15ನೇ ವಾರ್ಡನಲ್ಲಿ ರಸ್ತೆ ಒತ್ತುವರಿ ಜಾಗ ತೆರವುಗೊಳಿಸಿ

KannadaprabhaNewsNetwork |  
Published : Sep 07, 2025, 01:00 AM IST
15ನೇ ವಾರ್ಡನಲ್ಲಿ ರಸ್ತೆ ಒತ್ತುವರಿ ಜಾಗ ತೆರವುಗೊಳಿಸುಂತೆ ಎಡಿಸಿಗೆ ಮನವಿ | Kannada Prabha

ಸಾರಾಂಶ

ನಗರದ 15ನೇ ವಾರ್ಡ್‌ನ 3ನೇ ಮತ್ತು 4ನೇ ಅಡ್ಡ ರಸ್ತೆಗಳಲ್ಲಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ ವಾರ್ಡ್ ನ ನಿವಾಸಿಗಳಿಗೆ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಗರದ 15ನೇ ವಾರ್ಡ್‌ನ 3ನೇ ಮತ್ತು 4ನೇ ಅಡ್ಡ ರಸ್ತೆಗಳಲ್ಲಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ ವಾರ್ಡ್ ನ ನಿವಾಸಿಗಳಿಗೆ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಜೊತೆಗೆ ವಾರ್ಡ್ ನಲ್ಲಿ ಹಾದುಹೋಗುತ್ತಿರುವ ರಾಜಕಾಲುವೆಯ ನೀರು ಸರಿಯಾಗಿ ಹರಿಯದೇ ನಿಂತು ರೋಗ ರುಜಿನಗಳು ಸಂಭವಿಸುತ್ತಿದ್ದು ಇದನ್ನು ತಪ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ನಿವಾಸಿಗಳು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು ನೇತೃತ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡಗೆ ಮನವಿ ಮಾಡಿದರು.

ಬಳಿಕ ನಿವಾಸಿಗಳು ಮಾತನಾಡಿ, ವಾರ್ಡ್‌ 3ನೇ ಮತ್ತು 4ನೇ ಅಡ್ಡ ರಸ್ತೆಯಲ್ಲಿ ಸಂಚರಿಸಲು ರಸ್ತೆ, ಬೀದಿ ದೀಪಗಳು, ಚರಂಡಿಗಳು ಸೇರಿದಂತೆ ಯಾವುದೇ ಮೂಲಸೌಕರ್ಯಗಳು ಸರಿಯಾಗಿ ಇಲ್ಲ. ಈ ಕುರಿತು ನಾವು ನಗರಸಭೆಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಹಲವು ವರ್ಷಗಳಿದ್ದಲ್ಲೂ ಇರುವ ನಿವಾಸಿಗಳು ಈ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ನಮಗೆ ಬಹಳ ನೋವು ತಂದಿದೆ ಮತ್ತು ನಮಗೆ ಮುಂದಿನ ದಾರಿಯೇ ತೋಚದಂತಾಗಿದೆ. ಈ ವಿಷಯದ ಬಗ್ಗೆ ಚಾಮರಾಜನಗರ ನಗರ ಸಭೆಯ ಸಾಮಾನ್ಯ ಸಭೆ ಲೋಕಾಯುಕ್ತ ಕಾಣಿಸಿರುವ 2013-14ರ ಜನೇವರಿ 12ರ ನಡವಳಿಯಲ್ಲಿನ ಪ್ರತಿಯನ್ನು ಈ ಕೂಡ ತಮ್ಮ ಅವಗಾಹನೆಗಾಗಿ ಲಗತ್ತಿಸಲಾಗಿದೆ.

ವರದಿಯಲ್ಲಿ ಅಡಿಯಷ್ಟು ಜಾಗವನ್ನು ಒತ್ತುವರಿಯಾಗಿರುವುದರಿಂದ ಅದನ್ನು ತಾವು ಖುದ್ದು ಸ್ಥಳ ಪರಿಶೀಲನೆ ಮಾಡಿ ತೆರವುಗೊಳಿಸಿಕೊಳ್ಳುವಂತೆ ವರದಿ ನೀಡಿದ್ದಾ. ಆ ವರದಿಯ ಪ್ರತಿಯನ್ನು ತಮ್ಮ ಅವಗಾಹನೆಗಾಗಿ ಈ ಕೂಡ ಲಗತ್ತಿಸಿರುತ್ತದೆ. ಜೊತೆಗೆ ರಾಜಕಾಲುವೆಯ ಪಕ್ಕದಲ್ಲಿರುವ ಸರ್ವೆ ನಂ.367 ಮತ್ತು 368 ರ ಖಾಲಿ ಜಾಗದಲ್ಲಿ ಕೊಳಚೆ ನೀರು ನಿಂತಿದ್ದು ಇದರಿಂದಾಗಿ ಈ ವಾರ್ಡ್‌ ನಿವಾಸಿಗಳಿಗೆ ಸಾಂಕ್ರಾಂಮಿಕ ರೋಗ ಹರಡಬಹುದೆಂಬ ಭೀತಿಯಿಂದ ಜೀವನ ಸಾಗಿಸುದ್ದಾರೆ.

ಕೂಡಲೇ ಸ್ಥಳಕ್ಕೆ ಭೇಟಿ ಇತ್ತು ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಿ ರಸ್ತೆ ಕಲ್ಪಿಸಿಕೊಟ್ಟು ವಾರ್ಡ್‌ನ ಜನತೆಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ರಾಜಕಾಲುವೆಯಲ್ಲಿ ಹರಿಯದೇ ನಿಂತಿರುವ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ವಾರ್ಡ್ ನ ನಿವಾಸಿಗಳು ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ನಿವಾಸಿಗಳಾದ ವಿಜಯಕುಮಾರ್, ಬಂಗಾರನಾಯಕ, ಎಸ್.ಆರ್. ಶೇಷಚಲ, ಮನು ಒತ್ತಾಯಿಸಿದ್ದಾರೆ.

PREV

Recommended Stories

ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌
ಮೈಸೂರು ದಸರಾ: ಜಂಬೂಸವಾರಿ ಟಿಕೆಟ್‌ ₹3500, ಗೋಲ್ಡ್‌ಕಾರ್ಡ್ ₹6500