ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾದಾಮಿಯ ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಮೂರು ದಿನಗಳ ಕಾಲ ಚಾಲುಕಲ್ಯರ ಗತವೈಭವ ಜರುಗಲಿದ್ದು, 19ರಂದು ಚಾಲುಕ್ಯ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಸಚಿವರಾದ ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಉಪಸ್ಥಿತರಿರುವರು.
20ರಂದು ಪಟ್ಟದಕಲ್ಲಿನ ವಿಕ್ರಮಾದಿತ್ಯ ವೇದಿಕೆಯಲ್ಲಿ ಜರಗುವ ಎರಡನೇ ದಿನದ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆ ವಹಿಸಲಿದ್ದು, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಜವಳಿ, ಸಕ್ಕರೆ ಸಚಿವ ಶಿವನಂದ ಪಾಟೀಲ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಉಪಸ್ಥಿತರಿರುವರು.21ರಂದು ಐಹೊಳೆಯಲ್ಲಿ ಜರಗುವ ಉತ್ಸವದ ಸಮಾರೋಪ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಡಗಡಿ ಉದ್ಘಾಟಿಸಲಿದ್ದು, ಪ್ರವಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉಪಸ್ಥಿತರಿರುವರು.
ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ, ಕರ್ನಾಟಕ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ, ಹಟ್ಟಿ ಚಿನ್ನದಗಣಿ ಅಧ್ಯಕ್ಷ ಜೆ.ಟಿ. ಪಾಟೀಲ, ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.ಚಾಲುಕ್ಯ ಉತ್ಸವದ ಮೊದಲ ದಿನ ಬಾದಾಮಿ ನಗರದ ರಾಮದುರ್ಗ ವೃತ್ತದ ಬಳಿ ಚಾಲುಕ್ಯ ವಂಶದ ಅಪ್ರತಿಮ ನಾಯಕ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿಯ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಸಿಎಂ ಸಿದ್ದರಾಮಯ್ಯ ಅಡಿಗಲ್ಲು ಇಡಲಿದ್ದಾರೆ ಎಂದರು ತಿಳಿಸಿದರ.
ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಪಾಂಡು ಕಟ್ಟೀಮನಿ, ಬಸವರಾಜ ತಳವಾರ, ನಿಂಗನಗೌಡ ಜನಾಲಿ, ಶೌಕತ ಅಲಿ ಸೌದಾಗಾರ ಉಪಸ್ಥಿತರಿದ್ದರು.ಉತ್ಸವದ ಮೊದಲ ದಿನ:
ಚಾಲುಕ್ಯ ಉತ್ಸವದ ಮೊದಲ ದಿನ 19ರಂದು ಬೆಳಗ್ಗೆ 10 ಗಂಟೆಗೆ ಬಾದಾಮಿ ನಗರದಲ್ಲಿ ವಿವಿದ ಜಾನಪದ ವಾಹಿನಿ ಕಲಾ ತಂಡಗಳ ಮೆರವಣಿಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮೆರವಣಿಗೆಗೆ ಚಾಲನೆ ನೀಡುವರು. ನಂತರ ಬದಾಮಿ ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾದ ಇಮ್ಮಡಿ ಪುಲಕೇಶಿ ವೇದಿಕೆಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 6.30 ವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ 7.30 ರಿಂದ ಓಡಿಸ್ಸಿ ನೃತ್ಯ, ನೃತ್ಯರೂಪಕ, ಹಿಂದೂಸ್ಥಾನಿ ಸಂಗೀತ, ಹಾಸ್ಯ ಸಂಜೆ, ಮೋಹಿನಿಯಟ್ಟಂ, ರಾತ್ರಿ 9.30 ರಿಂದ ಸಂಜೀತ್ ಹೆಗಡೆ ಅವರಿಂದ ಚಿತ್ರ ಸಂಗೀತ ಲಹರಿ ಕಾರ್ಯಕ್ರಮ ಜರುಗಲಿದೆ.ಉತ್ಸವದ ಎರಡನೇ ದಿನ:
20ರಂದು ಪಟ್ಟದಕಲ್ಲಿನಲ್ಲಿ ವಿಕ್ರಮಾದಿತ್ಯ ವೇದಿಕೆಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 6.30ರವರೆಗೆ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮ, 7.30ರಿಂದ ಕುಚಿಪುಡಿ, ನೃತ್ಯ ರೂಪಕ, ತೊಗಲು ಬೊಂಬೆಯಾಟ, ಜೋಗತಿ ದೀಪ ನೃತ್ಯ, ದೊಡ್ಡಾಟ ನೃತ್ಯ, ಹೆಜ್ಜೆನಾದ, ಭರತನಾಟ್ಯ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿವೆ. ರಾತ್ರಿ 9.30 ರಿಂದ ಸಂಗೀತ ಸಂಯೋಜಕ, ಗಾಯಕ, ನಿರ್ದೇಶಕ ಹಾಗೂ ಮ್ಯೂಜಿಕ್ ಮಾಂತ್ರಿಕ ಅರ್ಜುನ ಜನ್ಯ ತಂಡದಿಂದ ಚಿತ್ರ ಸಂಗೀತ ಲಹರಿ ಕಾರ್ಯಕ್ರಮ ಜರುಗಲಿದೆ.ಉತ್ಸವದ ಮೂರನೇ ದಿನ:
21ರಂದು ಐತಿಹಾಸಿಕ ತಾಣ ಐಹೊಳೆಯ ಜಯಸಿಂಹ ವೇದಿಕೆಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 6.30ರವರೆಗೆ ಸ್ಥಳೀಯ ಕಲಾವದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7.30 ರಿಂದ ಸಮೂಹ ನೃತ್ಯ, ಕುಚಿಪುಡಿ, ಸುಗಮ ಸಂಗೀತ, ನೃತ್ಯ ರೂಪಕ, ಮ್ಯಾಜಿಕ್ ಶೋ, ಚಂಡೆ & ವಾಯೋಲಿಸ್, ಸ್ಯಾಕ್ಸೋಪೋನ್, ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿವೆ. ರಾತ್ರಿ ರಂದು ಚಲನಚಿತ್ರ ನಟ ಡಾಲಿ ಧನಂಜಯ ಮತ್ತು ರಘು ದೀಕ್ಷಿತ್ ತಂಡದಿಂದ ಸಂಗೀತ ಮತ್ತು ಮನರಂಜನೆ ಕಾರ್ಯಕ್ರಮ ಜರುಗಲಿವೆ.