ಸಮಾಜದ ಎಲ್ಲ ರಂಗಗಳಲ್ಲೂ ಸಶಕ್ತರಾಗುತ್ತಿರುವ ಮಹಿಳೆಯರು

KannadaprabhaNewsNetwork |  
Published : Mar 30, 2026, 03:30 AM IST
ಹಾವೇರಿ ನಗರದ ಬಸವಕೇಂದ್ರ ಹೊಸಮಠದಲ್ಲಿ ಮಹಿಳಾ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶಾಸಕ ರುದ್ರಪ್ಪ ಲಮಾಣಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಿಳೆಯರು ಇಂದು ಸಮಾಜದ ಎಲ್ಲ ರಂಗಗಳಲ್ಲೂ ಪುರುಷರಿಗಿಂತ ಹೆಚ್ಚು ಸಶಕ್ತರಾಗುತ್ತಿದ್ದಾರೆ. ಬರುವ ದಿನಗಳಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಿಗುವ ವಿಶ್ವಾಸವಿದ್ದು, ಸಂಘಟನೆಯಲ್ಲಿ ಹೆಚ್ಚು ನಾಯಕತ್ವ ಬೆಳೆಯಬೇಕೆಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಮಹಿಳೆಯರು ಇಂದು ಸಮಾಜದ ಎಲ್ಲ ರಂಗಗಳಲ್ಲೂ ಪುರುಷರಿಗಿಂತ ಹೆಚ್ಚು ಸಶಕ್ತರಾಗುತ್ತಿದ್ದಾರೆ. ಬರುವ ದಿನಗಳಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಿಗುವ ವಿಶ್ವಾಸವಿದ್ದು, ಸಂಘಟನೆಯಲ್ಲಿ ಹೆಚ್ಚು ನಾಯಕತ್ವ ಬೆಳೆಯಬೇಕೆಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು. ನಗರದ ಬಸವ ಕೇಂದ್ರ ಹೊಸಮಠದಲ್ಲಿ ಭಾನುವಾರ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾನಗಲ್ಲ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿ, ವಿಶ್ವಗುರು ಬಸವಣ್ಣನವರು ಅನುಭವ ಮಂಟಪ ಪ್ರಾರಂಭ ಮಾಡಿದಾಗ ಮಹಿಳಾ ನಾಯಕತ್ವವನ್ನು ವಿಶೇಷವಾಗಿ ಗುರುತಿಸಿದ್ದರು. ಜಿಲ್ಲೆಯಲ್ಲಿ ಕುಮಾರ ಶಿವಯೋಗಿಗಳು ಲಿಂಗಾಯತ ಮಹಿಳಾ ಸಂಘಟನೆಯನ್ನು ಪ್ರಾರಂಭಿಸಿ, ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಶಕ್ತಿಯನ್ನು ಮುಂಚೂಣಿಗೆ ತರಲು ಮುಂದಾಗಿದ್ದರು. ಸಮಾಜದ ಕಟ್ಟಕಡೆಯ ಅಸಹಾಯಕಿಯರಿಗೆ ಶಕ್ತಿ ಕೊಡುವ ಕೆಲಸವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮಾಡಿದ್ದರು. ಮಹಿಳಾ ಅಧಿಕಾರ, ಆಡಳಿತ, ಸ್ಪರ್ಧೆಯಿಂದ ದೂರವಿಡುವ ಸಂದರ್ಭದಲ್ಲಿ ಇಂದಿರಾ ಗಾಂಧಿ ಸುದೀರ್ಘ 16 ವರ್ಷಗಳ ಕಾಲ ದೇಶದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿದರು. ಮಹಿಳೆಗೆ ಪ್ರತಿಭೆ ಇದೆ, ಛಲ ಇದೆ ಆದರೆ ಅವಕಾಶ ಸಿಗುತ್ತಿಲ್ಲ. ಮಹಿಳೆಗೆ ಅವಕಾಶ ಸಿಕ್ಕಾಗ ಹೊರಗಿನ ಜವಾಬ್ದಾರಿ ಹೊರುವ ಶಕ್ತಿ, ಸಾಮರ್ಥ್ಯ ಹೊತ್ತುಕೊಂಡು ಮನೆಯ ಜವಾಬ್ದಾರಿ ಸಮರ್ಥವಾಗಿ ಎದುರಿಸಲು ಸಿದ್ಧಳಿದ್ದಾಳೆ ಎಂದರು.ಶಿಗ್ಗಾಂವಿ-ಸವಣೂರು ಶಾಸಕ ಯಾಸೀರಖಾನ್ ಪಠಾಣ ಮಾತನಾಡಿ, ಭಾರತ ಸಂಸ್ಕೃತಿ, ಸಂಸ್ಕಾರ ಹೊಂದಿರುವ ದೇಶವಾಗಿದೆ. ಈ ದೇಶದಲ್ಲಿ ಸ್ತ್ರೀಯರಿಗೆ ತನ್ನದೆಯಾದ ಗೌರವವಿದೆ. ಕಾಂಗ್ರೆಸ್ ಪಕ್ಷ ಸ್ತ್ರೀಯರಿಗೆ ಸ್ವಾತಂತ್ರ್ಯ ಕೊಟ್ಟಿದೆ. ಕಾಂಗ್ರೆಸ್ ಪಕ್ಷ ಸ್ತ್ರೀಯರನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತದೆ. ಮನೆ ಕೆಲಸದಿಂದ ಹಿಡಿದು ಜಾಗತಿಕ ಮಟ್ಟದಲ್ಲಿಯೂ ಮಹಿಳೆ ತನ್ನ ಪ್ರಾಬಲ್ಯ ಹೊಂದಿದ್ದಾಳೆ. ಶಿಕ್ಷಣ, ಆರೋಗ್ಯ ಉದ್ಯೋಗ ರಾಜಕಾರಣದಲ್ಲಿ ಮಹಿಳೆ ಮುನ್ನೆಲೆಗೆ ಬಂದಿದ್ದಾಳೆ ಎಂದರು. ಕಾರ್ಯಕ್ರಮದಲ್ಲಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ನೆಹರು ಓಲೇಕಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು.ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಬಸವರಾಜ ಹೆಡಿಗ್ಗೊಂಡ, ಜಮೀರ್ ಜಿಗರಿ, ಶಂಕರ ಮೆಹರವಾಡೆ, ಪ್ರಭು ಬಿಷ್ಟನಗೌಡ್ರ, ದೀಕ್ಷಾಬೇಗಂ ಮುಗನೂರು, ಪಾರ್ವತಮ್ಮ ಹಲಗಣ್ಣನವರ, ವಸಂತಾ ಬಾಗೂರ, ರೇಖಾ ಪಾಟೀಲ, ಜಯಶ್ರೀ ಶಿವಪುರ, ರುಕ್ಮಿಣಿ ಸಾಹುಕಾರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಂತಕ್ಕ ಶಿರೂರು ಪ್ರಾರ್ಥಿಸಿದರು. ಮಮತಾ ಜಾಬಿನ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ
ಕೆಲ ಶಿಕ್ಷಕರಿಗೆ ಜನಗಣತಿಯಿಂದ ವಿನಾಯ್ತಿಗೆ ನೌಕರರ ಆಗ್ರಹ