ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್- ಬಿಜೆಪಿ ಸರ್ಕಾರಗಳು ಕೇವಲ ಆದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಅವುಗಳಿಗೆ ಅನುದಾನ ಬಿಡುಗಡೆ ಮಾಡಿ ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಮೈತ್ರಿ ಪಕ್ಷಗಳು ಯಾವ ಕೊಡುಗೆಗಳ ಮಾನದಂಡಗಳ ಮೇಲೆ ಹೋಗಿ ಮತ ಕೇಳುತ್ತಿವೆ. ಇದನ್ನು ಜನತೆ ಪ್ರಶ್ನೆ ಮಾಡಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದರು.ತಾಲೂಕಿನ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರದ ಸಭೆಗಳಲ್ಲಿ ಮಾತನಾಡಿದರು. ಸುಳ್ಳುಪಳ್ಳು ಹೇಳಿ ನಿಮ್ಮ ಮುಂದೆ ಕಾಂಗ್ರೆಸ್ ಪಕ್ಷದವರು ಬಂದಿಲ್ಲ ಚುನಾವಣೆಗೆ ಪೂರ್ವದಲ್ಲಿ ಏನು ಹೇಳಿದ್ದೇವೆ ಅದನ್ನು ಜಾರಿ ಮಾಡಿದ್ದೇವೆ ಎಂದರು.
ಮನೆ ಬಾಡಿಗೆ ಕಟ್ಟದ ವರ್ತೂರುಬೆಂಗಳೂರಿನ ಸಂಜಯ್ ನಗರದಲ್ಲಿ ಸ್ವಂತ ಮನೆ ಇದೆ ಅಂತ ಹೇಳಿಕೊಂಡಿದ್ದ ವರ್ತೂರು ಪ್ರಕಾಶ್‌ರ ಮನೆಯು ಬಾಡಿಗೆದ್ದಾಗಿದೆ, ಕಳೆದ ಐದು ವರ್ಷದಿಂದ ಬಾಡಿಗೆ ಕೊಟ್ಟಿಲ್ಲ ಅಂತ ಮನೆ ಮಾಲೀಕರ ಪೋಲಿಸ್ ದೂರು ಕೊಟ್ಟಿದ್ದಾರೆ ದಾಖಲೆಗಳ ಸಮೇತವಾಗಿ ಇದೆ ಇವತ್ತು ಅವರನ್ನು ಕೋರ್ಟ್ ಮೂಲಕ ಮನೆಯಿಂದ ಹೊರ ಹಾಕುವ ಪರಿಸ್ಥಿತಿ ಬಂದಿದೆ. ಇದು ಅವರ ಸಾಧನೆ ಜನ ಯೋಚನೆ ಮಾಡಬೇಕಾಗಿದೆ ಎಂದು ತಿಳಿಸಿದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಸುಳ್ಳಿಗೆ ಇನ್ನೊಂದು ಹೆಸರು ವರ್ತೂರು ಪ್ರಕಾಶ್ ೨೦೧೩ ರಿಂದ ೨೦೧೮ ರವರೆಗೆ ಸಿದ್ದರಾಮಯ್ಯರ ಸರ್ಕಾರ ಇದ್ದಾಗ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಮಾಡಿದ್ದು ಅದನ್ನೇ ಇವತ್ತು ಎಲ್ಲಾ ಕಡೆಯಲ್ಲಿ ಹೇಳಿಕೊಂಡು ನಾನು ಅಭಿವೃದ್ಧಿ ಮಾಡಿದ್ದು ಬೇರೆ ಯಾವ ಶಾಸಕರು ಮಾಡದ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ.ಜಾತಿ ಸಂಘರ್ಷ ಮಾಡಿಲ್ಲ
ಆದರೆ ಹಿಂದೆ ಶಾಸಕರಾಗಿದ್ದ ಬೈರೇಗೌಡರು, ಕೃಷ್ಣಬೈರೇಗೌಡ, ಶ್ರೀನಿವಾಸಗೌಡ, ಕೊತ್ತೂರು ಮಂಜುನಾಥ್ ಅವರು ಹಳ್ಳಿಗಳಲ್ಲಿ ಯುವಕರಿಗೆ ರಾತ್ರಿಯಲ್ಲಿ ಗುಂಡು, ತುಂಡು ಕೊಟ್ಟು ಹಾಳು ಮಾಡಿಲ್ಲ. ಜಾತಿ ಜಾತಿಗಳ ಮಧ್ಯೆ ಸಂಘರ್ಷ ಮಾಡಿಲ್ಲ. ವರ್ತೂರು ಪ್ರಕಾಶ್ ಶಾಸಕರಾಗಿ ಸಚಿವರಾಗಿ ಕ್ಷೇತ್ರದಲ್ಲಿ ಏನಾದರೂ ಒಂದೇ ಒಂದು ಹೈಸ್ಕೂಲ್, ಐಟಿಐ, ಡಿಪ್ಲೊಮಾ, ಪಿಯುಸಿ, ಡಿಗ್ರಿ ಕಾಲೇಜು ಮಾಡಿದ್ದಾರಾ ಬಹಿರಂಗ ಪಡಿಸಬೇಕು ಎಂದು ಸವಾಲು ಹಾಕಿದರು.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೋಲಾರ ಕ್ಷೇತ್ರದಲ್ಲಿ ಹೈಸ್ಕೂಲ್, ಅಂಗನವಾಡಿ ಕೇಂದ್ರಗಳು, ಹೋಬಳಿ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾಡಿದ್ದಾರೆ. ವರ್ತೂರು ಪ್ರಕಾಶ್‌ರನ್ನು ಕಳೆದ ಎರಡು ಚುನಾವಣೆಗಳಲ್ಲಿ ಮೂರನೇ ಸ್ಥಾನಕ್ಕೆ ಕ್ಷೇತ್ರದ ಜನತೆ ಕಳುಹಿಸಿದ್ದಾರೆ. ಅದರೂ ಬುದ್ದಿ ಕಲಿಯಲಿಲ್ಲ. ವರ್ತೂರ್‌ಗೆ ಚುನಾವಣೆಯಲ್ಲಿ ಮತ್ತೊಮ್ಮೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.‘ಮೈತ್ರಿ’ ಸುಳ್ಳು ನಡೆಯೋಲ್ಲ
ಕಳೆದ ಕೋಮುಲ್ ಚುನಾವಣೆಯಲ್ಲಿ ವೇಮಗಲ್ ಭಾಗದ ಮೈತ್ರಿ ಅಭ್ಯರ್ಥಿ ಜನಘಟ್ಟ ಕೃಷ್ಣಪ್ಪರ ಪರವಾಗಿ ವರ್ತೂರು ಪ್ರಕಾಶ್ ಮತ್ತು ಸಿಎಂಆರ್ ಶ್ರೀನಾಥ್ ಚುನಾವಣೆ ಪೂರ್ವದಲ್ಲಿ ಕೊಟ್ಟಿದ್ದ ಹಣವನ್ನು ಸೋತ ನಂತರ ವಸೂಲಿ ಮಾಡಿದ್ದಾರೆ. ಅಂತಹ ಮೈತ್ರಿಗಳ ಬಗ್ಗೆ ಹೆಚ್ಚು ಮಾತು ಅವಶ್ಯಕತೆ ಇಲ್ಲ, ಅವರ ಸುಳ್ಳು ಈ ಭಾಗದಲ್ಲಿ ನಡೆಯಲ್ಲ ಎಂದರು.ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಜಿಪಂ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ತಾಲೂಕು ಅಧ್ಯಕ್ಷ ಮುನಿಯಪ್ಪ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಮೈಲಾಂಡಹಳ್ಳಿ ಮುರಳಿ, ಖಾದ್ರಿಪುರ ಬಾಬು ಮತ್ತಿತರರು ಇದ್ದರು..