ಮುಂಡಗೋಡ: ನಮ್ಮ ಮುಂದಿನ ಪೀಳಿಗೆಯಾದರೂ ಸರ್ಕಾರದ ಮೀಸಲಾತಿ ಸವಲತ್ತು ಪಡೆಯಲಿ ಎಂಬ ಉದ್ದೇಶದಿಂದ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ಹಾಗೂ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಹೋರಾಟ ಪುನಾರಂಭಗೊಳಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಮೇ ೨೩ರಂದು ಉಳವಿ ಚನ್ನಸವೇಶ್ವರ ದೇವಾಲಯದಲ್ಲಿ ಹೋರಾಟ ಸಮಿತಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮ ಮಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ, ಹೋರಾಟ ಸಮಿತಿ ಮುಖ್ಯಸ್ಥ ಚನ್ನಬಸಪ್ಪ ಬಾಗೇವಾಡಿ, ರಾಮಣ್ಣ ಕುನ್ನೂರ, ನಾಗರಾಜ ಚಿನ್ನಪ್ಪನವರ, ರಾಜು ಕುಟ್ರಿ ಮುಂತಾದವರು ಉಪಸ್ಥಿತರಿದ್ದರು.
ಜಾತಿಗಣತಿಗೆ ವಿರೋಧವಿಲ್ಲ: ಬಸವಜಯ ಮೃತ್ಯುಂಜಯ ಶ್ರೀಮುಂಡಗೋಡ: ಜಾತಿಗಣತಿ ಬಗ್ಗೆ ನಮ್ಮ ವಿರೋಧವಿಲ್ಲ. ಬದಲಾಗಿ ಅದು ವೈಜ್ಞಾನಿಕ ಹಾಗೂ ಕಾನೂನುಬದ್ಧವಾಗಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತಿರಬೇಕು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾತಿ ಗಣತಿ ಮಾಡಬೇಕು. ಒಂದು ಕೋಟಿಗೂ ಅಧಿಕವಿರುವ ಲಿಂಗಾಯತರು ಕೇವಲ ೬೦ ಲಕ್ಷ ಇದ್ದಾರೆ ಅಂದರೆ ಒಪ್ಪಲು ಸಾಧ್ಯವಿಲ್ಲ. ಸರ್ವೇ ವರದಿಯನ್ನು ಆಧರಿಸಿ ಜಾತಿ ಗಣತಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಲಿಂಗಾಯತರಲ್ಲಿ ಕುಂಬಾರ, ಮಡಿವಾಳ ಹೀಗೆ ಹಲವು ಉಪ ಪಂಗಡಗಳಿವೆ. ಹಲವರು ಲಿಂಗಾಯತ ಎಂಬುದನ್ನು ನಮೂದಿಸಿಲ್ಲ. ಹಾಗಾಗಿ ಎಲ್ಲವನ್ನು ಒಟ್ಟುಗೂಡಿಸಿಕೊಂಡು ಎಲ್ಲ ಉಪಪಂಗಡಗಳನ್ನು ಗಣನೆಗೆ ತೆಗೆದುಕೊಂಡು ಸಮರ್ಪಕ ಹಾಗೂ ಪ್ರಾಮಾಣಿಕವಾಗಿ ಗಣತಿ ನಡೆಸಿದರೆ ಒಪ್ಪಿಕೊಳ್ಳುತ್ತೇವೆ ಎಂದು ಸ್ಪಷ್ಪಪಡಿಸಿದರು.