ರಾಜ್ಯ ಬರದಿಂದ ಈಗಾಗಲೇ ತತ್ತರಿಸಿ ಹೋಗಿದೆ, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ, ಜಾನುವಾರುಗಳ ಮಾರಾಟವಾಗ್ತಿವೆ, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ, ರಾಜ್ಯದಲ್ಲಿ ಮಂತ್ರಿಗಳು ಓಡಾಡಿ ಗಮನಿಸುತ್ತಿಲ್ಲ, ಸಿಎಂ ಡಿಕೆ ಶಿವಕುಮಾರ್, ಮಂತ್ರಿಗಳು, ಬರಿ ಡೆಲ್ಲಿ ಟ್ರಿಪ್‌ನಲ್ಲಿ ಬ್ಯುಸಿಯಾಗಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯ ಬರದಿಂದ ಈಗಾಗಲೇ ತತ್ತರಿಸಿ ಹೋಗಿದೆ, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ, ಜಾನುವಾರುಗಳ ಮಾರಾಟವಾಗ್ತಿವೆ, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ, ರಾಜ್ಯದಲ್ಲಿ ಮಂತ್ರಿಗಳು ಓಡಾಡಿ ಗಮನಿಸುತ್ತಿಲ್ಲ, ಸಿಎಂ ಡಿಕೆ ಶಿವಕುಮಾರ್, ಮಂತ್ರಿಗಳು, ಬರಿ ಡೆಲ್ಲಿ ಟ್ರಿಪ್‌ನಲ್ಲಿ ಬ್ಯುಸಿಯಾಗಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಐವಾನ್-ಇ-ಶಾಹಿ ಅತಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಸಚಿವರು, ಶಾಸಕರುಗಳು ಬೆಂಗಳೂರು ಟು ಡೆಲ್ಲಿ, ಡೆಲ್ಲಿ ಟು ಬೆಂಗಳೂರು ಟ್ರಿಪ್‌ನಲ್ಲಿ ಬ್ಯುಸಿಯಾಗಿದ್ದಾರೆ, ಸಂಕಷ್ಟದಲ್ಲಿರುವ ಜನರ ಕೈಗೆ ಮಂತ್ರಿಗಳು, ಶಾಸಕರು ಸಿಗುತ್ತಿಲ್ಲ, ರೈತರಿಗೆ ಈ ಸರ್ಕಾರ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ನಡೆಯನ್ನು ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ, ಆ ನಿಟ್ಟಿನಲ್ಲಿ ಇದೇ ತಿಂಗಳು ೨೩, ೨೪, ೨೫ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಲಾಗಿದೆ. ಕುಡಿಯುವ ನೀರಿಗಾಗಿ, ದನಕರುಗಳಿಗೆ ಮೇವು ಪೂರೈಕೆಗಾಗಿ, ಜನರ ಉದ್ಯೋಗಕ್ಕಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆಂದು ತಿಳಿಸಿದರು.
ಬರದಿಂದ ತತ್ತರಿಸಿರುವ ರೈತರಿಗೆ ಮಧ್ಯಂತರ ಪರಿಹಾರವಾಗಿ ಹಣ ಕೊಡ್ತೀವಿ ಅಂತಾ ಸುಳ್ಳು ಹೇಳುತ್ತಿದ್ದಾರೆ, ಇದು ರೈತರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಮೋಸವಾಗಿದೆ ಎಂದು ದೂರಿದರು.
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಸಮಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ೫ನೇ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟು ಅವಮಾನ ಮಾಡಿದ್ದಾರೆ, ಒಬ್ಬ ಮಾಜಿ ಸಿಎಂ, ನಾಡುಕಂಡ ಉತ್ತಮ ಮುಖ್ಯಮಂತ್ರಿ ಅವರನ್ನು 5ನೇ ಸಾಲಿನಲ್ಲಿ ಕೂರಿಸಿರೋದು ಎಷ್ಟು ಸರಿ.. ಇದರಿಂದ ರಾಜ್ಯದಲ್ಲಿರೋ ಕುರುಬ ಸಮುದಾಯ ಏನು ಭಾವಿಸಬೇಕು ಎಂದು ಕಿಡಿಕಾರಿದರು.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಮರ್ಯಾದೆ ಮೂರು ಫೈಸೆ ಇಲ್ಲ, ಇಷ್ಟು ದೊಡ್ಡ ಅವಮಾನ ಮಾಡಿರೋದು ಎಷ್ಟು ಸರಿ, ರಾಹುಲ್ ಗಾಂಧಿಗೆ ಸಾಮಾನ್ಯ ಜ್ಞಾನವೂ ಸಹ ಇಲ್ಲ, ರಾಹುಲ್ ಗಾಂಧಿ ಕೂಡಲೇ ಕ್ಷಮೇ ಕೇಳಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ೪ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರ ಚುನಾವಣೆಯಲ್ಲಿ ಹೇಗೆ ಎನ್‌ಡಿಎ ಗೆಲುವ ಸಾಧಿಸಿದೆಯೋ ಹಾಗೆಯೇ ಹಿರಿಯೂರಲ್ಲಿಯೂ ಎನ್‌ಡಿಎ ಅಭ್ಯರ್ಥಿ ಗೆಲ್ಲೋದು ನಿಶ್ಚಿತ. ಹಿರಿಯೂರು ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಶಾ, ನರೇಂದ್ರ ಮೋದಿಯವರು ಎನ್ ಡಿ ಎ ಅಹವಾಲು ಕೇಳಿ ಟಿಕೆಟ್ ಫೈನಲ್ ಮಾಡ್ತಾರೆಂದು ಹೇಳಿದರು.
ಬಿಜೆಪಿ, ಜೆಡಿಎಸ್ ಇಬ್ಬರಲ್ಲಿ ಒಬ್ಬರಿಗೆ ಸಿಗುತ್ತೆ. ಯಾರಿಗೆ ಕೊಟ್ರು ಕೆಲಸ ಮಾಡ್ತಿವಿ ಎಂದು ಹೇಳಿದರು. ಸಿಎಂ ಡಿಕೆಶಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೋನ್ ಟ್ಯಾಪ್ ಆರೋಪ ವಿಚಾರದಲ್ಲಿ ಮಾತನಾಡಿದ ರವಿಕುಮಾರ್, ಕದ್ದಾಲಿಕೆ ಆಗಿದ್ರೆ ಬಿಡುಗಡೆ ಮಾಡಲಿ. ಯಾರು ಮಾಡಿದ್ರು ?.. ಏನು ಅಂತಾ ಬಿಡುಗಡೆ ಮಾಡಲಿ, ಅದೊಂದು ಸುಳ್ಳಿನ ಕಂತೆ, ನಮ್ ಪ್ರಧಾನಿಗಳು ಸಣ್ಣ ನಾಯಕರಾ..?.. ಎಂದು ಪ್ರಶ್ನಿಸಿದರು.
ಇಲ್ಲಿ ಕಬ್ಬಿನ ಬೆಳೆಗಾರರು ಹೋರಾಟ ಮಾಡಿದಾಗ, ಶಾಸಕರು ಅನುದಾನ ಕೇಳಿದಾಗ, ರೈತರು ಹೋರಾಟ ಮಾಡಿದಾಗ ಇವರ ಪೋನ್ ಕದ್ದಾಲಿಕೆ ಆಗುತ್ತೆ, ಬೇರೆ ಸಮಯದಲ್ಲಿ ಪೋನ್ ಕದ್ದಾಲಿಕೆ ಆಗಲ್ವಾ..? ಇಷ್ಟು ದಿನ ಪೋನ್ ಟ್ಯಾಪ್ ಆಗಿರಲಿಲ್ವಾ, ಇವಾಗ ಮಾತ್ರ ಆಗುತ್ತಾ. ಪ್ರಧಾನ ಮಂತ್ರಿ ಬಗ್ಗೆ ಮಾತಾಡಬೇಕಾದರೆ ಸೌಜನ್ಯ ಇಟ್ಟುಕೊಳ್ಳಬೇಕು. ಪ್ರಧಾನಿಗಳು ಪೋನ್ ಕದ್ದಾಲಿಕೆ ಮಾಡುವಷ್ಟು ಸಣ್ಣ ನಾಯಕರಾ? ಎಂದು ಪ್ರಶ್ನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.