ಬಾಗಲಕೋಟೆ : ಸಿದ್ದರಾಮಯ್ಯ ರಾಜಕೀಯವಾಗಿ ದೊಡ್ಡ ಕಲಾಕಾರರು, ತಮ್ಮ ಖುರ್ಚಿಗೆ ಯಾವಾಗ ಕಂಟಕ ಬರುತ್ತೆ. ಆಗ ಜಾತಿ ಗಣತಿ ಚರ್ಚೆ ಮುನ್ನೆಲೆಗೆ ಬರುತ್ತದೆ ಎಂದು ಮಾಜಿ ಡಿಸಿಎಂ, ಸಂಸದ ಜಗದೀಶ ಶೆಟ್ಟರ್ ಕಾಲೆಳೆದಿದ್ದಾರೆ.ಭಾನುವಾರ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ 5 ವರ್ಷ ಸಿಎಂ ಇದ್ದಾಗ ಜಾತಿ ಗಣತಿ ಬಗ್ಗೆ ವಿಚಾರ ಮಾಡಲಾರದ ಸಿದ್ದರಾಮಯ್ಯ ಸಿಎಂ ಖುರ್ಚಿಗೆ ಪ್ರತಿಸ್ಪರ್ಧಿ ಬಂದಾಗ ಇಂತಹ ಬೆಳವಣಿಗೆ ಆಗಿದೆ. ಸಿಎಂ ಸಿದ್ದರಾಮಯ್ಯನವರಿಗೆ ನಿಜವಾಗಿಯೂ ಸಾಮಾಜಿಕ ಕಳಕಳಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದದರು.
ವೀರಶೈವ ಲಿಂಗಾಯತರನ್ನ ಸಣ್ಣ ಸಣ್ಣ ಜಾತಿಗಳಾಗಿ ವಿಂಗಡನೆ ಮಾಡಿದ್ರು, ಅದೇ ರೀತಿ ಒಕ್ಕಲಿಗರು, ಹಿಂದುಳಿದ ವರ್ಗದವರನ್ನು ವಿಂಗಡನೆ ಮಾಡಲಾಗಿದೆ ಎಂದು ಆಪಾದಿಸಿದ ಕಾರಜೋಳ, ಮುಸ್ಲಿಮರನ್ನು ವಿಂಗಡಣೆ ಮಾಡಬೇಕಿತ್ತು. ಯಾಕೆ ಮಾಡಲಿಲ್ಲ, ಸಿದ್ದರಾಮಯ್ಯನವರೇ ನೀವು ವಿಂಗಡಣೆ ಮಾಡಬೇಕಿರೋದು ಮುಸ್ಲಿಮರನ್ನು, ಶ್ರೀಮಂತ, ಬಡವ, ದಲಿತ ಮುಸ್ಲಿಮರನ್ನಾಗಿ ವಿಂಗಡಣೆ ಮಾಡಬೇಕಿತ್ತು. ದಲಿತ ಮುಸ್ಲಿಂ, ಬಂಗಿ ಮುಸ್ಲಿಂ, ಮೋಚಿ ಮುಸ್ಲಿಂ, ಚಪ್ಪಲಬಂದ್ ಮುಸ್ಲಿಂ, ನಧಾಪ್, ಪಿಂಜಾರ್, ಈ ಎಲ್ಲ ಮುಸ್ಲಿಂ ಹಿಂದುಳಿದವರನ್ನು ವಿಂಗಡಣೆ ಮಾಡಬೇಕಿತ್ತು. ಇಂತವರಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದರೆ ನಾ ಒಪ್ಪಿಕೊಳ್ತಿದ್ದೆ, ಇದನ್ನೇ ಮೋದಿಯವರು ಹೇಳಿದ್ರು, ಪಸಬಂದಾ ಮುಸಲ್ಮಾನರಿಗೆ ನಾವು ಸವಲತ್ತು ಕೊಡಬೇಕು, ಸಿಎಂ ಸಿದ್ದರಾಮಯ್ಯ ಬರೀ ವೋಟ್ ಬ್ಯಾಂಕ್ ಗಾಗಿ ಈ ರೀತಿ ಮಾಡಿದ್ರೆ ಖಂಡಿಸುತ್ತೇನೆ ಎಂದು ಕಾರಜೋಳ ಹೇಳಿದರು.
ಯುದ್ಧ ಬೇಡವೆಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು:
ಪಾಕಿಸ್ತಾನದೊಂದಿಗೆ ಯುದ್ಧ ಬೇಡ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಾಗಲಕೋಟೆಯಲ್ಲಿ ತಿರುಗೇಟು ನೀಡಿದ ಗೋವಿಂದ ಕಾರಜೋಳ, ಪಹಲ್ಗಾಂನಲ್ಲಿ 26 ಜನ ಅಮಾಯಕರ ಜೀವ ಪಡೆದ ಉಗ್ರರ ಬಗ್ಗೆ ಸಿದ್ದರಾಮಯ್ಯನವರು ಸಹಾನುಭೂತಿಯಿಂದ ಮಾತಾಡ್ತಾರೆ. ಸಿದ್ದರಾಮಯ್ಯನವರಿಗೆ ದೇಶದ ಏಕತೆ, ಐಕ್ಯತೆ ಕಾಳಜಿ ಎಷ್ಟಿದೆ ಅನ್ನೋದು ಅವರ ಹೇಳಿಕೆಯಿಂದ ಗೊತ್ತಾಗುತ್ತದೆ. ಅವರಿಗೆ ಇರೋದು ಒಂದೇ ಕಳಕಳಿ ಕಾಳಜಿ ವೋಟ್ ಬ್ಯಾಂಕ್ ಕಾಳಜಿ, ಅದನ್ನು ಬಿಟ್ಟರೆ ಬೇರೆ ಯಾವುದೇ ಕಾಳಜಿ ಇಲ್ಲ, ಸಿದ್ದರಾಮಯ್ಯ ಅವರಿಗೂ ಇಲ್ಲ, ಅವರ ಮಂತ್ರಿಮಂಡಲದ ಸದಸ್ಯರಿಗೂ ಇಲ್ಲ, ದೇಶದ ಜನತೆಗೆ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ನಿರ್ಧಾರಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ತೆಲಂಗಾಣ ಸಿಎಂ ಹೇಳಿದ್ದಾರೆ. ಸರಕಾರ ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಪಡೆದುಕೊಳ್ಳಬೇಕು ಎಂದು ರೇವಂತರೆಡ್ಡಿ ಹೇಳಿದ್ದಾರೆ, ಅವರಿಗಿರುವ ದೇಶದ ಕಾಳಜಿಯನ್ನು ಅಪ್ರಿಸಿಯೇಟ್ ಮಾಡ್ತಿನಿ, ಯಾಕೋ ಏನೊ ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರಿಗೆ ದೇಶಕ್ಕಿಂತಲೂ ಸಮುದಾಯದ ಮತಗಳೇ ಮುಖ್ಯವಾಗಿವೆ. ಅವರು ಭಾರತ ದೇಶದ ಮುಸ್ಲಿಮರ ಬಗ್ಗೆ. ದೇಶದ ಪಶ್ಮಂದಾ ಮುಸ್ಲಿಮರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರೆ ನಾನು ಅವರನ್ನು ಗೌರವಿಸ್ತಿದ್ದೆ. ಕೇವಲ ಪಾಕಿಸ್ತಾನದ ಮುಸ್ಲಿಮರ ಬಗ್ಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನವರಿಗೆ ಕಳಕಳಿ ಹೆಚ್ಚಾಗಿದೆ ಎಂದು ಕಾರಜೋಳ ವ್ಯಂಗ್ಯವಾಡಿದರು