ಯಂಟಗಾನಹಳ್ಳಿ-ಮರಸರಹಳ್ಳಿ ನಕಾಶೆ ರಸ್ತೆ ತೆರವು

KannadaprabhaNewsNetwork |  
Published : Aug 07, 2026, 02:00 AM IST
ಪೋಟೋ 9 : ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಮತ್ತು ಮರಸರಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ನಕಾಶೆ ರಸ್ತೆಯ ತೆರವು ಕಾರ್ಯ ನಡೆಯುತ್ತಿರುವುದು | Kannada Prabha

ಸಾರಾಂಶ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಮತ್ತು ಮರಸರಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ನಕಾಶೆ ರಸ್ತೆ ತೆರವು ಕಾರ್ಯಾಚರಣೆ ನಡೆದಿದೆ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಮತ್ತು ಮರಸರಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ನಕಾಶೆ ರಸ್ತೆ ತೆರವು ಕಾರ್ಯಾಚರಣೆ ನಡೆದಿದೆ.

ಪ್ರಸ್ತುತ ಯಂಟಗಾನಹಳ್ಳಿಯಿಂದ ಮರಸರಹಳ್ಳಿಯವರೆಗೆ ಸುಮಾರು 3 ಕಿಲೋಮೀಟರ್‌ ನಕಾಶೆ ರಸ್ತೆಯ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕ ಸಂಚಾರಕ್ಕೆ ಹಾಗೂ ರೈತರಿಗೆ ತಮ್ಮ ಜಮೀನುಗಳಿಗೆ ತೆರಳಲು ಅನುಕೂಲವಾಗುವಂತೆ ಶೀಘ್ರದಲ್ಲೇ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಕಾಂಗ್ರೆಸ್ ಮುಖಂಡ ಜಯರಾಮ್ ಮಾತನಾಡಿ, ಕಳೆದ 10 ವರ್ಷಗಳಿಂದ ಯಾರೂ ಸಹ ತೆರವು ಮಾಡಲು ಮುಂದಾಗಿರಲಿಲ್ಲ. ಶಾಸಕ ಶ್ರೀನಿವಾಸ್ ಅವರ ಬೆಂಬಲ ಹಾಗೂ ತಾಲೂಕು ಆಡಳಿತದ ಆದೇಶದಂತೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ನಿಂತು ದಶಕಗಳ ಬೇಡಿಕೆಯನ್ನು ಈಡೇರಿಸಿಕೊಂಡಿದ್ದೇವೆ. ಯಂಟಗಾನಹಳ್ಳಿಯಿಂದ ಮರಸರಹಳ್ಳಿ ರಸ್ತೆ ಸಂಪರ್ಕ ಕಲ್ಪಿಸುವ ಸಂಬಂಧ ಆ ಭಾಗದ ರೈತರನ್ನು ಮನವೊಲಿಸಿ, ಪೂರ್ಣ ಪ್ರಮಾಣದ ಸುಸಜ್ಜಿತ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಈ ತೆರವು ಕಾರ್ಯಾಚರಣೆಯಲ್ಲಿ ಜಿಪಂ ಮಾಜಿ ಸದಸ್ಯ ಸಂಪತ್ ಬಾಬು, ಚಿಕ್ಕಣ್ಣಸ್ವಾಮಿ, ಹನುಮಂತಯ್ಯ, ಭಟ್ಟರಹಳ್ಳಿ ಚೆನ್ನಕೇಶವ, ಕೇಶವಮೂರ್ತಿ, ಚಿಕ್ಕರಂಗಯ್ಯ, ಅನಿಲ್ ಕುಮಾರ್, ರಂಗಧಾಮಯ್ಯ, ಶಿವಕುಮಾರ್, ಹನುಮಂತರಾಜು, ರಮೇಶ್ ಹಾಗೂ ಯಂಟಗಾನಹಳ್ಳಿ ಮತ್ತು ದೊಡ್ಡಕರೇನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಕೋಟ್................

ಈ ರಸ್ತೆ ನಮ್ಮ ಭಾಗದ ಜನರ ಸಂಚಾರಕ್ಕೆ ಹಾದಿ ಮಾಡಿಕೊಟ್ಟಿದೆ. ಶಾಸಕ ಶ್ರೀನಿವಾಸ್ ಅವರ ಸಹಕಾರ ಹಾಗೂ ತಾಲೂಕು ಆಡಳಿತದ ಸ್ಪಂದನೆಯಿಂದ ಈ ಕಾರ್ಯ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಮಾಡಲು ನಿರ್ಧರಿಸಿದ್ದೇವೆ.

-ಚಿಕ್ಕಹನುಮೇಗೌಡ, ಕಾಂಗ್ರೆಸ್ ಮುಖಂಡರು

ಪೋಟೋ 9 :

ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಮತ್ತು ಮರಸರಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ನಕಾಶೆ ರಸ್ತೆಯ ತೆರವು ಕಾರ್ಯಾಚರಣೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ: ಕೆ.ಆರ್.ನಂದಿನಿ
ವಿದ್ಯಾರ್ಥಿಗಳಲ್ಲಿ ಶಿಸ್ತು ಇದ್ದರೆ ಭವಿಷ್ಯ ಉಜ್ವಲ: ಎಚ್.ಎಂ.ಆನಂದ್ ಕುಮಾರ್