ವಿದ್ಯಾಗಣಪತಿ ಮಂಡಳಿಯಿಂದ ಆಯೋಧ್ಯೆ ಗಣಪತಿ ಪ್ರತಿಷ್ಠಾಪನೆ । ಮಹಿಳೆಯರಿಂದ ದೇವಿಯ ಪೂಜೆ
ಗೌರಿ ಹಬ್ಬವನ್ನು ಶುಕ್ರವಾರ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಮಹಿಳೆಯರು ದೇವಸ್ಥಾನಕ್ಕೆ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದ್ದ ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆಸಿ ತಮ್ಮ ಆಶೋತ್ತರಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.
ಹೊಸದಾಗಿ ಮದುವೆಯಾದವರು, ಮಕ್ಕಗಳಾಗದೇ ಇರುವವರು, ಮುತ್ತೈದೆಯರು ಗೌರಿಗೆ ಬಾಗಿನ ಅರ್ಪಿಸಿದರು, ಕೆಲವರು ಮುತ್ತೈದೆಯರಿಗೆ ಬಾಗಿನ ನೀಡಿ ಆಶೀರ್ವಾದ ಪಡೆದರು. ಮತ್ತೆ ಕೆಲವರು ಪರಸ್ಪರ ಅರಿಶಿನ ಕುಂಕುಮ ನೀಡಿ, ಮಾಂಗಲ್ಯ ಪೂಜೆ ಮಾಡಿ ಮುತ್ತೈದೆತನಕ್ಕೆ ಪ್ರಾರ್ಥಿಸಿದರು.ಜಿಲ್ಲಾ ಕೆಂದ್ರದ ಚಾಮರಾಜೇಶ್ವರ ದೇವಸ್ಥಾನ, ವೀರಭದ್ರಸ್ವಾಮಿ ದೇವಸ್ಥಾನ, ರಾಮಮಂದಿರಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಗೌರಿಯ ವಿಶೇಷ ಪೂಜೆಗೆ ಅನುವು ಮಾಡಿಕೊಡಲಾಗಿತ್ತು. ಕೆಲವರು ಮನೆ ಮನೆಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿಕೊಂಡು ಪೂಜೆ ಮಾಡಿ, ಮುತ್ತೈದೆಯರಿಗೆ ಮನೆಗೆ ಅರಿಶಿನ, ಕುಂಕುಮ ನೀಡಿದರು.
ಆಯೋಧ್ಯೆ ಗಣಪತಿ ಪ್ರತಿಷ್ಠಾಪನೆ: