ನಾಡುಕಂಡ ಪ್ರಬುದ್ಧ ರಾಜಕಾರಣಿ ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Nov 25, 2025, 03:15 AM IST
 ಇಂಡಿ | Kannada Prabha

ಸಾರಾಂಶ

ಈ ಭಾಗದ ಬೆಳವಣಿಗೆಗೆ ಸಾಕಷ್ಟು ಸಹಾಯ, ಸಹಕಾರ ಮಾಡಿರುವ ಪ್ರಬುದ್ಧ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ನಮಗೆ ಸಹಾಯ ಮಾಡಿದವರನ್ನು ಉಪಕಾರ ಸ್ಮರಣೆ ಮಾಡುವುದು ಮನುಷ್ಯ ಧರ್ಮ. ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕವಾಗಿ ಈ ಭಾಗದ ಬೆಳವಣಿಗೆಗೆ ಸಾಕಷ್ಟು ಸಹಾಯ, ಸಹಕಾರ ಮಾಡಿರುವ ಪ್ರಬುದ್ಧ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ₹3 ಕೋಟಿ ಅನುದಾನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಈ ಭಾಗದ ಶ್ರೇಯೋಭಿವೃದ್ಧಿಗೆ ಸಹಾಯ, ಸಹಕಾರ ಮಾಡದಿದ್ದರೆ ಇಷ್ಟೆಲ್ಲಾ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆ ಪುಣ್ಯಾತ್ಮನನ್ನು ಸ್ಮರಿಸಬೇಕಾಗಿದೆ. ದೇವರಾಜ ಅರಸರ ನಂತರ ಅತೀ ಹೆಚ್ಚು ಕನ್ನಡ ನಾಡು ಆಳಿದ ಪ್ರಬುದ್ಧ ರಾಜಕಾರಣಿ ಎಂದು ಅಭಿಮಾನದಿಂದ ಹೇಳುತ್ತೇನೆ ಎಂದರು.

ಸಿದ್ದರಾಮಯ್ಯನವರಂತ ಅವಶ್ಯಕತೆ ರಾಜಕಾರಣಕ್ಕೆ ಇದೆ. ಸಾಮಾಜಿಕ ಪರಿಕಲ್ಪನೆ, ಸರ್ವರನ್ನು ಪ್ರೀತಿಸುವ ವ್ಯವದಾನ ಯಾರಲ್ಲಿ ಇರುತ್ತದೆಯೋ ಅವರು ಸಾರ್ಥಕ ರಾಜಕಾರಣ ಮಾಡಲು ಸಾಧ್ಯ. ಅವರಲ್ಲಿ ಬದ್ಧತೆ ಇದೆ. ಹೀಗಾಗಿ ನಿರ್ಭಯವಾಗಿ ರಾಜಕಾರಣ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಇನ್ನಷ್ಟು ವರ್ಷ ಕರ್ನಾಟಕ ಅಭಿವೃದ್ಧಿ ಕಾಣಲಿ ಎಂದು ಹೇಳಿದರು.

ಶಿಕ್ಷಕರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಶಿಕ್ಷಣ ನೀಡಲಿ. ಮಕ್ಕಳ ಅಭಿರುಚಿಗನುಗುಣವಾಗಿ ಶಿಕ್ಷಣ ಒದಗಿಸಬೇಕು. ವಿದ್ಯಾರ್ಥಿಗಳು ಸ್ವಾಭಿಮಾನದಿಂದ ಸಂಸ್ಕಾರವಂತರಾಗಿ ಬಾಳಲು ಪ್ರೇರಣೆ ನೀಡುವ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ಸರ್ಕಾರ ನೀಡುವ ಶೈಕ್ಷಣಿಕ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ಅಧ್ಯಯನ ಶೀಲರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಇಂಡಿಯನ್ನು ಶಿಕ್ಷಣ ನಾಡನಾಗಿ ಪರಿರ್ವತಿಸುವುದು ನನ್ನ ಗುರಿಯಾಗಿದೆ. ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ ಹೆಮ್ಮೆ ನನಗಿದೆ. ನಿಮ್ಮ ಇಚ್ಚೆಗೆ ಅನುಗುಣವಾದ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ಅದರಡಿ ಪ್ರಯತ್ನಿಸಿ ಯಶಸ್ಸು ಸಾಧಿಸಿ ಮಾದರಿ ವ್ಯಕ್ತಿಗಳಾಗಿ ಬದುಕಬೇಕೆಂದು ಕರೆ ನೀಡಿದರು. ಇತಿಹಾಸ ನಿರ್ಮಾಣ ಮಾಡಲು ನಮ್ಮ ಪ್ರಯತ್ನ ಅವಶ್ಯಕ ನಾಗರಿಕ ಸಮಾಜದ ಭಾಗವಾಗಿ ಸಮಾಜವಾದಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನವನ್ನು ನೀಡುವುದು ನಮ್ಮ ಕರ್ತವ್ಯವಾಗಬೇಕು. ರಾಷ್ಟ್ರ ನಾಯಕರ ಚಿಂತನೆಗಳನ್ನು ಸಕಾರಗೊಳಿಸುವುದು ನಮ್ಮ ಆಶಯವಾಗಬೇಕು ಎಂದರು.

ಪ್ರಾಂಶುಪಾಲ ಪ್ರೊ,ರಮೇಶ ಆರ್‌ ಎಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕೌಲಗಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಡಿವೈಎಸ್ಪಿ ಸದಾಶಿವ ಕಟ್ಟೀಮನಿ, ತಹಸೀಲ್ದಾರ್ ಬಿ.ಎಸ್‌.ಕಡಕಬಾವಿ, ಇಒ ಡಾ.ಬಿ.ಎಚ್‌.ಕನ್ನೂರ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಲಿಂಬಾಜಿ ರಾಠೋಡ, ಭೀಮಾಶಂಕರ ಮೂರಮನ, ಸತಾರ ಭಾಗವಾನ, ಜಾವಿದ ಮೊಮೀನ, ನೀಲಕಂಠ ರೂಗಿ, ಸದಾಶಿವ ಪ್ಯಾಟಿ ಉಪಸ್ಥಿತರಿದ್ದರು. ಡಾ.ಎಸ್.ಜೆ. ಮಾಡ್ಯಾಳ ಸ್ವಾಗತಿಸಿ ಪರಿಚಯಿಸಿದರು. ಪ್ರೊ. ರವಿಕುಮಾರ್‌ಅರಳಿ ನಿರೂಪಿಸಿದರು. ನಂದಕುಮಾರ ಬಿರಾದಾರ ವಂದಿಸಿದರು.

PREV

Recommended Stories

ಸಿದ್ದರಾಮಯ್ಯ ಕಾಂಗ್ರೆಸ್‌ ಆಸ್ತಿ: ಡಿಕೆ - ಅವರ ಮಾತೇ ವೇದವಾಕ್ಯ : ಡಿಸಿಎಂ ಡಿ.ಕೆ.ಶಿವಕುಮಾರ್‌
ದಿಲ್ಲಿಯಲ್ಲಿ ಈಗ ಡಿಕೆಶಿ ಪರ ಆಪ್ತ ಶಾಸಕರ ಬಹಿರಂಗ ಲಾಬಿ!