ಇಂದು ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Mar 30, 2026, 03:30 AM IST
(ಫೋಟೊ29ಬಿಕೆಟಿ11 ಪ್ರಚಾರ ಸಭೆಯಲ್ಲಿ ಜಗದೀಶ ಶೆಟ್ಟರ ಮಾತುನಾಡಿದರು) | Kannada Prabha

ಸಾರಾಂಶ

ಬಾಗಲಕೋಟೆ ಉಪಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಸೋಮವಾರ ಬಾಗಲಕೋಟೆಗೆ ಘಟಾನುಘಟಿ ನಾಯಕರಿಂದ ಮತಬೇಟೆ ನಡೆಯಲಿದೆ. ಕಾಂಗ್ರೆಸ್ಸಿನಿಂದ ಸಿಎಂ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿದ್ದರೆ ಬಿಜೆಪಿಯಿಂದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮತಬೇಟೆ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಉಪಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಸೋಮವಾರ ಬಾಗಲಕೋಟೆಗೆ ಘಟಾನುಘಟಿ ನಾಯಕರಿಂದ ಮತಬೇಟೆ ನಡೆಯಲಿದೆ.

ಕಾಂಗ್ರೆಸ್ಸಿನಿಂದ ಸಿಎಂ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿದ್ದರೆ ಬಿಜೆಪಿಯಿಂದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮತಬೇಟೆ ಮಾಡಲಿದ್ದಾರೆ.

ಮೊದಲ ಹಂತವಾಗಿ ಎರಡು ದಿನ ಪ್ರಚಾರ ನಡೆಸಲಿರುವ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಬಾಗಲಕೋಟೆ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸುವರು. ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಸೇರಿಹಲವು ಸಚಿವರು ಸಾಥ್ ನೀಡಲಿದ್ದಾರೆ.

ಸೋಮವಾರ ಬೆಳಗ್ಗೆ 11ಕ್ಕೆ ಸುತಗುಂಡಾರ ಗ್ರಾಮದಲ್ಲಿ, ಮಧ್ಯಾಹ್ನ 1.30ಕ್ಕೆ ನಾಯನೇಗಲಿ ಗ್ರಾಮದಲ್ಲಿ, 2.30ಕ್ಕೆ ರಾಂಪೂರ ಗ್ರಾಮದಲ್ಲಿ, 4 ಗಂಟೆಗೆ ಬೇವೂರ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಬಳಿಕ ರಾತ್ರಿ ಆಲಮಟ್ಟಿಯಲ್ಲಿ ವಾಸ್ತವ್ಯ ಮಾಡುವರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತಬೇಟೆ:

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರಮತಯಾಚನೆ ಮಾಡಲಿದ್ದು, ಬೆಳಗ್ಗೆ ಬಾಗಲಕೋಟೆ ನಗರದಲ್ಲಿ & ಸಂಜೆ ಗ್ರಾಮೀಣ ಭಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮತಬೇಟೆ ನಡೆಸಲಿದ್ದಾರೆ, ಬೆಳಗ್ಗೆ 8.30ಕ್ಕೆ ದೀಪಂ ಕಾಲೋನಿಯಿಂದ ಪಾದಯಾತ್ರೆ ಆರಂಭ ಮಾಡಲಿದ್ದು ಸತ್ಯನಾರಾಯಣ ದೇವಸ್ಥಾನದಿಂದ ಪ್ರಚಾರ ಆರಂಭಿಸಲಿದ್ದಾರೆ, ನಗರದ ವಾರ್ಡನಂ.1 & ನಂ 2ರಲ್ಲಿ ಪಾದಯಾತ್ರೆ ಮಾಡಲಿದ್ದು, ಬಳಿಕ 11.30ಕ್ಕೆ ವಿಜಯೇಂದ್ರ ಅವರು ಮಾದ್ಯಮಗೋಷ್ಠಿ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಶಿರೂರ ಗ್ರಾಮದಲ್ಲಿ ಪ್ರಚಾರ ಸಭೆ ಮಾಡಲಿದ್ದು, ಸಂಜೆ 6 ಗಂಟೆಗೆ ಅಮೀನಗಡದಲ್ಲಿ ಪ್ರಚಾರ ಮಾಡಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಎಲ್ಲ ರಂಗಗಳಲ್ಲೂ ಸಶಕ್ತರಾಗುತ್ತಿರುವ ಮಹಿಳೆಯರು
ಕೆಲ ಶಿಕ್ಷಕರಿಗೆ ಜನಗಣತಿಯಿಂದ ವಿನಾಯ್ತಿಗೆ ನೌಕರರ ಆಗ್ರಹ