ಕನ್ನಡಪ್ರಭ ವಾರ್ತೆ ಹೊನ್ನಾವರ
ಕರಾವಳಿ ಪ್ರತಿಬಿಂಬದ ಸಂಚಾಲಕ ಜಿ.ಎಸ್. ಹೆಗಡೆ ಕುಮಟಾ ಮಾತನಾಡಿದರು. ಈ ಸಂದರ್ಭ ಸ್ಪರ್ಧಾ ಸಂಘಟನೆಯ ಮುಖ್ಯ ಸಂಯೋಜಕ ಎಸ್. ಎನ್. ಹೆಗಡೆ, ಈಶ್ವರ ಭಟ್, ಡಾ. ಕೇಶವ ಕಿರಣ ಮತ್ತಿತರರಿದ್ದರು.
ಉದ್ಘಾಟನೆ:ಕರಾವಳಿ ಪ್ರತಿಬಿಂಬ ಕಾರ್ಯಕ್ರಮ ಜು. 12ರಂದು ಬೆಳಗ್ಗೆ 9 ಗಂಟೆಯಿಂದ ಪಟ್ಟಣದ ಎಸ್.ಡಿ.ಎಮ್. ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ ಎಂದು ಮಹಾಸಭಾದ ನಿರ್ದೇಶಕ ಆರ್.ಜಿ. ಹೆಗಡೆ ಹೊಸಾಕುಳಿ, ಅರುಣ ಹೆಗಡೆ ಕುಮಟಾ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ಎಸ್. ಡಿ. ಎಂ. ಕಾಲೇಜಿನ ಪ್ರಾಚಾರ್ಯ ಜಿ, ಎನ್. ಭಟ್ ಭಾಗವಹಿಸುವರು. ಹೊಸಾಕುಳಿಯ ಆರ್. ಜಿ. ಹೆಗಡೆ, ಅಧ್ಯಕ್ಷತೆ ವಹಿಸುವರು.
ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹವ್ಯಕ ಸಮಾಜದ ಆರು ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದ್ದಾರೆ.