ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸಿಎನ್‌ಸಿ ಸತ್ಯಾಗ್ರಹ

KannadaprabhaNewsNetwork |  
Published : Nov 08, 2025, 02:45 AM IST
ಚಿತ್ರ :  7ಎಂಡಿಕೆ3 : ಕೊಡವ ಲ್ಯಾಂಡ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಿಎನ್‌ಸಿ ಸತ್ಯಾಗ್ರಹ ನಡೆಸಲಾಯಿತು.  | Kannada Prabha

ಸಾರಾಂಶ

ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಸಮುದಾಯಕ್ಕೆ ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯದ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಸಮುದಾಯಕ್ಕೆ ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯದ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಸಿತು.ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಿದ ಸದಸ್ಯರು, ಕೊಡವಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು. ಕೊಡವರ ಸಾಂಪ್ರದಾಯಿಕ ಗನ್ (ತೋಕ್) ವಿನಾಯಿತಿಯನ್ನು ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಬೇಕು. ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಬೇಕು, ಕೊಡವರ ರಾಜಕೀಯ ಸಬಲೀಕರಣಕ್ಕೆ ಸೂಕ್ತ ಪ್ರಾತಿನ್ನಿಧ್ಯ ಕಲ್ಪಿಸಬೇಕು. ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದ ಎನ್.ಯು.ನಾಚಪ್ಪ, ಜಿಲ್ಲಾಡಳಿತದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕಾಗಿ ‘ಸಂಘ’ ಕ್ಷೇತ್ರದ ಮಾದರಿಯಲ್ಲಿ ವಿಶೇಷ ಕೊಡವ ಸಂಸದೀಯ ಮತ್ತು ಕೊಡವ ವಿಧಾನಸಭಾ ಕ್ಷೇತ್ರಗಳನ್ನು - ಅಮೂರ್ತ ವರ್ಚುವಲ್ ಕ್ಷೇತ್ರಗಳನ್ನು ರಚಿಸಬೇಕು. ವಿದೇಶಿ ರಾಜರು ಮತ್ತು ಬ್ರಿಟಿಷ್ ಆಡಳಿತಗಾರರಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ಅಥವಾ ವಶಪಡಿಸಿಕೊಂಡ ಪೂರ್ವಜರ ಆಸ್ತಿಗಳ ಪುನಃಸ್ಥಾಪನೆ ಮಾಡಬೇಕು. ಸ್ವಾಧೀನ, ಮುಟ್ಟುಗೋಲು, ಅಡಮಾನ, ಬಲವಂತದ ಹರಾಜು ಅಥವಾ ಇತರ ಅನ್ಯಾಯದ ವಿಧಾನಗಳ ಮೂಲಕ ತೆಗೆದುಕೊಂಡ ಎಲ್ಲ ಕೊಡವ ಭೂಮಿಯನ್ನು ವಿಶ್ವಸಂಸ್ಥೆಯ ಆದಿಮಸಂಜಾತ ಜನರ ಆಸ್ತಿ ಮರುಪಡೆಯುವಿಕೆ ಕಾನೂನಿನಡಿಯಲ್ಲಿ ಮೂಲ ಆದಿಮಸಂಜಾತ ಕೊಡವ ಮಾಲೀಕರಿಗೆ ಹಿಂದಿರುಗಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು.ಚೋಳಪಂಡ ನಾಣಯ್ಯ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಮುದ್ದಿಯಡ ಲೀಲಾವತಿ, ಅರೆಯಡ ಗಿರೀಶ್, ಕಾಂಡೇರ ಸುರೇಶ್, ಮಂದಪಂಡ ಮನೋಜ್, ಬೇಪಡಿಯಂಡ ಬಿದ್ದಪ, ಚಂಗಂಡ ಚಾಮಿ ಪಳಂಗಪ್ಪ, ಕೂಪದಿರ ಸಾಬು, ಪುಟ್ಟಿಚಂಡ ಡಾನ್ ದೇವಯ್ಯ, ಅಪ್ಪಾರಂಡ ಪ್ರಸಾದ್, ಮೇದುರ ಕಂಠಿ, ಬೊಟ್ಟಂಗಡ ಜಪ್ಪು, ನಂದಿನೆರವಂಡ ಅಯ್ಯಣ್ಣ, ಮುದ್ದಂಡ ಗಪ್ಪಣ್ಣ, ನಂದಿನೆರವಂಡ ಅಪ್ಪಯ್ಯ, ಚೋಳಪಂಡ ನಾಣಯ್ಯ, ನಾಪಂಡ ಲೋಹಿತ್, ಮುದ್ದಂಡ ಸೋಮಯ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹಮಂತ್ರಿ, ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ, ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಕಾನೂನು ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!