ಹಲವು ಯೋಜನೆಗೆ ಸಿಎಂರಿಂದ ಶೀಘ್ರ ಚಾಲನೆ: ಶಾಸಕ ಕೃಷ್ಣಮೂರ್ತಿ

KannadaprabhaNewsNetwork |  
Published : Sep 01, 2026, 02:15 AM IST
ಹಲವು ಯೋಜನೆ ಮಂಜೂರು, ಮುಖ್ಯಮಂತ್ರಿಗಳಿಂದ ಚಾಲನೆಗೆ ಸಿದ್ದ, ದಿನಾಂಕ ನಿಗದಿ ಬಾಕಿ, ಶಾಸಕ    | Kannada Prabha

ಸಾರಾಂಶ

ಹಲವಾರು ಯೋಜನೆಗಳು ಮಂಜೂರಾಗಿವೆ, ಒಮ್ಮೆ ಎಲ್ಲಾ ಯೋಜನೆಗಳಿಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದಲೇ ಚಾಲನೆ ಕೊಡಿಸಬೇಕು ಎಂಬ ಹೆಬ್ಬಯಕೆ ಹೊಂದಿದ್ದೇನೆ, ಅವರ ದಿನಾಂಕ ನಿಗದಿಗಾಗಿ ಕಾಯುತ್ತಿರುವೆ, ಅದೇ ರೀತಿ ಕೊಳ್ಳೇಗಾಲದ ಎಂಜಿಎಸ್‌ವಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಅನೇಕ ಸಚಿವರನ್ನು ಆಹ್ವಾನಿಸಿ ಬೖಹತ್ ಹಂತದ ಕಾರ್ಯಕ್ರಮ ರೂಪಿಸಬೇಕೆಂಬ ಚಿಂತನೆ ಮಾಡಿದ್ದೆನೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಹಲವಾರು ಯೋಜನೆಗಳು ಮಂಜೂರಾಗಿವೆ, ಒಮ್ಮೆ ಎಲ್ಲಾ ಯೋಜನೆಗಳಿಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದಲೇ ಚಾಲನೆ ಕೊಡಿಸಬೇಕು ಎಂಬ ಹೆಬ್ಬಯಕೆ ಹೊಂದಿದ್ದೇನೆ, ಅವರ ದಿನಾಂಕ ನಿಗದಿಗಾಗಿ ಕಾಯುತ್ತಿರುವೆ, ಅದೇ ರೀತಿ ಕೊಳ್ಳೇಗಾಲದ ಎಂಜಿಎಸ್‌ವಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಅನೇಕ ಸಚಿವರನ್ನು ಆಹ್ವಾನಿಸಿ ಬೖಹತ್ ಹಂತದ ಕಾರ್ಯಕ್ರಮ ರೂಪಿಸಬೇಕೆಂಬ ಚಿಂತನೆ ಮಾಡಿದ್ದೆನೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ತಾಲೂಕಿನ ಚಿಲಕವಾಡಿಯಲ್ಲಿ ಅಯೋಜಿಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಯಳಂದೂರು ಪಟ್ಟಣದಲ್ಲಿ 33 ಕೋಟಿ ರು. ವೆಚ್ಚದಲ್ಲಿ ತಾಲೂಕು ಆಸ್ಪತ್ರೆ ಕಟ್ಟಜ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ. ಅದೇ ರೀತಿಯಲ್ಲಿ ಕೊಳ್ಳೇಗಾಲದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 48ಕೋಟಿ ಬಿಡುಗಡೆಯಾಗಿದೆ. ಮುಡಿಗುಂಡ ಸೇತುವಗೆ 15ಕೋಟಿ, ವಿವಿಧ ನೀರಾವರಿ ಯೋಜನೆಗಳಿಗೆ 120ಕೋಟಿ, ಮೆಲ್ಲಳ್ಳಿ ಗೇಟ್ ಬಳಿ ಅಗ್ನಿಶಾಮಕ ಠಾಣೆ, ಯಳಂದೂರು ಮಾರುಕಟ್ಟೆ ಸ್ಥಾಪನೆ ಹೀಗೆ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ಕಾರ್ಯಕ್ರಮ ಶೀಘ್ರದಲ್ಲೆ ನಡೆಸಲು ಮುಂದಾಗಿದ್ದು ಈಸಂಬಂಧ ಮುಖ್ಯಮಂತ್ರಿಗಳ ಬಳಿ ದಿನಾಂಕ ನಿಗದಿಗೆ ಮನವಿ ಮಾಡಲಾಗಿದೆ ಎಂದರು.

ಚಿಲಕವಾಡಿಯಲ್ಲಿ 1 ಕೋಟಿ ರು. ಅಂದಾಜು ವೆಚ್ಚದ ವಿದ್ಯುತ್ ಉಪಘಟಕ ಕಚೇರಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಮುಖ್ಯರಸ್ತೆಯಲ್ಲಿ ಕಚೇರಿ ಪ್ರಾರಂಭವಾದರೆ ರೈತರು ಲಿಖಿತ ದೂರು ನೀಡಲು, ತಮ್ಮ ಸಮಸ್ಯೆಗಳ ಕುರಿತು ಖುದ್ದು ಅಧಿಕಾರಿಗಳನ್ನು ಬೇಟಿ ಮಾಡಿ ಮನವಿ ಸಲ್ಲಿಸಲು ಅನುಕೂಲವಾಗಲಿದೆ. ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಜನಪರ ಕಾರ್ಯಕ್ರಮ ಸಾಧ್ಯ, ಕಾಂಗ್ರೆಸ್ ನುಡಿದಂತೆ ನಡೆದಿದೆ, ಮುಂದಿನ ದಿನಗಳಲ್ಲೂ ಕ್ಷೇತ್ರದ ಅಭಿವೖದ್ದಿಗಾಗಿ ಹೆಚ್ಚಿನ ಅನುದಾನ ತರುವಲ್ಲಿ ಶ್ರಮಿಸುವೆ ಎಂದರು.

ನಾನು ನಿಮ್ಮೆಲ್ಲರ ಶಾಸಕ:

ನಿಮ್ಮ ಸೇವಕನಾದ ನಾನು ನಿಮ್ಮೆಲ್ಲರ ಶಾಸಕರಾಗಿದ್ದೇನೆ, ಕ್ಷೇತ್ರದ ಸಮಗ್ರ ಅಭಿವೖದ್ದಿಗೆ ನನ್ನ ಕೈಲಾದ ಮಟ್ಟಿಗೆ ಪ್ರಮಾಣಿಕ ಪ್ರಯತ್ನ ಮಾಡಿದ್ದೆನೆ,ಮತದಾರರು ಮನವಿ ಸಲ್ಲಿಸಿದ ಅನೇಕ ಕೆಲಸ ಕಾರ್ಯಗಳಿಗೆ ಸ್ಪಂದಿಸಿದ್ದೇನೆ. ಮತದಾರರ ಮನವಿಗೆ ಸ್ಪಂದಿಸಿ ಶ್ರಮಿಸಿದೇನೆ.ಕ್ಷೇತ್ರದ ಸಮಗ್ರ ಅಭಿವೖದ್ದಿಗೆ ನಾನು ಸ್ಪಂದಿಸುವೆ ಎಂದು ಶಾಸಕ ಕೃಷ್ಣಮೂರ್ತಿ ಹೇಳಿದರು.

ಕೆಲಸ ಮಾಡುವ ಸರ್ಕಾರ

ಸರ್ಕಾರದ ಸಮಗ್ರ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಿ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತಿರುವ ನನಗೆಇನ್ನಷ್ಟು ಬಲತುಂಬಬೇಕು . ನನ್ನ ಕೆಲಸ ಗಮನಿಸಿ ಮುಂದಿನ ದಿನಗಳಲ್ಲೂ ಪರಿಗಣಿಸಿ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋನಿಗರಹಳ್ಳಿ ವೇದಾವತಿ ಮೇಲ್ಸೇತುವೆ ಬಿರುಕು
ಪರಿಸರ ಸಂರಕ್ಷಣೆ, ರೈತರ ಆರ್ಥಿಕಾಭಿವೃದ್ಧಿಗೆ 5 ಸಾವಿರ ಸಸಿ ವಿತರಣೆ: ರೋಟರಿ ಅಧ್ಯಕ್ಷ ಲೋಕೇಶ್