ಹೂವಿನಹಡಗಲಿ: ಸೌಹಾರ್ದ ಸಹಕಾರಿ ಕಾಯ್ದೆಗೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಪಟ್ಟಣದ ನಿತ್ಯಾಶ್ರೀ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಮುಂದೆ ಸಹಕಾರಿ ಧ್ವಜಾರೋಹಣ ನೆರವೇರಿಸುವ ಆಚರಿಸಲಾಯಿತು.
ಕರ್ನಾಟಕದಲ್ಲಿ 6500ಕ್ಕೂ ಅಧಿಕ ಸೌಹಾರ್ದ ಸಹಕಾರಿಗಳು ಕಾರ್ಯ ನಿರ್ವಹಿಸುತ್ತಿವೆ. ನೇರವಾಗಿ 60 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿ ₹50 ಸಾವಿರ ಕೋಟಿಗಿಂತ ಅಧಿಕ ಠೇವಣಿ ಸಂಗ್ರಹಿಸಿ ₹40 ಸಾವಿರ ಕೋಟಿ ಸಾಲವನ್ನು ನೀಡಿ ಜನರಿಗೆ ಸಣ್ಣ ವ್ಯಾಪಾರಸ್ಥರಿಗೆ ಸಹಕಾರಿಯಾಗಿದೆ ಎಂದರು.
25 ವರ್ಷಗಳ ಹಿಂದೆ ಖಾಸಗಿ ಹಣಕಾಸು ಲೇವಾದೇವಿ ಸಂಸ್ಥೆಗಳ ಆರ್ಭಟವನ್ನು ನಿಧಾನವಾಗಿ ಹೋಗಲಾಡಿಸುವಲ್ಲಿ ಸೌಹಾರ್ದ ಸಹಕಾರಿಗಳ ಪಾತ್ರ ಅತ್ಯಂತ ಮಹತ್ವದ ಆಗಿದೆ. ಜನಸಾಮಾನ್ಯರು ಈ ಚಳವಳಿ ಕಡೆ ಒಲವು ತೋರಿಸಿದ್ದಾರೆ. ಇಂತಹ ಚಳವಳಿ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ ಎಂದರು.ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳ ಹಾಗೇ ಕೇವಲ ಲಾಭದ ಗುರಿ ಹೊಂದದೇ ಸಾಮಾಜಿಕ ಕಳಕಳಿ ಮುಖಾಂತರ ಸಹಕಾರಿಗಳನ್ನು ಸದೃಢಗೊಳಿಸುವಲ್ಲಿ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸರ್ಕಾರವು ಇಂತಹ ಮಹತ್ವವಾದ ಚಳವಳಿಯನ್ನು ಹತ್ತಿಕ್ಕಲು ಇನ್ನಿಲ್ಲದ ಕಸರತ್ತು ಮಾಡಿ, ಕಾನೂನು ಸುತ್ತೋಲೆಗಳ ಮೂಲಕ ತನ್ನ ವಶಕ್ಕೆ ಪಡೆದುಕೊಳ್ಳಲು ಯೋಚಿಸುತ್ತಿರುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಕೆ. ಸಂತೋಷ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.