ಗುರುಗಳನ್ನು ನೆನೆದು ವಂದನೆ ಅರ್ಪಿಸುವುದು ಮಹಾ ಕಾರ್ಯ

KannadaprabhaNewsNetwork |  
Published : Apr 28, 2025, 12:48 AM IST
ಜಜಜಜಜಜಜ | Kannada Prabha

ಸಾರಾಂಶ

ಗುರು ಬ್ರಹ್ಮ, ಗುರು ವಿಷ್ಣು, ಗುರು ಸಾಕ್ಷಾತ ಪರಬ್ರಹ್ಮ ಎನ್ನುವ ಮಾತಿನಂತೆ ನೀವೆಲ್ಲ 1989-90ರಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಲ್ಲ ವಿಭಾಗಳಲ್ಲಿ ಕೆಲಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದು ಇಂದು ಕಲಿತ ಶಾಲೆ ಮತ್ತು ಕಳಿಸಿದ ಶಿಕ್ಷಕರಿಗೆ ಸನ್ಮಾನ ಮಾಡಿದ ನೀವುಗಳು ಪುಣ್ಯವಂತರು ಎಂದು ನೇಸರಗಿ ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಗುರು ಬ್ರಹ್ಮ, ಗುರು ವಿಷ್ಣು, ಗುರು ಸಾಕ್ಷಾತ ಪರಬ್ರಹ್ಮ ಎನ್ನುವ ಮಾತಿನಂತೆ ನೀವೆಲ್ಲ 1989-90ರಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಲ್ಲ ವಿಭಾಗಳಲ್ಲಿ ಕೆಲಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದು ಇಂದು ಕಲಿತ ಶಾಲೆ ಮತ್ತು ಕಳಿಸಿದ ಶಿಕ್ಷಕರಿಗೆ ಸನ್ಮಾನ ಮಾಡಿದ ನೀವುಗಳು ಪುಣ್ಯವಂತರು ಎಂದು ನೇಸರಗಿ ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ನುಡಿದರು.ತಾಲೂಕಿನ ನೇಸರಗಿ ಗ್ರಾಮದ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ 1989-90ನೇ ಸಾಲಿನ ವಿದ್ಯಾರ್ಥಿಗಳಿಂದ 4ನೇ ವರ್ಷದ ಸ್ನೇಹಕೂಟ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಶಿಕ್ಷಕ ಸಿ.ವಿ.ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳು ಎಷ್ಟೇ ದೊಡ್ಡವರಾದರು ಶಿಕ್ಷಕರಿಗೆ ಕೊಡುವಷ್ಟು ಗೌರವ ಯಾರಿಗೂ ಕೊಡುವುದಿಲ್ಲ. ವ್ಯಾಸಂಗ ಸಮಯದಲ್ಲಿ ಅವರು ಕಳಿಸಿದ ಪಾಠ ಸದಾ ನೆನಪು ಇರುತ್ತದೆ. ಆದರೆ, ಈ ನಮ್ಮ 1989-90ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳು ಸತತ 4 ವರ್ಷಗಳಿಂದ ನಮ್ಮನ್ನು ಸತ್ಕಾರಿಸುತ್ತಿರುವುದು ನಮಗೆ ಹೆಮ್ಮೆ ತರಿಸಿದೆ ಎಂದರು.

ನಿವೃತ್ತ ಶಿಕ್ಷಕರಾದ ಜಿ.ಆರ್.ಕುಲಕರ್ಣಿ, ಉಪನ್ಯಾಸಕರಾದ ರಾಯನಗೌಡ ಮರಿಗೌಡ, ಶಾಲೆಯ ಮುಕ್ಯೋಪಾಧ್ಯಾಯರಾದ ಫಾ.ಹ್ಯಾರಿ ವಿಕ್ಟರ್ ದಿಕ್ರುಜ ಮಾತನಾಡಿ, ವಿದ್ಯಾರ್ಥಿಗಳ ಈ ಸುಮಧುರ ಕಾರ್ಯಕ್ರಮದಲ್ಲಿ ನಮ್ಮನ್ನು ಗೌರವಿಸುತ್ತಿರುವುದು ಬಹಳ ಖುಷಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಎಸ್.ಅಪ್ಪಾಜಿಗೋಳ, ಎಸ್.ಎಂ.ವನಹಳ್ಳಿ, ಎ.ಆರ್.ಕುಲಕರ್ಣಿ, ಎ.ಬಿ.ಉಪ್ಪಾರ ಹಾಗೂ ಪ್ರಭಾಕರ ಸತ್ತಿಗೇರಿ, ಹಣಮಂತ ಹಳೆಮನಿ ಮತ್ತು 1989-90ನೇ ಸಾಲಿನ ವಿದ್ಯಾರ್ಥಿಗಳಾದ ಸುರೇಶ ನವಲಗಟ್ಟಿ, ಯಲ್ಲನಗೌಡ ದೊಡ್ಡಗೌಡರ, ಮಲ್ಲೇಶ ಹುಲಮನಿ, ಸಂಜಯ ಸರಾಫ, ಶಿವನಗೌಡ ಪಾಟೀಲ, ಮಹಾಂತೇಶ ಮಾಸ್ತಮರಡಿ, ವಿಠ್ಠಲ ಕಮತಗಿ, ಬಸವರಾಜ ಸಾಣಿಕೊಪ್ಪ, ವಿಜಯ ಸೋಮಣ್ಣವರ, ಮಹಾಂತೇಶ ಚರಂತಿಮಠ, ನ್ಯಾಯವಾದಿ ಶೀತಲ ಕಾಡಣ್ಣವರ, ಗಂಗಾಧರ ಕಾಜಗಾರ, ಎಂ.ಆರ್.ಬಾಗೇವಾಡಿ, ವೀಣಾ ಪಾಟೀಲ, ಕಮಲಾ ಪಾಟೀಲ ಸೇರಿದಂತೆ 1989-90ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದ ಉಪನ್ಯಾಸಕಿ ಉಷಾ ನವಲಗಟ್ಟಿ ನಿರೂಪಿಸಿದರು. ಮಹಾವೀರ ಬಿಲ್ ಸ್ವಾಗತಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ