ಕನ್ನಡ ಪ್ರಭವಾರ್ತೆ, ಮಾಲೂರು
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೂಂದಿಗೆ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ನಡೆಸಿದ ಸಭೆ ನಂತರ ಪತ್ರಕರ್ತರೊಡನೆ ಮಾತನಾಡಿ, ಈಗಾಗಲೇ ಹೊಸಕೋಟೆ-ಮಾಲೂರು ವರೆಗಿನ 18 ಕಿ.ಮೀ.ಉದ್ದದ ನಾಲ್ಕು ಪಥಗಳ ಸಿಮೆಂಟ್ ರಸ್ತೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಕಾಮಗಾರಿ ಸೋಮವಾರದಿಂದ ಪ್ರಾರಂಭವಾಗಲಿದೆ ಎಂದು ಹೇಳಿದರು.ಮೇಲ್ಸೇತುವೆ ಪ್ರಾರಂಭ ಹಾಗೂ ಇಳಿಯುವ ಸ್ಥಳದಲ್ಲಿ ಸರ್ವೀಸ್ ರಸ್ತೆ ಬರುವುದರಿಂದ ಈಗೀರುವ ರಸ್ತೆ ಅವಶ್ಯಕತೆ ಇರುವಷ್ಟು ಅಗಲವಾಗಬೇಕಾಗಿದೆ. ಆ ಸ್ಥಳದಲ್ಲಿ ಇರುವ ಕಟ್ಟಡ ಮಾಲೀಕರು ಈ ಕೊಡಲೇ ಖಾಲಿ ಮಾಡಿ ಅಭಿವೃದ್ಧಿ ಕಾಮಗಾರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇದಲ್ಲದೇ ನಗರದ ವಿವಿಧಡೆ ಇರುವ 96 ನಗರಸಭೆ ಮಳಿಗೆಗಳ ಮರು ಹರಾಜಿಗೂ ಸಿದ್ಧತೆ ನಡೆಸಲಾಗಿದೆ. ಇದರಿಂದ ನಗರಸಭೆ ಅರ್ಥಿಕ ಸ್ಥಿತಿ ಸ್ವಾವಲಂಬಿಯತ್ತ ಹೋಗಲಿದೆ ಎಂದು ಹೇಳಿದರು.ನಗರಸಭೆಯಲ್ಲಿ ಇದುವರಿಗೆ ಸದಸ್ಯರ ಆಟವೇ ಜೋರಾಗಿದ್ದು, ನಗರಸಭೆ ಮಳಿಗೆ ಹಾಗೂ ನಿವೇಶನಗಳನ್ನು ಅಕ್ರಮವಾಗಿ ಮಾಡಿಕೊಳ್ಳುತ್ತಿದ್ದರು. ಈಗ ನನ್ನ ಆಡಳಿತ ಬಂದ ಮೇಲೆ ಎಲ್ಲದಕ್ಕೂ ನಿಯಂತ್ರಣ ತರಲಾಗಿದೆ. ಇದುವರೆಗೂ ಪರಭಾರೆಯಾಗಿರುವ 398 ನಿವೇಶನಗಳನ್ನು ಪತ್ತೆ ಹಚ್ಚಲಾಗಿದೆ ಎಂದರು. ಯಾವ ಕಾಲದಲ್ಲಿ ಈ ಅವ್ಯವಹಾರ ನಡೆದಿದೆ ಮತ್ತು ಯಾರ ಹೆಸರಲ್ಲಿ ಆಗಿದೆ ಎಂಬುಂದರ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಖಾಲಿ ಅಥವಾ ಕಟ್ಟಡ ನಿರ್ಮಾಣವಾಗಿದ್ದರೂ ಖಾತೆ ರದ್ದುಗೊಳಿಸುವ ಜತೆಯಲ್ಲಿ ನಗರಸಭೆ ಆಸ್ತಿ ಮರುವಶಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.ತಾಲೂಕಿನ ಹಗಲು ಕೋಟೆ ಸರ್ಕಾರಿ ಶಾಲೆ ಪ್ರಕರಣದಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ಕೇಳಿರುವ ಸಹಕಾರವನ್ನು ಸ್ವಾಗತಿಸುವುದಾಗಿ ತಿಳಿಸಿದ ಶಾಸಕರು, ನಮ್ಮ ಗ್ರಾಮದ ಪಕ್ಕದಲ್ಲಿದ್ದರೂ ವಿಷಯ ತಿಳಿದಿರಲಿಲ್ಲ. ಈಗ ವಿಷಯ ತಿಳಿದ ತಕ್ಷಣ ಅಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಿದ್ದೇನೆ. ಒಂದು ವೇಳೆ ದಾಖಲೆ ಪ್ರಕಾರ ಸರ್ಕಾರಿ ಶಾಲೆಗೆ ಸೇರಿದ್ದಾಗಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸರ್ಕಾರದ ವಶಕ್ಕೆ ಪಡೆಯುವ ಜತೆಯಲ್ಲಿ ಅದೇ ಜಾಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಸರ್ಕಾರದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ಪ್ರಾಧಿಕಾರದ ಅಧ್ಯಕ್ಷ ನರಸಿಂಹ, ಮುರಳಿಧರ್ ಇನ್ನಿತರರು ಇದ್ದರು.