ಕನ್ನಡಪ್ರಭ ವಾರ್ತೆ ಪಾಂಡವಪುರ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್) ಎರಡು ಸಹ ರೈತ ಎರಡು ಕಣ್ಣುಗಳಂತೆ ಕೆಲಸ ಮಾಡುತ್ತಿವೆ. ವರ್ಗೀಸ್ ಕುರಿಯನ್ ಅವರು ಹೈನುಗಾರಿಕೆ ಆರಂಭಿಸದಿದ್ದರೆ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗುತ್ತಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ಡೇರಿಗಳು ಜೀವಂತವಾಗಿ ಕೆಲಸ ಮಾಡುವ ಮೂಲಕ ಲಕ್ಷಾಂತರ ಕುಟುಂಬಗಳ ಬದುಕು ನಿರ್ವಹಣೆಗೆ ಬೆಂಬಲವಾಗಿ ನಿಂತಿವೆ ಎಂದರು.
ಡಿಸಿಸಿ ಬ್ಯಾಂಕ್ ಹಾಗೂ ಮನ್ಮುಲ್ ಒಕ್ಕೂಟಗಳಲ್ಲಿ ಕೆಲಸ ಮಾಡುವಂತಹ ಅಧಿಕಾರಿಗಳು ಇಂತಹ ತರಬೇತಿ ಕಾರ್ಯಗಾರಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಮೂಲಕ ರೈತರ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.ಸಹಕಾರಿ ಕ್ಷೇತ್ರದಲ್ಲಿ ನಾವು ಎಷ್ಟು ದಿನ ಕೆಲಸ ಮಾಡಿದವು ಎಂಬುದು ಮುಖ್ಯವಲ್ಲ. ರೈತರಿಗೆ ಅನುಕೂಲವಾಗುವ ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ. ಏನೇ ಮಾಡಿದರೂ ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ. ನಮ್ಮ ಕೆಲಸಗಳನ್ನು ದೇವರು ಮೆಚ್ಚಿಕೊಂಡರೆ ಸಾಕು ಎಂದರು.
ಇದೇ ವೇಳೆ ಸಹಕಾರಿ ಬ್ಯಾಂಕ್ ಹಾಗೂ ಸಂಘಗಳಲ್ಲಿ ಕೆಲಸ ಮಾಡುವಂತಹ ಅಧಿಕಾರಿಗಳು ಜಿಎಸ್‌ಟಿ, ಟಿಡಿಎಸ್ ಪಾವತಿಸುವ ವಿಚಾರ, ರೈತರಿಗೆ ಸಾಲ ಸೌಲಭ್ಯಗಳ ಕುರಿತು ಕಾನೂನು, ನಿಯಮಗಳ ಬಗ್ಗೆ ಉಪನ್ಯಾಸ ನೀಡಿದರು.
ಈ ವೇಳೆ ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕರಾದ ವಿ.ಎಸ್.ನಿಂಗೇಗೌಡ, ಎಸ್.ನಾಗೇಂದ್ರ, ರಾಜ್ಯ ಸಹಕಾರ ಮಹಾಮಂಡಲದ ಕಾರ್ಯದರ್ಶಿ ಲಕ್ಷ್ಮೀಪತಯ್ಯ, ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಸಿ.ವನಜಾಕ್ಷಿ, ಎಚ್.ಎಸ್.ಸಂತೋಷ್ ಕುಮಾರ್, ಸಹಕಾರಿ ಒಕ್ಕೂಟದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ.ಶಿವಕುಮಾರ್, ವ್ಯವಸ್ಥಾಪಕ ಎಂ.ಆರ್.ಪ್ರಮೋಧನ್, ಸಿಬ್ಬಂದಿ ವೆಂಕಟರಾಮು, ನಂದಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.