ಕ್ಲೀನ್‌ಮ್ಯಾಕ್ಸ್‌- ಬಿಐಎಎಲ್‌ ವಿದ್ಯುತ್‌ ಖರೀದಿ ಒಪ್ಪಂದಕ್ಕೆ ಸಹಿ

KannadaprabhaNewsNetwork |  
Published : Feb 24, 2024, 02:38 AM ISTUpdated : Feb 24, 2024, 01:32 PM IST
Airport | Kannada Prabha

ಸಾರಾಂಶ

ಏಷ್ಯಾದ ಮುಂಚೂಣಿಯ ಸಿ ಆ್ಯಂಡ್‌ ಐ ನವೀಕರಿಸಬಹುದಾದ ಶಕ್ತಿ ಮೂಲಗಳ ಸಂಸ್ಥೆಯಾದ ಕ್ಲೀನ್‍ಮ್ಯಾಕ್ಸ್ ಎನ್ವಿರೋ ಎನರ್ಜಿ ಸಲ್ಯೂಷನ್ಸ್(ಕ್ಲೀನ್‍ಮ್ಯಾಕ್ಸ್) ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) 25 ವರ್ಷಗಳ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಏಷ್ಯಾದ ಮುಂಚೂಣಿಯ ಸಿ ಆ್ಯಂಡ್‌ ಐ ನವೀಕರಿಸಬಹುದಾದ ಶಕ್ತಿ ಮೂಲಗಳ ಸಂಸ್ಥೆಯಾದ ಕ್ಲೀನ್‍ಮ್ಯಾಕ್ಸ್ ಎನ್ವಿರೋ ಎನರ್ಜಿ ಸಲ್ಯೂಷನ್ಸ್(ಕ್ಲೀನ್‍ಮ್ಯಾಕ್ಸ್) ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) 25 ವರ್ಷಗಳ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿವೆ.

ಒಪ್ಪಂದದ ಪ್ರಕಾರ ಕ್ಲೀನ್‍ಮ್ಯಾಕ್ಸ್‌-ಬಿಐಎಎಲ್ ರಿನ್ಯೂಯೇಬಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಎಸ್‍ಪಿವಿ ಅಡಿಯಲ್ಲಿ 45.9 ಮೆಗಾವ್ಯಾಟ್ ಸೌರಶಕ್ತಿ ಸಂಬಂಧಿತ ವಿದ್ಯುತ್ ಯೋಜನೆಯಿಂದ ನವೀಕರಿಸಬಹುದಾದ ಶಕ್ತಿಯ ಉತ್ಪಾದನೆ ಮತ್ತು ಪೂರೈಕೆ ಕೈಗೊಳ್ಳಲಾಗುತ್ತದೆ.

ರಾಜ್ಯದ ಜಗಳೂರಿನಲ್ಲಿ ಈ ಸೌರಶಕ್ತಿ-ವಾಯು ವಿದ್ಯುತ್ ಉತ್ಪಾದನಾ ಯೋಜನೆ(ಕ್ಯಾಪ್ಟಿವ್ ಪವರ್ ಪ್ರಾಜೆಕ್ಟ್) ಇರಲಿದೆ. ಕ್ಲೀನ್‍ಮ್ಯಾಕ್ಸ್ ಇದರ ಮಾಲೀಕತ್ವ ಹೊಂದಿರಲಿದ್ದು, ಕಾರ್ಯಾಚರಣೆ ನೋಡಿಕೊಳ್ಳಲಿದೆ.

ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್‌ ಮಾತನಾಡಿ, ಆಯಾ ಸ್ಥಳಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಗಳನ್ನು ಸ್ಥಾಪಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದ್ದೇವೆ. 

ಜೊತೆಗೆ ನವೀಕರಿಸಬಹುದಾದ ವಿದ್ಯುತ್ ಸಂಗ್ರಹಣೆಗೂ ಕ್ರಮ ಕೈಗೊಂಡಿದ್ದು, ಶೇ.100ರಷ್ಟು ನವೀಕರಿಸಬಹುದಾದ ವಿದ್ಯುತ್ ಬಳಕೆಯನ್ನು ಸುಸ್ಥಿರವಾಗಿ ಉಳಿಸಿಕೊಳ್ಳಲು ಮುಂದಾಗಿದ್ದೇವೆ. 

ಕ್ಲೀನ್‍ಮ್ಯಾಕ್ಸ್‌ನೊಂದಿಗೆ ಒಪ್ಪಂದದಿಂದ ವಿಮಾನ ನಿಲ್ದಾಣದ ವಿದ್ಯುತ್ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಅಲ್ಲದೆ, ಸಾಕಷ್ಟು ವೆಚ್ಚದ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಕ್ಲೀನ್‍ಮ್ಯಾಕ್ಸ್ ಎನ್ವಿರೊ ಎನರ್ಜಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಕುಲ್‍ದೀಪ್ ಜೈನ್ ಅವರು ಬಿಐಎಎಲ್‌ನ ಜತೆಗಿನ ಒಪ್ಪಂದ ಬಗ್ಗೆ ವಿವರಿಸಿ, ಯೋಜನೆ ಬಗ್ಗೆ ಮಾಹಿತಿ ನೀಡಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ