ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಮೂರೂವರೆ ತಿಂಗಳಿನಿಂದ ವಿಶ್ವವಿದ್ಯಾಲಯದ ಕುಂದುಕೊರತೆಗಳು ಹಾಗೂ ಡಿಜಿಟಲ್ ಫಲಿತಾಂಶದ ಗೊಂದಲಗಳನ್ನು ಸರಿಪಡಿಸಲು ನಿರಂತರವಾಗಿ ಶ್ರಮಿಸುತ್ತಿದ್ದು, ಈ ಕುರಿತು ಆಡಳಿತ ಮಂಡಳಿಗೆ ಪತ್ರ ಬರೆದರೂ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಈ ವಿಷಯವನ್ನು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲು ಮುಂದಾದರೆ, ಸಭೆಯನ್ನೇ ಪದೇ ಪದೇ ಮುಂದೂಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರ ಅಡಗಿದ್ದು, ಈ ಬಗ್ಗೆ ರಾಜ್ಯಪಾಲರಿಗೂ ದೂರು ಸಲ್ಲಿಸಲಾಗಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ಫಲಿತಾಂಶ ನೀಡದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಕುಲಪತಿಗಳು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪರೀಕ್ಷಾ ಶುಲ್ಕಕ್ಕಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗಿದೆ. ಹಿಂದೆ ೫ ಕೋಟಿ ರೂಪಾಯಿಯಲ್ಲಿ ಪೂರ್ಣಗೊಳ್ಳುತ್ತಿದ್ದ ಫಲಿತಾಂಶ ಪ್ರಕ್ರಿಯೆಗೆ ಈಗ ೮ ಕೋಟಿ ರೂಪಾಯಿ ಪೋಲು ಮಾಡಿದರೂ ಸರಿಯಾದ ರಿಸಲ್ಟ್ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕೆಪಿಎಸ್‌ಸಿ ಮಾದರಿಯಲ್ಲೇ ವ್ಯಾಪಕ ಭ್ರಷ್ಟಾಚಾರ ಜರುಗಿದ್ದು, ಕುಲಪತಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ತಮ್ಮ ಮೇಲೆಯೇ ಉಲ್ಟಾ ಆರೋಪ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಅಕ್ರಮಗಳ ನಿಷ್ಪಕ್ಷಪಾತ ತನಿಖೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಾಂವಿಧಾನಿಕ ಸಂಸ್ಥೆಯಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತವರ ಸಚಿವ ಸಂಪುಟ ಸದಸ್ಯರು ತಮ್ಮ ಸಾಂವಿಧಾನಿಕ ಅಧಿಕಾರವನ್ನೂ ಮೀರಿ ರಾಜ್ಯ ಚುನಾವಣಾ ಆಯೋಗದ ಮುಂದೆ ಎಸ್.ಐ. ಆರ್. ವಿರೋಧಿಸಿ ಧರಣಿ ನಡೆಸಿದ್ದು ಖಂಡನೀಯ. ಅಲ್ಲದೆ ಅಕ್ಷಮ್ಯ ಅಪರಾಧವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ ಆರೋಪಿಸಿದರು. ಸಾರ್ವಜನಿಕರು ಆಯೋಗದ ಮೇಲಿಟ್ಟಿರುವ ನಂಬಿಕೆ ಕಡಿಮೆಮಾಡುವ ಯತ್ನ ಇದಾಗಿದೆ. ಇದು ಸಿ.ಎಂ.ಗೆ ಗೌರವ ತರುವ ಕೆಲಸವಲ್ಲ. ಕಾಂಗ್ರೆಸ್ ಕಳೆದ 12 ವರ್ಷದಿಂದ ಅನುಭವಿಸುತ್ತಿರುವ ಚುನಾವಣಾ ಸರಣಿ ಸೋಲಿನ ಹತಾಶವಾಗಿ ಈ ರೀತಿ ಕೃತ್ಯಕ್ಕೆ ಇಳಿದಿದೆ ಎಂದರು.