ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವನ (ಸಂರಕ್ಷಣೆ ಮತ್ತು ಸಂವರ್ಧನೆ) ಅಧಿನಿಯಮ 1980 ಮತ್ತು ತಿದ್ದುಪಡಿ ಅಧಿನಿಯಮ 1988 ಮತ್ತು ನಿಯಮ 2023ರಂತೆ ಅರಣ್ಯ ಭೂಮಿಗಳ ಕ್ರೂಢೀಕೃತ ದಾಖಲೆಗಳನ್ನು ಸಿದ್ದಪಡಿಸುವ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶಗಳ ಪಟ್ಟಿಯನ್ನು ಪರಿಶೀಲಿಸಿಕೊಂಡು ಮಾನದಂಡಗಳನ್ವಯ ಕ್ಷೇತ್ರ ಮಟ್ಟದ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ಜಂಟಿ ಪರಿಶೀಲನಾ ಸಮಿತಿ ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡಗಳಿಗೆ ನಿರ್ದೇಶಿಸಿದ ಅವರು, ಅರಣ್ಯ ಭೂಮಿಗಳ ಕ್ರೂಢೀಕೃತ ದಾಖಲೆ ಸಂಬಂಧ ಸರ್ವೇ ಕಾರ್ಯ ನಡೆಸಲು ಷೆಡ್ಯೂಲ್ ಪ್ರಕಾರ ಸಮಯ ನಿಗಧಿಪಡಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ಪರಿಭಾವಿತ ಅರಣ್ಯ ಭೂಮಿಗಳ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿಗಾಗಿ ಎಲ್ಲ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ಅರಣ್ಯ ಭೂಮಿಗಳನ್ನು ಗುರುತಿಸಿ ಕ್ರೂಢೀಕೃತ, ಏಕೀಕೃತ ದಾಖಲೆಗಳನ್ನು ವಗೀಕರಿಸಿ ಸಲ್ಲಿಸಲು ತಾಲೂಕು ಮಟ್ಟದ ಜಂಟಿ ಪರಿಶೀಲನಾ ಸಮಿತಿಯನ್ನು ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡಗಳನ್ನು ರಚಿಸಲಾಗಿರುತ್ತದೆ ಎಂದು ತಿಳಿಸಿದ ಅವರು, ತಾಲ್ಲೂಕು ಮಟ್ಟದ ಜಂಟಿ ಪರಿಶೀಲನಾ ಸಮಿತಿ ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡಗಳು ನಿರ್ವಹಿಸಬೇಕಾದ ಕಾರ್ಯ ವಿಧಾನಗಳ ಕುರಿತು ಸಭೆಗೆ ವಿವರಿಸಿದರು.
ಸಭೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ, ತೋಟಗಾರಿಕೆ ಉಪನಿರ್ದೇಶಕ ಶರಣ ಬಸಪ್ಪ ಬೋಗಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ವಲಯ ಅರಣ್ಯಾಧಿಕಾರಿಗಳು ತಹಸೀಲ್ದಾರ್‌ಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಇದ್ದರು.