ಸಿಎನ್‍ಸಿಯಿಂದ 16ನೇ ವರ್ಷದ ಗನ್ ಕಾರ್ನಿವಲ್ ತೋಕ್ ನಮ್ಮೆ

KannadaprabhaNewsNetwork |  
Published : Dec 22, 2025, 02:45 AM IST
ಚಿತ್ರ :  18ಎಂಡಿಕೆ2 :  ಸಿಎನ್‍ಸಿ ಆಶ್ರಯದಲ್ಲಿ ನಡೆದ 16ನೇ ವರ್ಷದ ಗನ್ ಕಾರ್ನಿವಲ್. | Kannada Prabha

ಸಾರಾಂಶ

ಮೂರ್ನಾಡಿನ ಬಲಂಬೇರಿಯ ಖಾಸಗಿ ರೆಸಾಟ್‌ನ ಹತ್ತಿರ 16ನೇ ವರ್ಷದ ಗನ್‌ ಕಾರ್ನಿವಲ್‌ ತೋಕ್‌ ನಮ್ಮೆ ಯಶಸ್ವಿಯಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಿಎನ್‍ಸಿ ಆಶ್ರಯದಲ್ಲಿ ಮೂರ್ನಾಡಿನ ಬಲಂಬೇರಿಯ ಖಾಸಗಿ ರೆಸಾರ್ಟ್ ನ ಹತ್ತಿರ 16ನೇ ವರ್ಷದ ಗನ್ ಕಾರ್ನಿವಲ್ - ತೋಕ್ ನಮ್ಮೆ ಯಶಸ್ವಿಯಾಗಿ ನಡೆಯಿತು. ಗನ್ ಕಾರ್ನಿವಲ್ ತೋಕ್ ನಮ್ಮೆಗೆ ಆಗಮಿಸುವವರೆಲ್ಲರೂ ಸಾಕಷ್ಟು ಪ್ರಮಾಣದ ತೋಕ್/ಗನ್‍ಗಳೊಂದಿಗೆ ಬಂದು ತೋಕ್ ಪ್ರದರ್ಶನಕ್ಕೆ ಮೆರಗು ನೀಡಿ ಸಹಕರಿಸಿದರು. ಡಿ.18 ರಂದು ಗುರುವಾರ ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಅಲ್ಪಸಂಖ್ಯಾತರ ಹಕ್ಕುಗಳ ದಿನದಂದು ಸಿಎನ್‍ಸಿ ತನ್ನ 16ನೇ ವಾರ್ಷಿಕ ಸಾರ್ವಜನಿಕ ಗನ್ ಕಾರ್ನಿವಲ್-ತೋಕ್ ನಮ್ಮೆಯನ್ನು ಮುರ್ನಾಡ್‍ನ ಬಲಂಬೇರಿ ರಸ್ತೆಯ ಬಳಿ ಕಡಿಯತ್ನಾಡ್ ಗಡಿರೇಖೆಯ ಸನಿಹ ಚೇನಂಡ ಪೃಥ್ವಿಯವರ ಕಾಫಿ ಕ್ಯಾಸಲ್ ಕೂರ್ಗ್ ರೆಸಾರ್ಟ್‍ನಲ್ಲಿ ಜಾನಪದ ಸಂಭ್ರಮ ಮತ್ತು ಉತ್ಸಾಹದೊಂದಿಗೆ ಆಚರಿಸಲಾಯಿತು.

ಈ ಕಾರ್ಯಕ್ರಮವು ಸಿಎನ್‍ಸಿ ಮುಖ್ಯಸ್ಥ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆಯಿತು. ಆಚರಣೆಯ ಅಂಗವಾಗಿ, ಪೂಜೆಗಾಗಿ ಬಂದೂಕುಗಳನ್ನು ಹೂವುಗಳಿಂದ ಅಲಂಕರಿಸಿ, ವಾಹನದಲ್ಲಿರಿಸಿ ದುಡಿಕೋಟ್ ಪಾಟ್‍ನೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಶೂಟಿಂಗ್ ಸ್ಪರ್ಧೆಗಳು ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕೊಡವತಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ನಂದಿನೆರವಂಡ ನಿಶಾ ಅಚ್ಚಯ್ಯ ಶ್ರೀ ಬಾಚರಣಿಯಂಡ ಅಪ್ಪಣ್ಣ ವಿರಚಿತ ತೋಕ್‍ಪಾಟ್ ಹಾಡಿದರು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಆದಿಮ ಸಂಜಾತ ಆನಿಮಿಸ್ಟಿಕ್‌ ನಂಬಿಕೆಯ ಏಕಜನಾಂಗೀಯ ಕೊಡವರ ಧಾರ್ಮಿಕ ಸಂಸ್ಕಾರವಾದ ತೋಕ್‌ - ಗನ್‌ ಹಕ್ಕನ್ನು ಸಿಖ್ಖರ ಕಿರ್ಪಾಣ್‌ ಮಾದರಿಯಲ್ಲಿ ಸಂವಿಧಾನದ 25-26 ನೇ ವಿಧಿ ಪ್ರಕಾರ ಏಸೆನಿಸಿಯಲ್‌, ರಿಲೀಜಿಯಸ್‌ ಅಕ್ಟಿವಿಟೀಸ್‌ ಆಕ್ಟ್‌ ನಡಿಯಲ್ಲಿ ಶಾಶ್ವತ ರಾಜ್ಯಾಂಗ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.ಕೊಡವ ವಿಭೂಷಣ ಪ್ರಶಸ್ತಿಗೆ ಭಾಜನರಾದವರು: ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕಗ್ಗಟ್‌ ನಾಡ್‌ ಹಿರಿಯ ನಾಗರೀಕರ ವೇದಿಕೆಯ ಅಧ್ಯಕ್ಷರು, ಕುಕ್ಕೇರ ಜಯ ಚಿಣ್ಣಪ್ಪ, ಹಿರಿಯ ಸಮಾಜ ಸೇವಕರು, ಜಮ್ಮಡ ಪ್ರೀತ್‌ ಅಯ್ಯಣ್ಣ, ಮೈಸೂರು, ಬೊಟ್ಟಂಗಡ ಸವಿತಾ ಪೆಮ್ಮಯ್ಯ, ಸಾಮಾಜಿಕ ಕಾರ್ಯಕರ್ತೆ, ತೆರಾಲು ಗ್ರಾಮ, ಅಪ್ಪಚ್ಚೀರ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಕೊಳಕೇರಿ, ಪ್ರತಿಕೂಲ ಪರಿಸ್ಥಿತಿಯಲ್ಲೂ ಸಿಎನ್‌ ಸಿ ಗನ್‌ ಕಾರ್ನಿವಲ್‌ ಗೆ ಹಲವಾರು ವರ್ಷಗಳಿಂದ ಆಶ್ರಯದಾತರು. ಕೋಳೇರ ರಾಜು ನರೇಂದ್ರ, ನಡಿಕೇರಿ, ಅಂಜಿಗೇರಿ ನಾಡಿನ ಮುಚ್ಚಿ ಹೋದ ಬುದ್ರೋಡೆ ನಾಡ್‌ ಮಂದ್ ಗೆ ಮರುಜೀವ ಕಲ್ಪಿಸಿದವರು, ಮೇದುರ ಪೂವಯ್ಯ, ಸೂರ್ಲಬ್ಬಿ ನಾಡಿನ ಹೆಸರಾಂತ ಕೊಡವ ಜಾನಪದ ಕಲಾತಜ್ಞರು, ಬೊಳ್ಳಿಮಾಡ ಲೆಫ್ಟಿನೆಂಟ್‌ ನಂಜಪ್ಪ, ನಿವೃತ್ತ ಸೇನಾಧಿಕಾರಿ ಹಾಗೂ ತಿತಿಮತಿಯ ಸಮಾಜ ಸೇವಕರು, ಬಾಚೆಟ್ಟಿರ ಮಿಟ್ಟು ಬೊಳ್ಯಪ್ಪ, ನಿವೃತ್ತ ಕೃಷಿ ವಿಜ್ಞಾನಿಗಳು, ಕಿಗ್ಗಾಲು, ಬಟ್ಟಿರ ವೇಣು ನಾಚಪ್ಪ, ನಾಟಿ ವೈದ್ಯರು, ಚೆಟ್ಟಳ್ಳಿ.ತೋಕ್‌ ನಮ್ಮೆ ವಿಜೇತರು : ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಶ್ರೀ ನೆಲ್ಲಮಕ್ಕಡ ವಿವೇಕ್ ಮೊದಲ ಸ್ಥಾನ ಗಳಿಸಿದರಲ್ಲದೇ, ಮ್ಯಾನ್‍ಆಫ್ ದಿ ಇವೆಂಟ್ ಮೆಡಲ್‍ಗೆ ಭಾಜನರಾದರು. ಪುಗ್ಗೇರ ರಾಜೇಶ್‌, ಮಚ್ಚಂಡ ನೀಲ್‌ ಬೆಳ್ಯಪ್ಪ, ನೆಲ್ಲಮಕ್ಕಡ ವಿನೋದ್‌, ಮಚ್ಚಂಡ ನಾಣಯ್ಯ, ಮಂದಪಂಡ ಮನೋಜ್‌, ಪುತ್ತರಿರ ನಂಜಪ್ಪ, ಮಚ್ಚಂಡ ಹ್ಯಾಪಿನ್‌, ಜಮ್ಮಡ ಪ್ರೀತ್‌ ಅಯ್ಯಪ್ಪ, ಮಂದಪಂಡ ರಚನಾ ಮನೋಜ್‌, ಚೋಳಪಂಡ ಜ್ಯೋತಿ ನಾಣಯ್ಯ, ಪುತ್ತರಿರ ವನಿತಾ ಮುತ್ತಪ್ಪ, ಪುಲ್ಲೇರ ಸ್ವಾತಿ, ಬೊಟ್ಟಂಗಡ ಸವಿತಾ ಗಿರೀಶ್ ವಿಜೇತರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?