ಮಾನಸಿಕ ರೋಗಿಗಳ ಜತೆ ಆಪ್ತ ಸಮಾಲೋಚನೆ ಅಗತ್ಯ: ನ್ಯಾ.ಕಿಶನ್‌ ಮಾಡಲಗಿ

KannadaprabhaNewsNetwork |  
Published : Oct 17, 2024, 12:01 AM ISTUpdated : Oct 17, 2024, 12:02 AM IST
ಚಿತ್ತಾಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೊಗ್ಯ ಇಲಾಖೆ ರವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಾನಸಿಕ ಆರೊಗ್ಯ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಧೀಶರಾದ ಕಿಶನ್ ಮಾಡಲಗಿ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಚಿತ್ತಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ನ್ಯಾ.ಕಿಶನ್‌ ಮಾಡಲಗಿ ಮಾತನಾಡಿದರು. ಮಾನಸಿಕ ರೋಗಿಗಳ ಹಿತರಕ್ಷಣೆಗಾಗಿ ಕಾನೂನಿನ ಚೌಕಟ್ಟಿನಲ್ಲಿ ಕಾಯ್ದೆಗಳಿದ್ದು, ನ್ಯಾಯಲಯದಿಂದ ಆದೇಶ ನೀಡಿದ ನಂತರ ಚಿಕಿತ್ಸೆ ನೀಡಲು ಅವಕಾಶವಿದೆ ಎಂದರು.

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

ಮಾನಸಿಕ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಅವರೊಂದಿಗೆ ಅಪ್ತ ಸಮಾಲೊಚನೆ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರಾದ ಕಿಶನ್ ಮಾಡಲಗಿ ಹೇಳಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೊಗ್ಯ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಮಾನಸಿಕ ಆರೊಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಗೆ ಪ್ರತಿದಿನದ ಮತ್ತು ಸಂಸಾರದ ಒತ್ತಡ ಇರುವದರಿಂದ ಪ್ರತಿಯೊಬ್ಬರಲ್ಲಿ ಮಾನಸಿಕ ಲಕ್ಷಣಗಳು ಇರುತ್ತವೆ. ಆದರೆ ಆ ಲಕ್ಷಣಗಳು ಅತಿರೇಕಕ್ಕೆ ಹೋದಾಗ ಮಾತ್ರ ಮಾನಸಿಕ ರೋಗಿಗಳಾಗುತ್ತಾರೆ. ರೋಗಿಗಳಾದ ನಂತರ ರಸ್ತೆಯ ಮೇಲೆ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಏಕಾಂಗಿಯಾಗಿ ಮಾತನಾಡುವುದು ಮತ್ತು ಇನ್ನಿತರ ವಿಚಿತ್ರ ಮನೋಭಾವನೆಗಳು ಹುಟ್ಟಿಕೊಳ್ಳುತ್ತವೆ. ಇಂತಹ ರೋಗಿಗಳಿಗೆ ಚಿಕಿತ್ಸೆ ಜೊತೆಗೆ ಆಪ್ತ ಸಮಾಲೊಚನೆ ಮಾಡುವ ಅಗತ್ಯವಿದೆ. ಮಾನಸಿಕ ರೋಗಿಗಳ ಹಿತರಕ್ಷಣೆಗಾಗಿ ಕಾನೂನಿನ ಚೌಕಟ್ಟಿನಲ್ಲಿ ಕಾಯ್ದೆಗಳಿದ್ದು, ನ್ಯಾಯಲಯದಿಂದ ಆದೇಶ ನೀಡಿದ ನಂತರ ಚಿಕಿತ್ಸೆ ನೀಡಲು ಅವಕಾಶವಿದೆ ಎಂದರು.

ತಹಸೀಲ್ದಾರ್‌ ನಾಗಯ್ಯ ಹಿರೆಮಠ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ವೈದ್ಯಕೀಯ ತಂಡದ ಜೊತೆಗೆ ವಿವಿಧ ಇಲಾಖೆಯಗಲ್ಲಿ ಸೇವೆ ಸಲ್ಲಿಸುವ ನೌಕರರು ಕೊರೊನಾ ಸೋಂಕಿತರಿಗೆ ಮತ್ತು ನಿಗಾ ಘಟಕದಲ್ಲಿ ವ್ಯವಸ್ಥೆ ಮಾಡುವ ಸಂದರ್ಭದಲ್ಲಿ ಅತಿ ಹೆಚ್ಚು ಜನರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಪ್ರತಿದಿನ ತಮ್ಮ ಕಚೇರಿಯಲ್ಲಿ ಕೆಲಸ ಕಾರ್ಯಗಳಿಂದ ಸರಿಯಾದ ಸಮಯಕ್ಕೆ ಊಟ ನಿದ್ದೆ ಆಗದೇ ಇರುವುದರಿಂದಲೂ ಮಾನಸಿಕವಾಗಿ ಕುಗ್ಗುವಂತಹ ಪರಿಸ್ಥಿತಿ ಉಂಟಾಗುತ್ತಿತ್ತು. ಇದೆಲ್ಲದರ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.

ಕಿರಿಯ ಶ್ರೇಣಿ ನ್ಯಾಯಧೀಶರಾದ ಸಂತೋಷ ಕುಮಾರ ದೈವಜ್ಞ, ತಾಲೂಕು ಆರೊಗ್ಯಾಧಿಕಾರಿ ಸೈಯದ್ ರಜಿವುಲ್ಲಾ ಖಾದ್ರಿ, ಸಿಡಿಪಿಓ ಆರತಿ ತುಪ್ಪದ, ಉಪನ್ಯಾಸಕರಾಗಿ ಆಗಮಿಸಿದ್ದ ಜಿಮ್ಸ್‌ ಆಸ್ಪತ್ರೆಯ ಮನೊ ವೈದ್ಯ ಡಾ. ಚಂದ್ರಶೇಖರ ಹುಂಡೇಕರ್ ಮಾತನಾಡಿದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಅಂಜನಾದೇವಿ, ವಕೀಲರ ಸಂಘದ ಅಧ್ಯಕ್ಷ ನಾಗರಾಜ ಕಡಬೂರ, ಎಪಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಅಲ್ಪಾ, ಶ್ರೀಮಂತ ಸಂಗಾವಿ, ಹರಿದಾಸ್, ಡಾ. ಮೊಹಿದ್ದಿನ್ ಮೊಬಾಶಿರ ವೇದಿಕೆಯಲ್ಲಿದ್ದರು. ಅಧಿಕಾರಿಗಳು, ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ