ಗುಂಡ್ಲುಪೇಟೆತಾಲೂಕಿನ ಬರಗಿ ಗ್ರಾಮದಲ್ಲಿ ಮಹಿಳೆಯರಿಗೆ ಬರಗಿ ಗ್ರಾಪಂನಿಂದ ಪ್ರಾಯೋಗಿಕವಾಗಿ ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬರಗಿ ಗ್ರಾಪಂನಲ್ಲಿ ಚಾಲನೆ ದೊರೆತಿದೆ.ತಾಲೂಕಿನ ಬರಗಿ ಗ್ರಾಪಂನಲ್ಲಿ ಬುಧವಾರ ನಡೆದ ಮಹಿಳಾ ಗ್ರಾಮಸಭೆ ಹಾಗೂ ಮುಟ್ಟಿನ ಕಪ್ ವಿತರಣೆ ಸಮಾರಂಭದದಲ್ಲಿ ಮಹಿಳೆಯರ ಕುಂದು ಕೊರತೆ ಆಲಿಸಿದ ಬಳಿಕ ಸಭೆಯಲ್ಲಿ ಹಾಜರಿದ್ದ ೨೫ ಮಂದಿ ಮಹಿಳೆಯರಿಗೆ ಮುಟ್ಟಿನ ಕಪ್‌ನ್ನು ಗ್ರಾಪಂ ಅಧ್ಯಕ್ಷ ಸೂರ್ಯ ಪ್ರಕಾಶ್ ವಿತರಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬರಗಿ ಗ್ರಾಮದಲ್ಲಿ ಮಹಿಳೆಯರಿಗೆ ಬರಗಿ ಗ್ರಾಪಂನಿಂದ ಪ್ರಾಯೋಗಿಕವಾಗಿ ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬರಗಿ ಗ್ರಾಪಂನಲ್ಲಿ ಚಾಲನೆ ದೊರೆತಿದೆ.ತಾಲೂಕಿನ ಬರಗಿ ಗ್ರಾಪಂನಲ್ಲಿ ಬುಧವಾರ ನಡೆದ ಮಹಿಳಾ ಗ್ರಾಮಸಭೆ ಹಾಗೂ ಮುಟ್ಟಿನ ಕಪ್ ವಿತರಣೆ ಸಮಾರಂಭದದಲ್ಲಿ ಮಹಿಳೆಯರ ಕುಂದು ಕೊರತೆ ಆಲಿಸಿದ ಬಳಿಕ ಸಭೆಯಲ್ಲಿ ಹಾಜರಿದ್ದ ೨೫ ಮಂದಿ ಮಹಿಳೆಯರಿಗೆ ಮುಟ್ಟಿನ ಕಪ್‌ನ್ನು ಗ್ರಾಪಂ ಅಧ್ಯಕ್ಷ ಸೂರ್ಯ ಪ್ರಕಾಶ್ ವಿತರಿಸಿದರು. ಬರಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತ ಮಾತನಾಡಿ ಮಹಿಳೆಯರ ವಯಕ್ತಿಕ ಸ್ವಚ್ಛತೆ, ಮನೆಯ ಸುತ್ತ ಮುತ್ತಲಿನ ನೈರ್ಮಲ್ಯ ಹಾಗೂ ಮುಟ್ಟಿನ ಕಪ್ ಬಳಕೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಮಹಿಳೆಯರು,ಕಾಲೇಜು ವಿದ್ಯಾರ್ಥಿನಿಯರು ಪ್ಯಾಡ್ ಹೆಚ್ಚು ಬಳಸುತ್ತಿದ್ದು ಇದು ನೈರ್ಮಲ್ಯ ಹಾಗೂ ವಯಕ್ತಿಕ ಆರೋಗ್ಯ, ಪರಿಸರದ ಮೇಲೂ ಪರಿಣಾಮ ಬೀರುತ್ತದೆ ಪ್ಯಾಡ್ ಬದಲು ಮುಟ್ಟಿನ ಕಪ್ ಬಳಕೆ ಮಾಡಿಕೊಂಡರೆ ಪರಿಸರ ಚೆನ್ನಾಗಿ ಇರಲಿದೆ ಎಂದರು. ೨೦ ವರ್ಷ ತುಂಬಿದ ಮಹಿಳೆಯರು, ಎನ್‌ಆರ್‌ಎಲ್‌ಎಂಎನ್ ಮಹಿಳಾ ಸ್ವಸಂಘದ ಸದಸ್ಯರು,ಮಹಿಳಾ ಜನಪ್ರತಿನಿಧಿಗಳು,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಬರಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತ ಮಾತನಾಡಿ ಇಂದು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಗ್ರಾಮಸಭೆ ಹಾಗೂ ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮ ಪ್ರಾಯೋಗಿಕವಾಗಿ ಶುರುವಾಗಿದೆ ಎಂದರು. ಮುಟ್ಟಿನ ಕಪ್ ಕಾರ್ಯಕ್ರಮ ಯಶಸ್ವಿಯಾದರೆ ಗ್ರಾಪಂ ವ್ಯಾಪ್ತಿಯ ಸುಮಾರು ೫೦೦ ಕ್ಕೂ ಹೆಚ್ಚು ಮಂದಿಗೆ ಮುಟ್ಟಿನ ಕಪ್ ವಿತರಿಸಲು ಗ್ರಾಪಂ ಮುಂದಾಗಿದ್ದು ಮಹಿಳೆಯರು ಈ ಯೋಜನೆ ಉಪಯೋಗಿಸಿಕೊಳ್ಳಿ ಎಂದರು. ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಾವಿತ್ರಮ್ಮ,ಗ್ರಾಪಂ ಸದಸ್ಯರಾದ ಮಹದೇವಶೆಟ್ಟಿ,ನಾಗಮ್ಮ,ಸರ್ವ,ನಾಗಮ್ಮ ಸೇರಿದಂತೆ ನೂರಾರು ಮಂದಿ ಮಹಿಳೆಯರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.