ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈ ಭಾಷಣ ವಾಟ್ಸ್ಯಾಪ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಾಷಣದ ಭರದಲ್ಲಿ ಮುಖ್ಯಮಂತ್ರಿಗಳು ಆಡಿರುವ ಮಾತುಗಳು ಭಕ್ತರ ಭಾವನೆಗೆ ನೋವನ್ನು ಉಂಟು ಮಾಡಿದೆ. ಅದಕ್ಕಾಗಿ ಎಲ್ಲಾ ಸ್ವಾಮೀಜಿಗಳಲ್ಲಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಮಾನಕ್ಕೆ ತಕ್ಕುದಲ್ಲದ ಆ ಮಾತುಗಳಿಗೆ ಎಲ್ಲ ಗುರುಗಳಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಇತ್ತೀಚಿಗೆ ಬೆಂಗಳೂರಿನಲ್ಲಿ, ಪಂಚಪೀಠ ಸ್ವಾಮೀಜಿಗಳ ಸಮಕ್ಷಮದಲ್ಲಿ, ನೂರಾರು ಶಿವಾಚಾರ್ಯರ ಉಪಸ್ಥಿತಿಯಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ, ವೀರಶೈವ-ಲಿಂಗಾಯತ ಮಠಾಧೀಶರ ಕುರಿತು ಆಡಿರುವ ಕೆಲವು ಮಾತುಗಳು ಖಂಡನೀಯ. ಶತಮಾನಗಳಿಂದ ಜ್ಞಾನ, ಶಿಕ್ಷಣ, ದಾಸೋಹ, ಸಂಸ್ಕಾರ ಮತ್ತು ಸಮಾಜ ಸೇವೆಯ ಮೂಲಕ ಕೋಟ್ಯಂತರ ಜನರಿಗೆ ದಾರಿ ತೋರಿದ ಹರ-ಗುರು- ಚರ ಮೂರ್ತಿಗಳ ಕುರಿತು ಮಾತನಾಡುವಾಗ ರಾಜ್ಯದ ಮುಖ್ಯಮಂತ್ರಿಗಳ ಸ್ಥಾನದ ಘನತೆಯ ಜೊತೆಗೆ ಸ್ವಾಮೀಜಿಗಳ ಸ್ಥಾನಕ್ಕೆ ತಕ್ಕ ಗೌರವ ಮತ್ತು ಮಾತುಗಳಲ್ಲಿ ಸಂಯಮ ಕಾಯ್ದು ಕೊಳ್ಳಬೇಕಿತ್ತು. ಎಲ್ಲಾ ಪೂಜ್ಯ ಮಠಾಧೀಶರ, ಹರ ಚರ ಮೂರ್ತಿಗಳ ಸ್ಥಾನಕ್ಕೆ ಧಕ್ಕೆ ತರುವ ಮಾತುಗಳು ವೀರಶೈವ-ಲಿಂಗಾಯತ ಸಮಾಜದ ಭಾವನೆಗಳಿಗೆ ನೋವುಂಟುಮಾಡಿವೆ ಎಂದು ದೂರಿದರು.ನಮ್ಮ ಸಂಸ್ಕೃತಿಯಲ್ಲಿ ಗುರುಗಳಾಗಲಿ, ಮಠಾಧೀಶರಾಗಲಿ ಅಧಿಕಾರದ ಮುಂದೆ ತಲೆಬಾಗುವವರಲ್ಲ. ಅವರನ್ನು ನಿಮ್ಮರಾಯಭಾರಿಗಳೆನ್ನುವುದು, ನಮ್ಮಸೇವೆ ಮಾಡಬೇಕು, ಆಗ ಮಾತ್ರ ನಿಮ್ಮ ಅಭಿವೃದ್ಧಿ, ನಿಮ್ಮ ಮುಕ್ತಿ ಎನ್ನುವಂತಹ ಮಾತುಗಳು ಯಾವ ಸನ್ನಿವೇಶ, ಪ್ರಸಂಗದಲ್ಲೂ ಕೂಡ ಸರಿಯಾದ ಮಾತುಗಳಲ್ಲ. ಅದರಲ್ಲೂ ಸಂತರ ಬಗ್ಗೆ, ಸ್ವಾಮೀಜಿಗಳ ಬಗ್ಗೆ ನಿಮ್ಮ ಮಾತುಗಳನ್ನು ಯಾರೂ ಕೂಡ ಒಪ್ಪಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಎಸ್‌ಎಸ್. ಜ್ಯೋತಿ ಪ್ರಕಾಶ್, ಬಳ್ಳಕೆರೆ ಸಂತೋಷ್, ಮಹಾ ಲಿಂಗಯ್ಯ ಶಾಸ್ತ್ರಿ, ರೇಣುಕಾರಾಧ್ಯ, ವಿರುಪಾಕ್ಷಪ್ಪ, ಜಗದೀಶ್, ತಾರಾನಾಥ್, ವಿಶ್ವಾಸ್, ಮರುಳೇಶ್, ಶಾಂತ ಆನಂದ್, ಬಾಳೆಕಾಯಿ ಮೋಹನ್, ರುದ್ರೇಶ್, ಕಾಯಕ ಯೋಗಿ ಚನ್ನಬಸಪ್ಪ, ಪ್ರದೀಪ್ ಎಲಿ, ಮಂಗಳಾ ರವೀಂದ್ರ, ಸಚಿನ್ ಪೂಜಾರಿ, ಮಲ್ಲಿಕಾರ್ಜುನ ಸ್ವಾಮಿ, ಜಗದೀಶ್ ವೈ.ಎಸ್. ನವೀನ್ ವಾರದ್, ಪರಮೇಶ್ ಇದ್ದರು.