ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ತಮ್ಮ ವಯೋನಿವೃತ್ತಿಯ ನಂತರ ಶಿರಾಳಕೊಪ್ಪ ಬಸವೇಶ್ವರ ಬ್ಯಾಂಕ್‌ನಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ೩೩ ವರ್ಷ ಸೇವೆ ಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ನಿವೃತ್ತಿ ಹೊಂದಿರುವ ನನಗೆ ಹೆಮ್ಮೆ ಇದೆ. ನಮ್ಮ ಇಲಾಖೆಯಲ್ಲಿ ರಾಜಕೀಯ ಅತ್ಯಂತ ಪ್ರಮುಖಪಾತ್ರ ವಹಿಸುವ ಕಾರಣ ದಿಂದ ಇಲ್ಲಿ ಸೇವೆ ಸಲ್ಲಿಸುವುದು ಅಷ್ಟು ಸುಲಭದ ಮಾತಲ್ಲ. ಸೇವೆಯಲ್ಲಿ ಒಂದು ನೋಟೀಸನ್ನೂ ಪಡೆಯದೇ ನಿವೃತ್ತಿ ಹೊಂದುತ್ತಿರುವುದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.
ಬ್ಯಾಂಕಿನ ಲೆಕ್ಕ ಪರಿಶೋಧಕ ಶಿವಮೊಗ್ಗ ನರೇಂದ್ರ ಮಾತನಾಡಿ, ವಾಸುದೇವ ಅವರು ಒಬ್ಬ ಸಾಮಾನ್ಯ ಹಾಗೂ ಸರಳ ವ್ಯಕ್ತಿ ಆಗಿದ್ದರು. ಯಾರು ಯಾವುದೇ ಸಂದರ್ಭದಲ್ಲಿ ಹೋದರೂ ಸಮಾಧಾನದಿಂದ ಕೆಲಸ ಮಾಡಿಕೊಟ್ಟು ಕಳಿಸುತ್ತಿದ್ದರು ಎಂದರು.ಬ್ಯಾಂಕಿನ ಹಿರಿಯ ನಿದೇರ್ಶಕ ಚಂದ್ರಮೌಳಿ ಮಾತನಾಡಿ, ಅಧಿಕಾರಕ್ಕೆ ಅಂಟಿಕೊಳ್ಳದೇ ಯಾವುದೇ ಸಂದರ್ಭದಲ್ಲಿ ಹೋದರೂ ಸ್ಪಂದಿಸುವ ಅವರ ಗುಣ ಎಲ್ಲರಿಗೂ ಮೆಚ್ಚಿಗೆ ಆಗಿತ್ತು. ನಿವೃತ್ತಿ ಹೊಂದಿದರೂ ತಮ್ಮ ಸಲಹೆ ಸಹಕಾರ ನಮಗೆ ಸದಾ ದೊರಕುವಂತಾಗಲಿ ಎಂದು ತಿಳಿಸಿ ಶುಭ ಕೋರಿದರು.
ಈ ವೇಳೆ ನಿದೇರ್ಶಕರಾದ ಉಮೇಶ್, ನಿವೇದಿತಾ ಮಾತನಾಡಿ, ನೇಮಕಾತಿ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸಿ ಮಾಗದರ್ಶನ ಮಾಡಿ ಸಹಕಾರ ನೀಡಿದ ಅವರನ್ನು ಬ್ಯಾಂಕಿನಿಂದ ಸನ್ಮಾನಿಸುತ್ತಿರುವುದು ಹೆಮ್ಮೆ ತಂದಿದೆ ಎಂದರು.ಬ್ಯಾಂಕಿನ ಉಪಾಧ್ಯಕ್ಷ ಮಹಾಗಣಪತಿ, ಸಹಕಾರ ಅಭಿವೃದ್ಧಿ ಅಧಿಕಾರಿ ಅರವಿಂದ ನಿರ್ದೇಶಕರಾದ ಡಾ.ಮುರುಘರಾಜ್, ನಟರಾಜ್, ಶೇಷಗಿರಿ, ಅಶೋಕ, ಆನಂದಪ್ಪ, ಷಣ್ಮುಕಪ್ಪ, ಕಾರ್ಯದರ್ಶಿ ಮಹದೇವ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.