ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಜ್ಞಾನೋದಯ ಶಾಲೆ ವಿದ್ಯಾರ್ಥಿಗಳ ಸಾಧನೆ

KannadaprabhaNewsNetwork |  
Published : Sep 07, 2024, 01:30 AM IST
ಭಾಗಮಂಡಲ ಸ. ಹಿ. ಪ್ರಾ. ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು  | Kannada Prabha

ಸಾರಾಂಶ

ಭಾಗಮಂಡಲ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಗೆದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಭಾಗಮಂಡಲ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಗೆದ್ದಿದ್ದಾರೆ.

1 ರಿಂದ 4ನೇ ತರಗತಿಯ ವಿಭಾಗದಲ್ಲಿ ಹಮ್ನ (ಮಣ್ಣಿನ ಮಾದರಿ ತಯಾರಿ ), ಹವ್ಯ (ಕಥೆ ಹೇಳುವುದು ), ಪ್ರಣಾಮ್ಯ (ಚಿತ್ರಕಲೆ ), ತನ್ವಿಕ ( ಛದ್ಮವೇಷ ), ನೆಬೀಲ್ ( ಹಿಂದಿ ಕಂಠಪಾಠ ) ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ನಿಕ್ಕಿ ನಂಜಪ್ಪ (ಆಶುಭಾಷಣ ), ಮಿಸ್ಬ (ಧಾರ್ಮಿಕ ಪಠಣ ಅರೇಬಿಕ್ ) ದ್ವಿತೀಯ ಬಹುಮಾನವನ್ನೂ, ಪೊನ್ನಮ್ಮ (ಅಭಿನಯ ಗೀತೆ), ದೀಪಾಲಿ (ಭಕ್ತಿ ಗೀತೆ)ತೃತೀಯ ಬಹುಮಾನ ಪಡೆದಿದ್ದಾರೆ.

5ರಿಂದ 7ನೇ ತರಗತಿ ವಿಭಾಗದಲ್ಲಿ ರೀತಿಶ್ರೀ (ಭಾವಗೀತೆ ), ಯುಕ್ತ (ಮಿಮಿಕ್ರಿ) ಪ್ರಥಮ ಬಹುಮಾನ, ಮೇಘನಾ (ಚಿತ್ರಕಲೆ), ರಕ್ಷ (ಪ್ರಬಂಧ), ಹಿರಾಲ್ ಕಾರಿಯಪ್ಪ (ಆಶುಭಾಷಣ), ಬೃಂದಾ ಎ.ಎನ್. (ಹಿಂದಿ ಕಂಠಪಾಠ) ದ್ವಿತೀಯ ಸ್ಥಾನ, ಸಜನ್ (ಮಣ್ಣಿನ ಮಾದರಿ), ದೃಶ್ಯ (ಕಥೆ ಹೇಳುವುದು), ಬಿನಿಶ್ (ಧಾರ್ಮಿಕ ಪಠಣ ಸಂಸ್ಕೃತ), ಲವ್ಯ (ಭಕ್ತಿ ಗೀತೆ) ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

8ರಿಂದ 12ನೇ ತರಗತಿ ವಿಭಾಗದಲ್ಲಿ ನಿಧಿ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದಿದ್ದಾರೆ. ಮೌಲ್ಯ (ಕವನ ವಾಚನ), ಫಾತಿಮಾತ್ ಹಿಬಾ (ಇಂಗ್ಲಿಷ್ ಭಾಷಣ), ಕುಶಾಲಪ್ಪ (ಆಶುಭಾಷಣ ), ಸುಪ್ರ (ಪ್ರಬಂಧ), ಮುನಾಜ್ (ಧಾರ್ಮಿಕ ಪಠಣ ಅರೇಬಿಕ್ ) ಹಾಗೂ ಸುಪ್ರ ಮತ್ತು ಕುಶಾಲಪ್ಪ ತಂಡ (ರಸಪ್ರಶ್ನೆ) ದ್ವಿತೀಯ ಸ್ಥಾನ, ಪ್ರಣಮ್ (ಹಿಂದಿ ಭಾಷಣ), ಶಮ್ನ (ಕನ್ನಡ ಭಾಷಣ), ಸ್ಪಂದನ (ಚಿತ್ರಕಲೆ), ಲಕ್ಷಿತಾ (ಭಾವಗೀತೆ), ಹೇಮಂತ್ (ಚರ್ಚಾ ಸ್ಪರ್ಧೆ), ಮೌಲ್ಯ (ಧಾರ್ಮಿಕ ಪಠಣ ಸಂಸ್ಕೃತ), ರಂಶ (ಮಿಮಿಕ್ರಿ) ತೃತೀಯ ಸ್ಥಾನ ಜಯಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ