ವಿದ್ಯಾರ್ಥಿಗಳ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಉತ್ತೇಜನ ನೀಡಲು ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜೆಐಟಿ)ಯಿಂದ ನ.25 ಮತ್ತು 26ರಂದು 24 ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಕ್ಲಾಕಿಟ್-2026 ಅನ್ನು ಕಾಲೇಜಿನಲ್ಲಿ ಆಯೋಜಿಲಾಗಿದೆ ಎಂದು ಕಾಲೇಜಿನ ಅಕಾಡೆಮಿಕ್ ಡೀನ್ ಡಾ. ಕೆ.ಬಿ.ಪ್ರಕಾಶ ತಿಳಿಸಿದ್ದಾರೆ.
- ವಿದ್ಯಾರ್ಥಿಗಳಿಂದ ನಿರಂತರ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿದ್ಯಾರ್ಥಿಗಳ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಉತ್ತೇಜನ ನೀಡಲು ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜೆಐಟಿ)ಯಿಂದ ನ.25 ಮತ್ತು 26ರಂದು 24 ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಕ್ಲಾಕಿಟ್-2026 ಅನ್ನು ಕಾಲೇಜಿನಲ್ಲಿ ಆಯೋಜಿಲಾಗಿದೆ ಎಂದು ಕಾಲೇಜಿನ ಅಕಾಡೆಮಿಕ್ ಡೀನ್ ಡಾ. ಕೆ.ಬಿ.ಪ್ರಕಾಶ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಕಾಲೇಜಿಗೆ ನೈನ್ 2.0 (ನ್ಯೂ ಏಜ್ ಇನ್ನೋವೇಶನ್ ನೆಟ್ ವರ್ಕ್ ಕೇಂದ್ರ ಮಂಜೂರಾಗಿದೆ. ಸುಮಾರು ₹2 ಕೋಟಿ ಅನುದಾನವೂ ದೊರೆತಿದೆ. ಮೊದಲ ಹಂತದಲ್ಲಿ ₹20 ಲಕ್ಷ ಬಿಡುಗಡೆಯಾಗಿದೆ ಎಂದರು.
ಕಾಲೇಜಿನ 10 ವಿದ್ಯಾರ್ಥಿ ಪ್ರಾಜೆಕ್ಟ್ಗಳನ್ನು ಆಯ್ಕೆ ಮಾಡಿ, ಪ್ರತಿ ಪ್ರಾಜೆಕ್ಟ್ಗೆ ತಲಾ ₹5 ಲಕ್ಷ ನೀಡಲಾಗಿದೆ. 2 ಮತ್ತು 3ನೇ ಹಂತದ ಯೋಜನೆ ಮುಂದಿನ ವರ್ಷ ಆರಂಭವಾಗಲಿದೆ. ಎಐಸಿಟಿ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ) ನೀಡಿದ ₹90 ಲಕ್ಷ ಅನುದಾನದಲ್ಲಿ ಕಾಲೇಜಿನಲ್ಲಿ ಎಐಸಿಟಿಇ ಐಡಿಯಾ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಅತ್ಯಾಧುನಿಕ ಉಪಕರಣ ಅಲ್ಲಿ ಅಳವಡಿಸಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ಲಭ್ಯವಾಗುತ್ತಿದೆ. ಎಂಎಸ್ಎಂಇನಿಂದಲೂ ಕಾಲೇಜಿಗೆ ಮಾನ್ಯತೆ ಸಿಕ್ಕಿದ್ದು, ವಿದ್ಯಾರ್ಥಿಗಳು ಸಕಾರಾತ್ಮಕ ಆಲೋಚನೆ ಮೂಲಕ ಹಲವು ಸ್ಟಾರ್ಟಪ್ ಹಾಗೂ ಉತ್ಪನ್ನ ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ಹೇಳಿದರು.
ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥೆ ಡಾ.ಬಿ.ಎಂ.ಲತಾ ಮಾತನಾಡಿ, ವಿದ್ಯಾರ್ಥಿಗಳ ಆವಿಷ್ಕಾರಗಳಿಗೆ ಬೆನ್ನೆಲುಬಾಗಿ ನಿಲ್ಲಲು ಜೆಐಟಿ ಗ್ರಂಥಾಲಯದಲ್ಲಿ ಹಮ್ಮಿಕೊಂಡದ ಕ್ಲಾಕಿಟ್-2025 ಹ್ಯಾಕಥಾನ್ ನ.25ರ ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮುಖೇಶ್ ಅಂಬಾನಿ ಸಂಸ್ಥೆಯಲ್ಲಿ 5 ವರ್ಷ ಕಾರ್ಯನಿರ್ವಹಿಸಿದ, ಸ್ಟಾರ್ಟಪ್ ಕ್ಷೇತ್ರದಲ್ಲಿ 25 ವರ್ಷ ಅನುಭವ ಹೊಂದಿರುವ ತಾಂತ್ರಿಕ ಸಲಹೆಗಾರ ಪ್ರಶಾಂತ ಸೇಠ್ ಕಾರ್ಯಕ್ರಮ ಉದ್ಘಾಟಿಸುವರು ಎಂದು ತಿಳಿಸಿದರು.
ಎರಡೂ ದಿನ 24 ಗಂಟೆ ಕಾಲ ಚಹಾ ಮತ್ತು ಕಾಫಿ ವಿರಾಮ ಹೊರತುಪಡಿಸಿ ಯಾವುದೇ ಅಡೆತಡೆಯಿಲ್ಲದೆ ವಿದ್ಯಾರ್ಥಿಗಳು ನಿರಂತರ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯದಲ್ಲಿ ತೊಡಗಲಿರುವುದು ಈ ಹ್ಯಾಕಥಾನ್ ವಿಶೇಷತೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಕಾಲೇಜುಗಳಿಂದ ತಲಾ 4 ವಿದ್ಯಾರ್ಥಿಗಳಂತೆ 100 ತಂಡಗಳಲ್ಲಿ ಒಟ್ಟು 400 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸ್ಪರ್ಧೆಗೆ ₹650 ನೋಂದಣಿ ಶುಲ್ಕ ನಿಗದಿಪಡಿಸಿದೆ ಎಂದು ವಿವರಿಸಿದರು.
ಆಯೋಜಕರು ಸ್ಪರ್ಧೆಗಳಲ್ಲಿ ಟೆಕ್ನಾಲಜಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀಡಿರುತ್ತಾರೆ. ಸ್ಪರ್ಧಿ ವಿದ್ಯಾರ್ಥಿಗಳು ಎಐ ಟೆಕ್ನಾಲಜಿ, ತಮ್ಮ ಪ್ರತಿಭೆ, ಜಾಣ್ಮೆ ಬಳಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿದ್ದಾರೆ. ಹ್ಯಾಕಥಾನ್ ಸ್ಪರ್ಧೆಯಲ್ಲಿ ವಿಜೇತರಿಗೆ ಒಟ್ಟು ₹30 ಸಾವಿರ ನಗದು ಬಹುಮಾನ ನೀಡಲಾಗುವುದು. ವಿಜೇತ ಮೊದಲ ತಂಡಕ್ಕೆ ₹15 ಸಾವಿರ, ದ್ವಿತೀಯ ಸ್ಥಾನಕ್ಕೆ ₹10 ಸಾವಿರ, ತೃತೀಯ ಸ್ಥಾನಕ್ಕೆ ₹5 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇನ್ಫಾರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ. ಎಚ್.ಎಸ್. ಸರಸ್ವತಿ, ಎಐ ಮತ್ತು ಎಂಎಲ್ ವಿಭಾಗ ಮುಖ್ಯಸ್ಥ ಡಾ.ಅಜೀಜ್ ಖಾನ್ ಎಫ್.ಪಠಾಣ್ ಇತರರು ಇದ್ದರು.
- - -
-24ಕೆಡಿವಿಜಿ2: ದಾವಣಗೆರೆಯಲ್ಲಿ ಮಂಗಳವಾರ ಜೈನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಕಾಡೆಮಿಕ್ ಡೀನ್ ಡಾ.ಕೆ.ಬಿ.ಪ್ರಕಾಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.