂಬುತ್ತಾ? ದೇಶದ ಜನ ಜೀ ರಾಮ್ ಜೀ ಯೋಜನೆ ಬೇಡ, ಮುಂಚಿನ ಮನರೇಗಾ ನೇ ಇರ್ಲಿ ಅಂತಾ ಬೀದಿಗೆ ಇಳಿಯುವಂತೆ ಕರೆ ಕೊಟ್ಟರು.ದೇಶಕ್ಕೆ ಏನ್ ಬೇಕು ಅಂತಾ ತಿಳಿಯದ ಮೋದಿ ಈಗ ಸೋಮನಾಥ ಮಂದಿರದಲ್ಲಿ ಹೋಗಿ ಕುಂತಾನ, ಈ ಮಂದಿರಕ್ಕೆ ಸಾವಿರ ವರ್ಷಾ ಆಯ್ತು ಅಂತಾನ, ಇದೆಲ್ಲ ಈಗ ಯಾಕಂದ್ರ ಯಾಕಂದ್ರ ಅಸ್ಸಾಂಮ್, ಪಂಡಿಚೆರಿ ಸೇರಿದಂತೆ ಮುಂಬರೋ ಹಲವು ರಾಜ್ಯಗಳ ಎಲೆಕ್ಷನ್ ಮ್ಯಾಗ ಅವರ ಕಣ್ಣು, ಕೋಮು ಭಾವನೆ ಕೆರಳಿಸಿ ಅಧಿಕಾರಕ್ಕೆ ಬರೋದೇ ಮೋದಿ ಅಜಂಡ ಎಂದು ಖರ್ಗೆ ಜರಿದರು.
ಹಿಂದೆ ಮೂರು ಕೆಟ್ಟ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು, ಜನ ವಿರೋಧದ ನಂತ್ರ ಅವನ್ನು ಕೈ ಬಿಟ್ರು. ನರೇಗಾ ಯೋಜನೆ ವಿಷಯದಲ್ಲೂ ಹೀಗೇ ಆಗುತ್ತೆ, ಜನ ರೊಚ್ಚಿಗೆದ್ದು ಬೀದಿಗೆ ಇಳಿಯೋ ದಿನಗಳು ದೂರವೇನಿಲ್ಲ ಎಂದು ಖರ್ಗೆ ಹೇಳಿದರು.