ಸಿಎಂ ಅನುದಾನ ನೀಡುವ ಮೂಲಕ ನನಗೆ ಶಕ್ತಿ ನೀಡಿದ್ದಾರೆ

KannadaprabhaNewsNetwork |  
Published : Mar 13, 2024, 02:01 AM IST
12ಕೆಜಿಎಲ್4ಕೊಳ್ಳೇಗಾಲ ಪಟ್ಟಣದ ಶ್ರೀ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ   ಮಂಜು ಕೋಡಿ ಉಗನೀಯ ರಚನೆ ಕಂಡಾಯದ ಕೋಳಿ ನಾಟಕ ಪ್ರದರ್ಶನ ,  ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿ ವರಾಮು  ಅವರಿಗೆ ನುಡಿ ನಮನ ಕಾಯ೯ಕ್ರಮದಲ್ಲಿ ಅಕ್ಷರ ದಾಸೋಹದ ಅಧಿಕಾರಿ ರಂಗಸ್ವಾಮಿ, ಪಿಎಸಿಸಿ ಮುಖ್ಯಕಾಯನಿವಾ೯ಹಣಾಧಿಕಾರಿ ನಾಗರಾಜು ಇನ್ನಿತರರನ್ನು ಸನ್ಮಾನಿಸಲಾಯಿತು. ಶಾಸಕ  ಎ.ಅರ್.ಕೃಷ್ಣಮೂರ್ತಿ, ಮಂಜುನಾಥ್ ಪ್ರಸನ್ನ, ಮಂಜುಳಾ ಇದ್ದರು. | Kannada Prabha

ಸಾರಾಂಶ

ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುವ ಮೂಲಕ ನನಗೆ ಶಕ್ತಿ ತುಂಬಿದ್ದಾರೆ, ಗಡಿ ಜಿಲ್ಲೆ ಚಾಮರಾಜನಗರ ಕಲೆಗೆ ಹೆಸರುವಾಸಿಯಾಗಿದೆ. ಕಂಡಾಯ ಕೋಳಿ ಎಂಬ ನಾಟಕದ ಹೆಸರೇ ಬಹಳ ಕುತೂಹಲಾವಾಗಿದ್ದು ರಾಜಕೀಯ ಜಂಜಾಟದ ನಡುವೆ ನಾಟಕ ವೀಕ್ಷಣೆಗೆ ನನಗೆ ಆಸಕ್ತಿ ಹೆಚ್ಚಿಸಿದೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುವ ಮೂಲಕ ನನಗೆ ಶಕ್ತಿ ತುಂಬಿದ್ದಾರೆ, ಗಡಿ ಜಿಲ್ಲೆ ಚಾಮರಾಜನಗರ ಕಲೆಗೆ ಹೆಸರುವಾಸಿಯಾಗಿದೆ. ಕಂಡಾಯ ಕೋಳಿ ಎಂಬ ನಾಟಕದ ಹೆಸರೇ ಬಹಳ ಕುತೂಹಲಾವಾಗಿದ್ದು ರಾಜಕೀಯ ಜಂಜಾಟದ ನಡುವೆ ನಾಟಕ ವೀಕ್ಷಣೆಗೆ ನನಗೆ ಆಸಕ್ತಿ ಹೆಚ್ಚಿಸಿದೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಜೋಗಿ ರಂಗಜೋಳಿಗೆಯ 15 ನೇ ವರ್ಷದ ಸಂಭ್ರಮಾಚಣೆ ಅಂಗವಾಗಿ ಚಾಮರಾಜನಗರ ಈಶ್ವರಿ ಸೋಷಿಯಲ್ ಟ್ರಸ್ಟ್, ಯಳಂದೂರು ಮ್ಯೂಸಿಕಲ್ ಟ್ರಸ್ಟ್, ಕೊಳ್ಳೇಗಾಲದ ಅಪ್ಟು ಟೀಂ ವತಿಯಿಂದ ಆಯೋಜಿಸಿದ್ದ ಮಂಜು ಕೋಡಿ ಉಗನೀಯ ರಚನೆ ಕಂಡಾಯದ ಕೋಳಿ ನಾಟಕ ಪ್ರದರ್ಶನ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರಿಗೆ ಭಾವಪೂರ್ಣ ರಂಗನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡುಮಾತನಾಡಿದರು.ಚಾಮರಾಜನಗರ ಜಿಲ್ಲೆ ಕಲೆಗಳ ತವರೂರು, ಕಲೆಗೆ ಹೆಸರು ವಾಸಿಯಾದ ಜಿಲ್ಲೆ ನಮ್ಮದು, ಪೌರಾಣಿಕ ನಾಟಕದ ಕಲೆಯು ಡಾ.ರಾಜ್ ಕುಮಾರ್ ಅವರಿಂದಲೆ ನಾವೆಲ್ಲ ಕಂಡಿದ್ದೇವೆ. ನಮಗೂ ಈ ರಾಜಕೀಯದ ಜಂಜಾಟದ ನಡುವೆ ಇಂತಹ ನಾಟಕಗಳನ್ನು ನೋಡುವ ಆಸೆಯಿದೆ. ಇಂತಹ ಕಾರ್ಯಕ್ರಮದಿಂದ ಹೆಚ್ಚಿನ ಮನರಂಜನೆ ಸಿಗುತ್ತದೆ. ಪ್ರಸ್ತುತ ದಿನಗಳಲ್ಲಿ ಕಲಾವಿಧರ ಪೋಷಿಸುವ ಅಗತ್ಯವೂ ಇದೆ. ಇಂದು ಪ್ರದರ್ಶನವಾಗುವ ಕಂಡಾಯದ ಕೋಳಿ ನಾಟಕ ಉತ್ತಮವಾಗಿ ಮೂಡಿ ಬರಲಿ, ಈ ನಾಟಕದ ಹೆಸರೇ ನನಗೆ ನಿಜಕ್ಕೂ ಕುತೂಹಲ ಮೂಡಿಸಿದೆ ಎಂದರು.ಕಂಡಾಯದ ಕೋಳಿನಾಟಕ ರಚನೆಯ ನಿರ್ಮಾತೃ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ಮಾತನಾಡಿ, ಕಂಡಾಯ ಕೋಳಿ ನಾಟಕವನ್ನು ನನ್ನ 2ನೇಯ ಕಥಾಸಂಕಲ ಬೆಟ್ಟ ಬೇಗೆಯಲ್ಲಿರುವ ಚಾಮೀಯ ಕೋಳಿಯು, ಮಂಟೇಸ್ವಾಮಿ ಕಂಡಾಯವೋ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ ಎಂದರು.ಈಗಾಗಲೇ ನಾಟಕ 5 ಪ್ರದರ್ಶನ ಕಂಡಿದ್ದು. ಕೊಳ್ಳೇಗಾಲದಲ್ಲಿ 6ನೇ ಪ್ರದರ್ಶನ ಕಾಣುತ್ತಿದೆ. 2016 ರಲ್ಲಿ ಬೆಟ್ಟ ಬೇಗೆ ಕಥಾ ಸಂಕಲನ ಬಿಡುಗಡೆ ಕಂಡಿತ್ತು, ಕಂಡಾಯ ಕೋಳಿ ನಾಟಕ ಶ್ರೀ ಮಂಟೇಸ್ವಾಮಿ ಅವರ ಹಿನ್ನೆಲೆ ಸೇರಿದ್ದು. ಮಾನವನ ರಾಗ, ದ್ವೇಷಗಳು ಇಲ್ಲಿ ಅಡಕವಾಗಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಹಬ್ಬಗಳ ಆಚರಣೆಯಲ್ಲಿ ಮನುಷ್ಯ ತನಗೆ ಬೇಕಾದ ರೀತಿ ಇರುತ್ತಾನೆ ಎಂಬುದು ಈ ನಾಟಕದಲ್ಲಿ ಕಾಣಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಶಿವರಾಂ ಹಾಗೂ ತಹಸೀಲ್ದಾರ್ ದಿ. ಉದಯ್ ಕುಮಾರ್ ಅವರ ಭಾವಚಿತ್ರಕ್ಕೆ ಗಣ್ಯರು ಹಾಗೂ ಕಲಾವಿದರು ಪುಷ್ಪಾರ್ಚನೆ ಮಾಡಿ ರಂಗನಮನ ಸಲ್ಲಿಸಿದರು. ಮುಡಿಗುಂಡ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯ ಉಪ ನಿರ್ದೇಶಕ ರಾಚಪ್ಪ, ಬಿಇಒ‌ ಮಂಜುಳಾ, ಕಸಾಪ ತಾಲೂಕು ಅಧ್ಯಕ್ಷ ಎಸ್. ನಾಗರಾಜು, ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಬಾಬು, ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಕೆ ಮಹೇಶ್ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಕಸಬಾ ಪಿಎಸಿಸಿ ಬ್ಯಾಂಕ್ ಸಿಇಒ ನಾಗರಾಜು, ಜೋಗಿ ರಂಗಜೋಳಿಗೆಯ ಅಧ್ಯಕ್ಷ ಜೆ. ಮುಡಿ‌ಗುಂಡ ಮೂರ್ತಿ ಮತ್ತಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ