ಕನ್ನಡಪ್ರಭ ವಾರ್ತೆ ಮಳವಳ್ಳಿ
ಲೋಕೋಪಯೋಗಿ ಇಲಾಖೆಯ ಎಇಇ ಸೋಮಶೇಖರ್ ಪ್ರತಿಕ್ರಿಯಿಸಿ ಅನುಪಯುಕ್ತ ನೀರಿನ ಹಳೆಯ ಟ್ಯಾಂಕ್ ಹಾಗೂ ಪಂಪ್ ಹೌಸ್ ತೆರವಿನ ಬಗ್ಗೆ ಶಾಲೆಯಿಂದ ಮನವಿ ಪತ್ರಗಳು ಬಂದಿದೆ. ಸದ್ಯದಲ್ಲಿಯೇ ಅಲ್ಲಿಗೆ ಭೇಟಿ ನೀಡಿ ಟ್ಯಾಂಕ್ ಹಾಗೂ ಪಂಪ್ ಹೌಸ್ ಕಟ್ಟಡದ ಸ್ಥಿತಿಗತಿಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ನಾಗಮಂಗಲ: ತಾಲೂಕಿನ ಅದ್ದೀಹಳ್ಳಿ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ವಿದ್ಯುತ್ ನಿರ್ವಹಣೆ ಕಾರ್ಯ ಇರುವುದರಿಂದ ಸದರಿ ಕೇಂದ್ರದಿಂದ ಹೊರಹೋಗುವ 11 ಕೆವಿ ಫೀಡರ್‌ಗಳಿಗೆ ಒಳಪಡುವ ಬಿಂಡಿಗನವಿಲೆ, ದೊಡ್ಡಾಬಾಲ, ಮಾಯಿಗೋನಹಳ್ಳಿ ಮತ್ತು ಹೊನ್ನಾವರ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಅ.29ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸುವಂತೆ ಸೆಸ್ಕಾಂ ಬೆಳ್ಳೂರು ಉಪ ವಿಭಾಗದ ಎಇಇ ಕೋರಿದ್ದಾರೆ.ಹಲವು ಗ್ರಾಮಗಳಲ್ಲಿ ಇಂದು ವಿದ್ಯುತ್ ವ್ಯತ್ಯಯನಾಗಮಂಗಲ: ತಾಲೂಕಿನ ಕಸಲಗೆರೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅ.29 ರಂದು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸದರಿ ವಿದ್ಯುತ್ ಕೇಂದ್ರದ ವ್ಯಾಪ್ತಿಯ ತಾಲೂಕಿನ ದೇವಲಾಪುರ, ತಿಬ್ಬನಹಳ್ಳಿ, ಶೆಟ್ಟಹಳ್ಳಿ, ಅರಕೆರೆ, ಶೆಟ್ಟಹಳ್ಳಿ ಕೊಪ್ಪಲು, ದಾಸಗೋಳಪುರ, ಚೊಟ್ಟನಹಳ್ಳಿ, ನಾಗನಹಳ್ಳಿ, ಕೆಲ್ಲೇನಹಳ್ಳಿ, ಕುಡುಗಬಾಳು, ಮುತ್ಸಂದ್ರ, ಗೊಲ್ಲರಹಳ್ಳಿ, ಕುಂಟಾನುಕೊಪ್ಪಲು, ಹೊಂಬಾಳೆಕೊಪ್ಪಲು, ಕಸಲಗೆರೆ, ಅರಸೇಗೌಡನಕೊಪ್ಪಲು, ಭೀಮನಹಳ್ಳಿ, ಕಾಳಿಕೊಪ್ಪಲು, ಕಜ್ಜಿಕಾಳನಕೊಪ್ಪಲು, ಗುಡುವಿನಹಟ್ನ ಸೋಮನಹಳ್ಳಿ, ಸುನಗನಹಳ್ಳಿ, ಚೋಳೇನಹಳ್ಳಿ, ಸಂಪನಹಳ್ಳಿ, ಹಂಚೀಪುರ, ಮದ್ದೇನಹಟ್ಟಿ, ಜಿ.ಬೊಮ್ಮನಹಳ್ಳಿ, ಮಾವಿನಕೆರೆ ಹಾಗೂ ಸೋಲಿಗರಕೊಪ್ಪಲು ಗ್ರಾಮಗಳ ವ್ಯಾಪ್ತಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸುವಂತೆ ಸೆಸ್ಕಾಂ ನಾಗಮಂಗಲ ಉಪ ವಿಭಾಗದ ಎಇಇ ಕೋರಿದ್ದಾರೆ.
ಇಂದು ಕೊಪ್ಪ, ಟಿ.ಬಳ್ಳೆಕೆರೆ ವ್ಯಾಪ್ತಿ ವಿದ್ಯುತ್ ವ್ಯತ್ಯಯಮದ್ದೂರು: ತಾಲೂಕಿನ ಕೊಪ್ಪ ಟೌನ್ ಹಾಗೂ ಟಿ.ಬಳ್ಳೆಕೆರೆ ಗ್ರಾಮದಲ್ಲಿ ಅ.29 ರಂದು 11 ಕೆ.ವಿ.ಮಾರ್ಗದ ವಿದ್ಯುತ್ ನ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯ ಕೊಪ್ಪ ಹಾಗೂ ಟಿ.ಬಳ್ಳೆಕೆರೆ ಗ್ರಾಮದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೆಇಬಿ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.ಅ.31ರಿಂದ 102ನೇ ಕಾರ್ತಿಕ ಮಾಸದ ಜಾತ್ರೋತ್ಸವ
ಮಂಡ್ಯ: ತಾಲೂಕಿನ ಸುಂಡಹಳ್ಳಿ ವಡ್ಡರಕಟ್ಟೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಅ.31ರಿಂದ ನ.8ರವರೆಗೆ 102ನೇ ಕಾರ್ತಿಕಮಾಸದ ಜಾತ್ರೋತ್ಸವ, ವಿವಿಧ ಪೂಜಾ ಸೇವೆಗಳು ನಡೆಯಲಿದೆ. ಮಹದೇಶ್ವರಸ್ವಾಮಿಗೆ ಅ.21 ರಂದು ಎಣ್ಣೆಮಜ್ಜನ ಸೇವೆ, ನ.1 ರಂದು ಹಾಲುಹರವಿ ಸೇವೆ, ನ.2 ರಿಂದ ನ.7ರವರೆಗೆ ಹುಲಿವಾಹನ ಸೇವೆ, ನ.8 ರಂದು ಸಂಜೆ 5 ಗಂಟೆಗೆ ದಿವ್ಯ ರಥೋತ್ಸವ ನಡೆಯಲಿದೆ. ಸುಂಡಹಳ್ಳಿ, ಸಿದ್ದಯ್ಯನಕೊಪ್ಪಲು, ಇಂಡುವಾಳು, ಕಿರಗಂದೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಧರ್ಮದರ್ಶಿಗಳ ಸಮಿತಿ ತಿಳಿಸಿದೆ.